Video; ಜಂಭ ಕೊಚ್ಚಿಕೊಳ್ಳುತ್ತಿದ್ದ ಆಟಗಾರನ ಕೊಂಬನ್ನು ಕ್ಷಣದಲ್ಲೇ ಮುರಿದು ಬಾಲ್ ಬಾಸ್ಕೆಟ್ ನಲ್ಲಿ ಹಾಕಿದ ಹುಡುಗಿಯ ಚಪಲತೆ ನೋಡಿ…
ಮಕ್ಕಳಿಗೆ ಆಟಗಳಲ್ಲಿ ದೊಡ್ಡವರಿಗಿಂತಲೂ ಅನುಭವ ಕಡಿಮೆ ಇರುತ್ತದೆ, ಆದರೆ ಚಪಲತೆ ಹಾಗೂ ಚಾಣಾಕ್ಷತನದಲ್ಲಿ ದೊಡ್ಡವರಿಗಿಂತಲೂ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಮೇಲಿನ ಉದಾಹರಣೆಗೆ ಸರಿಹೊಂದುವ ವಿಡಿಯೋ ಒಂದು ಜೋರಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಾನೇ ಸೂಪರ್ ಆಟಗಾರ ಎಂದು ಬಿಂಬಿಸಿಕೊಳ್ಳುತ್ತಿರುವ ಮತ್ತು ವಯಸ್ಸಿನಲ್ಲಿ ದೊಡ್ಡವನಾದ ಜಂಭದ ಆಟಗಾರನ ಕೊಂಬನ್ನು ಕ್ಷಣಾರ್ಧದಲ್ಲಿ ಹುಡುಗಿಯೊಬ್ಬಳು ಮುರಿದು ಮಣ್ಣುಮುಕ್ಕಿಸಿದ್ದಾಳೆ, ಹೇಗೆ ನೋಡಿ.
ಪ್ರಸ್ತುತ ವಿಡಿಯೋದಲ್ಲಿ ಒಬ್ಬಳು ಹುಡುಗಿ ಹಾಗೂ ಆಕೆಗಿಂತಲೂ ದೊಡ್ಡವನಾದ ಯುವಕ ಬಾಸ್ಕೆಟ್ ಬಾಲ್ ಆಟವನ್ನು ಆಡುತ್ತಿದ್ದಾರೆ. ಮೊದಲು ಹುಡುಗಿಯು ಬಾಲನ್ನು ಯುವಕನಿಂದ ತಪ್ಪಿಸಿಕೊಂಡು ಬಾಸ್ಕೆಟ್ ಬಾಲ್ ಹೂಪ್ ಕಡೆಗೆ ಒಯ್ಶಲು ಪ್ರಯತ್ನಿಸುತ್ತಾಳೆ. ಆಗ ಆ ಯುವಕ ಕ್ಷಣಮಾತ್ರದಲ್ಲಿ ಹುಡುಗಿಯ ಪ್ರಯತ್ನವನ್ನು ವಿಫಲ ಮಾಡುತ್ತಾನೆ, ಹಾಗೂ ದೊಡ್ಡದಾದ ಗೆಲುವು ಸಾಧಿಸಿದಂತೆ ಒಂದೇ ಸಮನೆ ಜೋರು ಜೋರಾಗಿ ಎದೆಯನ್ನು ಬಡಿದುಕೊಂಡು ಕುಹಕ ನಗೆ ಬೀರುತ್ತಾನೆ. ಇದರಿಂದ ಹುಡುಗಿಯು ಯಾವುದೇ ರೀತಿಯ ಭಾವನೆಯನ್ನು ವ್ಯಕ್ತ ಮಾಡದೆ ಎರಡನೇ ಬಾರಿ ಪ್ರಯತ್ನಕ್ಕೆ ಇಳಿಯುತ್ತಾಳೆ.
ಈ ಪ್ರಯತ್ನದಲ್ಲಿ ಹುಡುಗಿಯು ತನ್ನ ಚಾಣಾಕ್ಷತನ ಹಾಗೂ ಚಪಲತೆಯನ್ನು ಬಳಸಿಕೊಳ್ಳುತ್ತಾಳೆ. ತುಂಬಾ ಜೋಶ್ ನಲ್ಲಿದ್ದ ಯುವಕನ ಜೊತೆಗೆ ಒಂದು ಕೈ ನೋಡುವಾಗ ಹುಡುಗಿಯು ಆತನಿಗೆ ಹಾಡು ಹಗಲಲ್ಲೇ ಚುಕ್ಕೆಗಳನ್ನು ತೋರಿಸಿದ್ದಾಳೆ. ಚಂಡನ್ನು ಪುಟಿದೆಬ್ಬಿಸುತ್ತಾ ಒಂದೆಡೆಗೆ ಹೋದಂತೆ ಮಾಡಿ ಮಿಂಚಿನ ವೇಗದಲ್ಲಿ ಗರ್ರನೆ ತಿರುಗಿದಾಗ ಯುವಕ ಧರೆಗೆ ಉರುಳಿದ್ದಾನೆ. ಮತ್ತು ಹುಡುಗಿ ಸಹಜವಾಗಿ ಬಾಲ್ ಬಾಸ್ಕೆಟ್ ನಲ್ಲಿ ಹಾಕಲು ಯಶಸ್ವಿಯಾಗುತ್ತಾಳೆ. ಈ ಚಾಲೆಂಜ್ ನೋಡುತ್ತಿದ್ದ ಅಲ್ಲಿಯ ಆಟಗಾರರು ಯುವಕನ ಪರಿಸ್ಥಿತಿಗೆ ಕೇಕೆ ಹಾಕಿ ಕುಣಿದಿದ್ದೆ ಕುಣಿದಿದ್ದು. ಯಾವಾಗಲೂ ಯಾವುದೇ ಪರಿಸ್ಥಿತಿಯಲ್ಲೂ ಎದುರಿನವರನ್ನು ಎಂದಿಗೂ ಕಡಿಮೆ ತಿಳಿದುಕೊಳ್ಳಬಾರದೆಂಬ ಉತ್ತಮ ಪಾಠವನ್ನು ಈ ವಿಡಿಯೋ ಹೇಳಿಕೊಡುತ್ತದೆ.
ವಿಡಿಯೋ ನೋಡಿ
Never mess with a woman! 💪pic.twitter.com/TP4lvWq5Ek
— Figen (@TheFigen) July 26, 2022
ಈ ಸುಂದರವಾದ ವಿಡಿಯೋವನ್ನು ಟ್ವಿಟರ್ ನಲ್ಲಿ @TheFigen ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 8 ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 2.5 ಲಕ್ಷಕ್ಕಿಂತಲೂ ಹೆಚ್ಚು ಲೈಕ್ಸ್ ಗಳನ್ನು ಪಡೆದಿದೆ.