Video : ಜಿಂಕೆ ಮರಿಯನ್ನು ನಾಯಿಗಳಿಂದ ರಕ್ಷಿಸಿದ ಹಿಪ್ಪೋ, ನಂತರ ಜಿಂಕೆ ಮರಿಯನ್ನು ತಾನೇ ಕೊಂ#ದು ಹಾಕಿತು!!!
ಸಾಮಾನ್ಯವಾಗಿ ನಾವು ನೀರು ಕುದುರೆ(ಹಿಪ್ಪೋ) ಯನ್ನು ಪ್ರಾಣಿಸಂಗ್ರಾಲಯಲ್ಲಿ ನೋಡುತ್ತೇವೆ. ಹಿಪ್ಪೋ ವಿನ ಹಲವಾರು ಬಗೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಾವು ನೋಡಿದ್ದೇವೆ. ಎಷ್ಟೋ ಸಲ ಹಿಪ್ಪೋ ಮೊಸಳೆಯ ಬಾಯಿಂದ ಝೀಬ್ರಾವನ್ನು ರಕ್ಷಿಸಿರುವದನ್ನು ನಾವು ನೋಡಿದ್ದೇವೆ ಅಷ್ಟೇ ಅಲ್ಲ ಅನೇಕ ಪ್ರಾಣಿಗಳನ್ನು ಸಹ ಮೊಸಳೆಯ ದವಡೆಯಿಂದ ರಕ್ಷಣೆ ಮಾಡಿ ಅವುಗಳನ್ನು ಸುರಕ್ಷಿತವಾಗಿ ದಡದ ವರೆಗೆ ತಲುಪಿಸುವ ಕಾರ್ಯ ಹಿಪ್ಪೋ ಮಾಡುತ್ತದೆ.
ಹಿಪ್ಪೋ ಅಂದರೆ ಸಾಕು ದೊಡ್ಡದಾದ ಮೈಕಟ್ಟು ಮತ್ತು ದೊಡ್ಡದಾದ ಬಾಯಿ. ಅದರ ಬಾಯಿ ಸಂಪೂರ್ಣವಾಗಿ ಸರಳ ಕೋನ ಅಂದರೆ ಸುಮಾರು 180 ಅಂಶದಷ್ಟು ಬಾಯಿ ತೆರೆಯುತ್ತದೆ ಹೀಗಾಗಿ ಅದರ ದವಡೆಯಲ್ಲಿ ಯಾವುದೇ ಪ್ರಾಣಿ ಸಿಕ್ಕರೆ ನೋಡು ನೋಡುವಷ್ಟರಲ್ಲಿ ಚುರಾಗುತ್ತದೆ. ಏಕೆಂದರೆ ಹಿಪ್ಪೋಗೆ ಅಷ್ಟೊಂದು ಹಲ್ಲುಗಳು ಇರುವದಿಲ್ಲ ಆದರೆ ಇರುವಂತ ಹಲ್ಲುಗಳು ತುಂಬಾ ಸ್ಟ್ರಾಂಗ್ ಮತ್ತು ಹರಿತವಾಗಿರುತ್ತದೆ. ಒಂದು ಸಲ ಬಾಯಿ ತೆರೆದು ಜೋರಾಗಿ ಮುಚ್ಚಿದರೆ ಬಾಯಲ್ಲಿದ್ದ ಯಾವುದೇ ವಸ್ತು ಪುಡಿ ಪುಡಿಯಾಗುತ್ತದೆ.
ಸದ್ಯಕ್ಕೆ ಹಿಪ್ಪೋವಿನ ಒಂದು ವಿಚಿತ್ರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಏಕೆಂದರೆ ಸದಾ ಪ್ರಾಣಿಗಳನ್ನು ರಕ್ಷಣೆ ಮಾಡುವ ಹಿಪ್ಪೋ ಎಂದು ಗುರುತಿಸಲ್ಪಡುವ ಹಿಪ್ಪೋ ಈ ಬಾರಿ ಮಾತ್ರ ಒಂದು ಪ್ರಾಣಿಯನ್ನು ರಕ್ಷಣೆ ಮಾಡುವದರ ಜೊತೆಗೂ ಅದರ ಜೀವವನ್ನು ಸಹ ತಗೆದುಕೊಂಡಿದೆ. ಪ್ರಸ್ತುತ ವೀಡಿಯೋದಲ್ಲಿ ಹಿಪ್ಪೋವಿನ ವಿಚಿತ್ರ ಸ್ವಭಾವ ನೀವು ನೋಡಬಹುದು.
ಈ ವೀಡಿಯೋದಲ್ಲಿ ಒಂದು ಕೆಸರಿನ ಹೊಂಡದ ಬಳಿಯಲ್ಲಿ ಕೆಲವು ನಾಯಿಗಳು ಒಂದು ಜಿಂಕೆಯ ಮರಿಯನ್ನು ಬೇಟೆ ಯಾಡಲು ಪ್ರಯತ್ನ ಮಾಡುತ್ತಿರುತ್ತವೆ ಆದರೆ ಈ ಜಿಂಕೆ ಮರಿ ಅವುಗಳ ಬಾಯಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ. ಇದನ್ನು ದೂರದಿಂದ ಕಂಡ ಹಿಪ್ಪೋ ಅಲ್ಲಿಂದ ಜಿಂಕೆ ಮರಿಯನ್ನು ರಕ್ಷಿಸಲು ಓಡೋಡಿ ಬರುತ್ತದೆ. ಬಂದ ಕೂಡಲೇ ಅಲ್ಲಿಯ ಕಾಡು ನಾಯಿಗಳನ್ನು ಓಡಿಸುತ್ತದೆ. ನಾಯಿಗಳನ್ನು ಓಡಿಸಿದ ತಕ್ಷಣ ಬದಿಯಲ್ಲಿದ್ದ ಜಿಂಕೆ ಮರಿ ಓಡಿ ಹೋಗಬೇಕು ಎನ್ನುವಷ್ಟರಲ್ಲಿ ಜಿಂಕೆ ಕೆಸರಿನ ಹೊಂಡದಲ್ಲಿ ಸಿಲುಕಿಕೊಳ್ಳುತ್ತದೆ ಎಷ್ಟೇ ಪ್ರಯತ್ನ ಮಾಡಿದರು ಸಹ ಕೇಸರಿನಿಂದ ಹೊರಗೆ ಬರಲು ಸಾಧ್ಯವಾಗುವದಿಲ್ಲ. ಆಗ ಹಿಪ್ಪೋ ಅದನ್ನು ಕೇಸರಿನಿಂದ ಹೊರಗಡೆ ತಗೆಯಲು ತುಂಬಾ ಪ್ರಯತ್ನ ಮಾಡುತ್ತೆ.
ಆದರೆ ಬಹಳಷ್ಟು ಸಮಯದ ವರೆಗೆ ಪ್ರಯತ್ನ ಮಾಡಿದರು ಸಹ ಜಿಂಕೆಮರಿ ಕೇಸರಿನಿಂದ ಹೊರಗಡೆ ಬರದೆ ಇದ್ದಾಗ ಹಿಪ್ಪೋ ಮನದಲ್ಲಿ ಯಾವ ವಿಚಾರ ಬಂತು ದೇವರಿಗೆ ಗೊತ್ತು. ಸಿಟ್ಟಿಗೆದ್ದ ಹಿಪ್ಪೋ ತನ್ನ ಬಾಯಿಯಿಂದ ಜೋರಾಗಿ ಜಿಂಕೆಮರಿಯನ್ನು ಎತ್ತಿ ಹೊರಗಡೆ ಒಗೆಯುತ್ತದೆ. ನಮಗೆಲ್ಲಾ ಗೊತ್ತಿರುವ ಒಮ್ಮೆ ಹಿಪ್ಪೋವಿನ ಬಾಯಲ್ಲಿ ಸಿಕ್ಕ ಜೀವಿ ಯಾವತ್ತೂ ಜೀವಂತ ವಿರುವದಿಲ್ಲ ಅಂತ. ಅದೇ ಪ್ರಕಾರವಾಗಿ ಜಿಂಕೆ ಮರಿ ಸಹ ಕ್ಷಣದಲ್ಲಿಯೇ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತದೆ. ಹಿಪ್ಪೋ ಜಿಂಕೆಮರಿಯನ್ನು ಉಳಿಸಲು ಈ ತರಹ ಮಾಡಿತ್ತೋ ಅಥವಾ ಅದಕ್ಕೆ ಸಾಯಿಸಲು ಪ್ರಯತ್ನ ಮಾಡಿತ್ತೋ ಅನ್ನೊದು ಒಂದು ಪ್ರಶ್ನೆಯಾಗಿದೆ.
ವೀಡಿಯೋ ನೋಡಿ.
ಪ್ರಸ್ತುತ ವೀಡಿಯೋ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ wildwilduniverse ಎಂಬ ಹೆಸರಿನ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ನಲ್ವತ್ತು ಸಾವಿರಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು ಐದುನೂರಕ್ಕಿಂತ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ.