Video: ಜಿರಾಫಿನ ಬೆನ್ನಟ್ಟುವ ವಿಡಿಯೋ ನೋಡಿದ ನೆಟ್ಟಿಗರು ಅಂತಿದ್ದಾರೆ “ಜಿರಾಫ್ ಜೊತೆಗೆ ಕಿರಿಕ್ ಬೇಡವೇ ಬೇಡ!”

ಜಿರಾಫ್ ಇದೊಂದು ಶಾಂತ ಮತ್ತು ನಾಚಿಕೆಯುಳ್ಳ ಸ್ವಭಾವದ ಪ್ರಾಣಿಯಾಗಿದೆ. ಆದ್ದರಿಂದ ಜಿರಾಫ್ ಈ ಪ್ರಾಣಿಯು ಗಾಡಿಯನ್ನು ಹಿಂಬಾಲಿಸಿ ಇಲ್ಲ ಬೆನ್ನಟ್ಟಿ ಬರುವದು ಸಿಟ್ಟಿಗೆದ್ದು ಹೊಡೆಯಲು ಬರುವದು ಹೀಗೆಲ್ಲ ಯೋಚಿಸಲಿಕ್ಕೆ ಸಾಧ್ಯವೇ ಇಲ್ಲ, ಯಾಕೆಂದರೆ ಮುಖ್ಯತ: ಅದರ ಸ್ವಭಾವವೇ ಹಾಗಿಲ್ಲ.

ಈಗ ಸೋಶಿಯಲ್ ಮಿಡಿಯಾದಲ್ಲಿ ಜಿರಾಫ್ ದ ಒಂದು ವಿಡಿಯೋ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದಾಗ ಜಿರಾಫ್ ಬಗ್ಗೆ ಇದ್ದ ನಮ್ಮ ಆಲೋಚನೆಗಳು ತಲೆಕೆಳಗಾವವು. ಅಷ್ಟೇ ಅಲ್ಲ ಈ ವೀಡಿಯೋ ನೋಡಿದಾಗ ಮುಂದೇನಾಗುವದು ಎಂಬ ಭಯವೂ ನಿರ್ಮಾಣವಾಗುವದು.

ಈ ವೀಡಿಯೊವನ್ನು ಸುಧಾ ರಾಮನ್ ಹೆಸರಿನ IFS ಅಧಿಕಾರಿಯೊಬ್ಬರು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಜಿರಾಫ್ ಗಾಡಿಯ ಹಿಂದೆ ಸಿ’ಟ್ಟಿನಿಂದ ಬೆ’ನ್ನಟ್ಟಿ ಹೊ’ಡೆಯಲು ನು’ಗ್ಗಿ ಬರುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದಾರೆ.

ಜಿರಾಫೆಗೆ ಎಂದು ಕಾಡಬೇಡಿ, ಅದರ ಕಾಲುಗಳು ತುಂಬಾ ಬಲಶಾಲಿಯಾಗಿವೆ ಎನ್ನುವದಕ್ಕೆ ಈ ವೀಡಿಯೋವನ್ನು ನೋಡಿ.

ಒಂದು ಕಿಕ್ ನಿಂದ ಯಾರಿಗಾದರೂ ಕ್ಷಣದಲ್ಲೇ ಕೆಳಗೆ ಒದ್ದಾಡಿಸುವಂಥ ಶಕ್ತಿ ಜಿರಾಫ್ ಹೊಂದಿರುತ್ತದೆ. ಅದು ತುಂಬಾ ವೇಗದಿಂದ ಮತ್ತು ಆಕರ್ಷಕವಾಗಿ ಓಡುತ್ತದೆ. ಎಂದು ಈ ವೀಡಿಯೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಜೊತೆಗೆ ಈ ವಿಡಿಯೋ ಫೇಸ್ಬುಕ್ ನಲ್ಲಿಯೂ ಇದೆ ಎಂದು ಹೇಳಿದ್ದಾರೆ.

ಪ್ರಸ್ತುತ ವೀಡಿಯೋದಲ್ಲಿ ಜಿರಾಫ್ ಜೀಪಿನಲ್ಲಿ ಕುಳಿತ ವ್ಯಕ್ತಿಗಳಿಗೆ ಯಾವುದೇ ರೀತಿಯ ಹಾನಿಯನ್ನು ಮಾಡಿಲ್ಲ. ವೀಡಿಯೊವನ್ನು ನೋಡಿ ನೇಟಿಜನ್ಸ್ ಗಳು ಮಾತ್ರ ತುಂಬಾ ರೋಮಾಂಚನಗೊಂಡಿದ್ದಾರೆ. ಜಿರಾಫ್ ಇಷ್ಟೊಂದು ಸಹಜವಾಗಿ ವಾಹನವನ್ನು ಹಿಂಬಾಲಿಸುತ್ತದೆ ಎಂಬ ಅಪೇಕ್ಷೆ ಯಾರು ಮಾಡಲಿಕ್ಕಿಲ್ಲ.