Video: ಜೀವಂತ ಮೊಲವನ್ನು ನುಂಗಿದ ಹಕ್ಕಿ, ಹಕ್ಕಿಯ ಹೊಟ್ಟೆ ಬಾಕ ತನ ನೋಡಿ ದಂಗಾದ ನೆಟ್ಟಿಗರು!

ಪ್ರಕೃತಿ ಎನ್ನುವುದು ವಿಸ್ಮಯಗಳ ಆಗರ. ಪ್ರಕೃತಿ ತನ್ನ ಒಡಲಲ್ಲಿ ಅದೆಷ್ಟೋ ರಹಸ್ಯಗಳನ್ನು ಅಡಗಿಸಿಕೊಂಡಿದೆ. ಪ್ರಕೃತಿಯಲ್ಲಿ ಬಾಹ್ಯ ನೋಟಕ್ಕೆ ಕಾಣುವ ಎಲ್ಲ ಜೀವಿಗಳು ಅಥವಾ ವಸ್ತುಗಳು ಸದಾ ಕಾಲ ಹಾಗೆ ಇರುತ್ತದೆ ಹಾಗೂ ಅವುಗಳ ವರ್ತನೆಯಲ್ಲಿ ಬದಲಾವಣೆ ಆಗುವುದಿಲ್ಲ ಎಂದುಕೊಂಡರೆ ಅದು ತಪ್ಪಾಗುತ್ತದೆ. ಪ್ರಕೃತಿಯಲ್ಲಿ ಕೆಲವೊಂದು ವಿಷಯಗಳು ಎಷ್ಟು ಸುಂದರವಾಗಿ ಕಾಣುತ್ತದೆಯೋ ಕೆಲವೊಮ್ಮೆ ಅವು ನಮ್ಮ ಊಹೆಗೂ ನಿಲುಕದ ರೀತಿಯಲ್ಲಿ ನಮ್ಮ ಕಣ್ಮುಂದೆ ಬಂದು ಆಶ್ಚರ್ಯವನ್ನು ಉಂಟು ಮಾಡುತ್ತದೆ. ಪ್ರಕೃತಿ ಎಂದರೆ ಜೀವ ವೈವಿಧ್ಯತೆಗೆ ನೆಲೆಯಾಗಿದೆ. ವಿಸ್ಮಯಗಳ ಆಗರವಾಗಿರುವ ಪ್ರಕೃತಿಯಲ್ಲಿ ವಿಶೇಷವೆನಿಸುವ ಅದೆಷ್ಟೋ ಪ್ರಾಣಿ-ಪಕ್ಷಿಗಳು ತಮ್ಮ ನೆಲೆಯನ್ನು ಕಂಡು ಕೊಂಡಿದೆ. ಈ ಜೀವಿಗಳ ಬಗ್ಗೆ ಕೂಡ ಎಷ್ಟು ತಿಳಿದರೂ ಕಡಿಮೆಯೆನಿಸುತ್ತದೆ.

ಸೋಶಿಯಲ್ ಮೀಡಿಯಾಗಳಲ್ಲಿ ಆಗಾಗ ಕೆಲವು ವನ್ಯ ಜೀವಿಗಳ ಕುರಿತಾದ ದೃಶ್ಯಾವಳಿಗಳನ್ನು ಒಳಗೊಂಡಿರುವ ವಿಡಿಯೋಗಳು ವೈರಲಾಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳನ್ನು ನೋಡಿದಾಗ ನಾವು ಇಷ್ಟು ದಿನ ನೋಡುತ್ತಿದ್ದ ಜೀವಿಗಳ ಹೊಸ ರೂಪ ಅನಾವರಣಗೊಂಡಂತೆ ಭಾಸವಾಗುತ್ತದೆ. ನಮ್ಮ ಕಣ್ಣಿಗೆ ಸುಂದರವಾಗಿ ಕಾಣುತ್ತಿದ್ದ ಜೀವಿಗಳಲ್ಲಿ ಇಂತಹದೊಂದು ರೂಪವೂ ಇದೆ ಎಂದು ಆಶ್ಚರ್ಯವಾಗುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಜೀವಿಗಳು ಬದುಕಬೇಕಾದರೆ ಆಹಾರ ಸರಪಣಿ ಬಹಳ ಮುಖ್ಯವಾಗಿದೆ. ಇಲ್ಲಿ ಒಂದು ಜೀವಿ ಇನ್ನೊಂದು ಜೀವಿಯ ಮೇಲೆ ಅವಲಂಬಿತವಾಗಿದ್ದು ಉಳಿವಿಗಾಗಿ ಹೋರಾಟ ಎನ್ನುವ ಸಿದ್ಧಾಂತದ ಪ್ರಕಾರ ಜೀವನ ಸಾಗುತ್ತಿದೆ.

ಕೊಕ್ಕರೆಯಂತೆ ಕಾಣುವ ಹೆರಾನ್ ಹಕ್ಕಿಗಳನ್ನು ನೋಡಿದಾಗ ಅವುಗಳ ಸೌಂದರ್ಯ ಮನಸ್ಸಿಗೆ ಮುದವನ್ನು ನೀಡುತ್ತದೆ. ಈ ಹಕ್ಕಿಗಳು ಹಾರುವುದನ್ನು ನೋಡುತ್ತಿದ್ದರೆ ಏನೋ ಒಂದು ರೀತಿಯ ಸಂತೋಷ ಸಿಗುತ್ತದೆ. ಆದರೆ ಇದೀಗ ಮೀಡಿಯಾಗಳಲ್ಲಿ ಬಂದು ವಿಡಿಯೋ ವೈರಲ್ ಆಗಿದೆ ಅದರಲ್ಲಿ ಹೆರಾನ್ ಹಕ್ಕಿಯು ತನ್ನ ಆಹಾರಕ್ಕಾಗಿ ಒಂದು ಮೊಲದ ಮರಿಯನ್ನು ಹಿಡಿದು, ಅದನ್ನು ಜೀವಂತವಾಗಿರುವಾಗಲೇ ನಂಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ. ನೋಡುಗರು ಈ ದೃಶ್ಯವನ್ನು ನೋಡಿ ಆಶ್ಚರ್ಯವನ್ನು ವ್ಯಕ್ತ ಪಡಿಸಿದ್ದಾರೆ. ಹೆರಾನ್ ಹಕ್ಕಿಯು ಮೊಲವನ್ನು ತಿನ್ನುವ ವಿಧಾನ ನೋಡಿ ನೆಟ್ಟಿಗರು ಶಾ ಕ್ ಆಗಿದ್ದಾರೆ.

ವೀಡಿಯೋವನ್ನು ನೋಡಿದಾಗ ಹೆರಾನ್ ಹಕ್ಕಿಯೊಂದು ಆಹಾರವನ್ನು ಹುಡುಕಿ ಬಂದಿದ್ದು ಅದಕ್ಕೆ ಒಂದು ಮೊಲದ ಮರಿಯು ಕಂಡಿದೆ. ಹಕ್ಕಿಯು ಮೊಲವನ್ನು ತಿನ್ನಲು ಪ್ರಯತ್ನಿಸಿದೆ. ಬದುಕಿರುವ ಮೊಲವನ್ನು ಕೊಕ್ಕಿನಿಂದ ಕುಕ್ಕಿ ಕುಕ್ಕಿ , ಎತ್ತಿಕೊಂಡು ಇಡೀ ಮೊಲದ ಮರಿಯನ್ನು ಬಾಯಲ್ಲಿ ಹಾಕಿಕೊಂಡು ನಂಗುವ ಪ್ರಯತ್ನ ಮಾಡಿದೆ ಹೆರಾನ್. ಹಕ್ಕಿಯು ಹೀಗೆ ಮೊಲವನ್ನು ತಿನ್ನುವ ವಿಡಿಯೋ ಒಂದು ಕ್ಷಣ ಕೆಲವರಿಗೆ ಬೇಸರವನ್ನು ಮೂಡಿಸಿದರು ಕೂಡಾ ಪ್ರಕೃತಿಯಲ್ಲಿ ಜೀವಿಗಳ ಉಳಿವಿಗೆ ನಡೆಯುವ ಸಾಮಾನ್ಯ ಪ್ರಕ್ರಿಯೆ ಇದು ಎಂಬುದು ಕೂಡ ವಾಸ್ತವವಾಗಿದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು 14 ಲಕ್ಷಕ್ಕಿಂತಲೂ ಹೆಚ್ಚಿನ ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ 8 ಸಾವಿರಕ್ಕಿಂತ ಅಧಿಕ ಮಂದಿ ಮೆಚ್ಚುಗೆ ನೀಡಿದ್ದಾರೆ. ಸಾವಿರಾರು ಜನರು ಕಾಮೆಂಟ್ ಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಡಿಯೋ ನೋಡಿದವರಲ್ಲಿ ಒಬ್ಬರು ಇದನ್ನು ನೋಡಲು ಕಷ್ಟವೆನಿಸುತ್ತದೆ, ಆದರೆ ಇದು ಪ್ರಕೃತಿಯ ನಿಯಮ ಎಂದಿದ್ದಾರೆ. ಮತ್ತೊಬ್ಬರು ಯೂಟ್ಯೂಬ್ ಇಂಥ ವಿಡಿಯೋಗಳಿಗೆ ಅನುಮತಿ ಹೇಗೆ ನೀಡುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಮರಿ ಮೊಲವು ಹಕ್ಕಿಯ ಹೊಟ್ಟೆಯನ್ನು ಸೇರುವವರೆಗೂ ಕೂಡ ಬದುಕಿತ್ತೋ, ಏನೋ?? ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ