Video: ಜನ್ಮದಿನದಂದು ಕೇಕ್ ಹಿಡಿದು ನಟಿ ಕಾಜೋಲ್ ಮನೆಗೆ ಬಂದ ಅಭಿಮಾನಿಗಳು: ನಟಿಯ ವರ್ತನೆ ನೋಡಿ ಸಿಟ್ಟಾದ ಅಭಿಮಾನಿಗಳು
ಬಾಲಿವುಡ್ ಸೆಲೆಬ್ರಿಟಿಗಳಿಗೆ ಅಭಿಮಾನಿಗಳು ತುಂಬಾ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ. ಕೆಲವೊಂದು ಸಲ ಇದೇ ಅಭಿಮಾನಿಗಳು ತಮ್ಮ ನೆಚ್ಚಿನ ನಟ ನಟಿಯರ ಮೇಲೆ ಬೇಸರಗೊಳ್ಳುತ್ತಾರೆ. ಮೊನ್ನೆ ಇದೇ ರೀತಿಯ ಒಂದು ಘಟನೆಯ ವಿಡಿಯೋ ಬಾಲಿವುಡ್ ನಿಂದ ವೈರಲ್ ಆಯಿತು. ಇದನ್ನು ನೋಡಿದ ನೆಟ್ಟಿಗರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 5 ರಂದು ಕಾಜಲ್ ಳ ಹುಟ್ಟುಹಬ್ಬವಿತ್ತು. ಕಾಜಲ್ ಅವರ ಫ್ಯಾನ್ಸ್ ಮತ್ತು ಫ್ರೆಂಡ್ಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹಾಗೆಯೇ ಕೆಲವು ಅಭಿಮಾನಿಗಳು ಅವರ ಮನೆಯ ಹೊರಗೆ ಜಮಾಯಿಸಿದ್ದರು. ಅದೇ ಸಂದರ್ಭದಲ್ಲಿ ಕಾಜಲ್ ತಮ್ಮ ಮನೆಯಿಂದ ಹೊರಗೆ ಬಂದು ಅಭಿಮಾನಿಗಳು ತಂದ ಕೇಕ್ ಕಟ್ ಮಾಡಿದ್ದಾರೆ. ಇದೇ ಸಂದರ್ಭದ ವೈರಲ್ ಆಗಿರುವ ವಿಡಿಯೋ ನೋಡಿ ಕೆಲವರು ಕಾಜಲ್ ಅವರಿಗೆ ರೂಡ್ ಎನ್ನುತ್ತಿದ್ದಾರೆ.
ಬರ್ತಡೇ ವಿಡಿಯೋದಲ್ಲಿ ಏನಿದೆ?
ಕಾಜಲ್ ರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಅವರ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದರು. ಆ ಸಮಯದಲ್ಲಿ ಕಾಜಲ್ ಮಾಸ್ಕ್ ಹಾಕಿಕೊಂಡು ಅಭಿಮಾನಿಗಳನ್ನು ಭೇಟಿಯಾಗಲು ಬಂದು ಕೇಕ್ ಸಹ ಕಟ್ ಮಾಡಿದರು. ಕೇಕ್ ಕಟ್ ಮಾಡಿದ ನಂತರ ಕಾಜಲ್ ಅವರು ಅಲ್ಲಿ ಹೆಚ್ಚು ಸಮಯ ನಿಲ್ಲಲಿಲ್ಲ ಮತ್ತು ಎಲ್ಲರಿಗೂ ಕೈಜೋಡಿಸಿ ನಮಸ್ಕರಿಸಿ ಅಲ್ಲಿಂದ ಒಳಗೆ ಹೋದರು. ಕೊರನಾ ಪೆಂಡೆಮಿಕ್ ನಿಂದಾಗಿ ಕಾಜಲ್ ಅಭಿಮಾನಿಗಳಿಂದ ಸ್ವಲ್ಪ ದೂರವೇ ಇದ್ದರು. ಕೇಕ್ ಕಟ್ ಮಾಡಿದ ನಂತರ ಕಾಜಲ್ ಅವರು ಅದನ್ನು ತಿನ್ನದೇ ಹಾಗೆಯೇ ಒಳಹೋದರು. ಇದೇ ವಿಷಯ ನೆಟ್ಟಿಗರಿಗೆ ಸರಿ ಎನ್ನಿಸಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಕಾಜಲ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಈ ವಿಡಿಯೋ ಪಾಪರಾಜಿ ವೈರಲ್ ಭಯ್ಶಾನಿ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.
ವಿಡಿಯೋ ನೋಡಿ
ಈ ವಿಡಿಯೋವನ್ನು ನೋಡಿದ ಒಬ್ಬ ಯೂಸರ್, ಕಾಜಲ್ ಸ್ವಲ್ಪವೂ ಖುಷಿಯಲ್ಲಿ ಕಾಣಿಸುತ್ತಿಲ್ಲ, ‘ಪಾಪ ಈ ಜನರು ಸುಮ್ಮನೆ ತಮ್ಮ ಟೈಮ್ ವೇಸ್ಟ್ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾನೆ. ಇನ್ನೊಬ್ಬನು ‘ಜನರು ಇವರಿಗಾಗಿ ತಮ್ಮ ಹಣ ಮತ್ತು ಸಮಯ ಯಾಕೆ ಹಾಳು ಮಾಡುತ್ತಿದ್ದಾರೆ? ಅವರು ಸ್ವಲ್ಪವೂ ಬೆಲೆ ಕೊಡುವುದಿಲ್ಲ’ ಎಂದಿದ್ದಾನೆ. ಒಬ್ಬ ಯೂಸರ್ ನಂತೂ ‘ಬಡವನ ಕೇಕ್ ಸಹ ತಿಂದಿಲ್ಲ’ ಎಂದಿದ್ದಾನೆ.