Video; ಟೀಚರ್ “ತನ್ನ ಫೇವರೆಟ್ ಸ್ಟೂಡೆಂಟ್ ಯಾರು? ಈ ಬಾಕ್ಸ್ ನಲ್ಲಿ ಇಣುಕಿ ಗೊತ್ತಾಗುತ್ತೆ” ಎಂದಾಗ, ವಿದ್ಯಾರ್ಥಿಗಳಿಗೆ ಕಾದಿತ್ತು ಅಲ್ಲಿ ಆಶ್ಚರ್ಯ!
ಗುರು ಶಿಷ್ಯರ ನಡುವಿನ ಅಮೋಘ ಸಂಬಂಧವನ್ನು ತೋರಿಸುವ ಅನೇಕ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ನೋಡುತ್ತೇವೆ. ಈಗ ಗುರು ಶಿಷ್ಯರ ಪವಿತ್ರವಾದ ಸಂಬಂಧವನ್ನು ತೋರಿಸುವ ಮತ್ತು ತುಂಬಾ ವಿಶೇಷವಾದ ವಿಡಿಯೋ ಒಂದು ಸದ್ಯ ಇಂಟರ್ನೆಟ್ ನಲ್ಲಿ ಜೋರಾಗಿ ವೈರಲ್ ಆಗುತ್ತಿದೆ.
ವಿದ್ಯಾರ್ಥಿ ತನ್ನ ಜೀವನದಲ್ಲಿ ಏನಾದರೂ ಅದ್ಭುತ ಪ್ರಗತಿಯನ್ನು ಸಾಧಿಸಿದ್ದೇ ಆದರೆ ಅದರ ಹಿಂದೆ ಆತನ ಗುರುವಿನ ಶಕ್ತಿ, ಕಲಿಕೆ ನಿಶ್ಚಿತವಾಗಿಯೂ ಇರುತ್ತದೆ ಎಂಬ ಈ ಮಾತನ್ನು ಯಾರಿಗೂ ತಳ್ಳಿ ಹಾಕಲು ಸಾಧ್ಯವಿಲ್ಲ. ಅನೇಕ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಒಳ್ಳೆಯ ಭವಿಷ್ಯಕ್ಕಾಗಿ ಹಗಲು ರಾತ್ರಿ ಪರಿಶ್ರಮ ಪಡುತ್ತಿರುತ್ತಾರೆ. ಜೊತೆಗೆ ಅವರು ಮಕ್ಕಳಿಗಾಗಿ ಶಾಲೆಯಲ್ಲಿ ಅನೇಕ ಒಳ್ಳೊಳ್ಳೆಯ ಉಪಕ್ರಮಗಳನ್ನು ಸಹ ಆಯೋಜನೆ ಮಾಡುತ್ತಾರೆ. ಇದೇ ರೀತಿಯ ಒಂದು ಒಳ್ಳೆಯ ಉಪಕ್ರಮ ಟೀಚರ್ ತಮ್ಮ ಶಾಲೆಯಲ್ಲಿ ಆಯೋಜನೆ ಮಾಡಿದ್ದಾರೆ. ಈ ಚಟುವಟಿಕೆ ಮಕ್ಕಳಲ್ಲಿ ತುಂಬಾ ಒಳ್ಳೆಯ ಸಂದೇಶವನ್ನು ರವಾನೆ ಮಾಡಿದೆ ಎಂದರೆ ಸುಳ್ಳಲ್ಲ. ಮಕ್ಕಳ ಸುಂದರ ಹಾವಭಾವವನ್ನು ದರ್ಶಿಸುವ ಈ ವಿಡಿಯೋ ಕ್ಲಿಪ್ ನೇಟಿಜನ್ಸ್ ಗಳ ಮನಸ್ಸನ್ನು ಗೆಲ್ಲುವದರ ಜೊತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡುವ ಹಾಗೂ ತಮಾಷೆಯ ವಿಡಿಯೋ ಸಹ ಇದಾಗಿದೆ.
ಟೀಚರ್ ವಿದ್ಯಾರ್ಥಿಗಳಿಗೆ, ತನ್ನ ಫೇವರಿಟ್ ಸ್ಟೂಡೆಂಟ್ ಯಾರಿದ್ದಾರೆ ಎಂಬುದನ್ನು ತಿಳಿಯಲು ಎಲ್ಲರೂ ಆ ಚೇರ್ ಮೇಲೆ ಇಟ್ಟ ಬಾಕ್ಸ್ ನಲ್ಲಿ ಇಣುಕಿ ನೋಡಿ ನಿಮಗೆ ಗೊತ್ತಾಗುತ್ತೆ ಎನ್ನುತ್ತಾರೆ. ಶಿಕ್ಷಕರ ಫೇವರಿಟ್ ಸ್ಟೂಡೆಂಟ್ ಯಾರಿರಬಹುದು ಎಂಬದನ್ನು ತಿಳಿದುಕೊಳ್ಳುವ ಕುತೂಹಲ ಮಕ್ಕಳಲ್ಲಿ ನಿರ್ಮಾಣವಾಯಿತು. ಮತ್ತು ಆ ಪ್ರಕಾರ ಒಬ್ಬೊಬ್ಬರಾಗಿ ಚೇರ್ ಮೇಲೆ ಇಟ್ಟ ಆ ಬಾಕ್ಸ್ ನಲ್ಲಿ ಇಣುಕಲು ಶುರು ಮಾಡುತ್ತಾರೆ. ಹೇಗೆ ವಿಡಿಯೋ ಮುಂದೆ ಮುಂದೆ ಸಾಗುತ್ತದೆ ಹಾಗೆ ಮಕ್ಕಳು ಒಬ್ಬೊಬ್ಬರಾಗಿ ಆ ಬಾಕ್ಸ್ ನಲ್ಲಿ ಇಣುಕಿ ನೋಡುತ್ತಾರೆ, ಮತ್ತು ತಕ್ಷಣ ಮುಖದ ಮೇಲೆ ಸುಂದರವಾದ ನಗುವನ್ನು ಬೀರುತ್ತಾ ತಮ್ಮ ಸ್ಥಳಕ್ಕೆ ಮರಳಿ ಹೋಗುತ್ತಾರೆ.
ಮೊದಮೊದಲಂತೂ ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಅಷ್ಟು ಬೇಗನೆ ಗೊತ್ತಾಗುವುದಿಲ್ಲ. ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ ಯಾಕೆ ನಗುತ್ತಿದ್ದಾನೆ ಎಂಬುದು ಬೇಗ ಗಮನಕ್ಕೆ ಬರುವುದಿಲ್ಲ. ನಂತರ ಗೊತ್ತಾಗುತ್ತದೆ ಅಲ್ಲಿ ಒಂದು ಕನ್ನಡಿ ಇರುತ್ತದೆ, ಆ ಕನ್ನಡಿಯಲ್ಲಿ ಮಕ್ಕಳು ತನ್ನನ್ನು ನೋಡಿದಾಗ ಗೊತ್ತಾಗುತ್ತದೆ ತಾನೇ ಟೀಚರ್ ಳ ಫೇವರಿಟ್ ವಿದ್ಯಾರ್ಥಿ ಇದ್ದೇನೆಂದು. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಬಾಕ್ಸಿನಲ್ಲಿ ಇಣುಕಿ ನೋಡಿದ ನಂತರ ಮುಗುಳುನಗುತ್ತಾ ಬರುತ್ತಿರುತ್ತಾನೆ.
ನೋಡಿ ಈ ಸುಂದರವಾದ ಸಂದೇಶ ನೀಡುವ ಸೂಪರ್ ವಿಡಿಯೋ.
This teacher told his students to look inside the box to see who his favorite student is.. 😊
🎥 IG: troll_ogretmen pic.twitter.com/YJKxtu6Pwn
— Buitengebieden (@buitengebieden) May 7, 2022
ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 1.5 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ಅದೇ ರೀತಿ ನೇಟಿಜನ್ಸ್ ಗಳು ವರ್ಗದಲ್ಲಿಯ ವಿದ್ಯಾರ್ಥಿಗಳಿಗಾಗಿ ಈ ರೀತಿಯ ಮನರಂಜನೆಯ ಚಟುವಟಿಕೆ ತೆಗೆದುಕೊಂಡಿದ್ದಕ್ಕೆ ಶಿಕ್ಷಕರ ಪ್ರಶಂಸೆಯನ್ನು ಮಾಡಿದ್ದಾರೆ.