Video; ಟೆರೆಸ್ ಮೇಲೆ ಹುಡುಗಿಯರಿಬ್ಬರೂ ಸೀಕ್ರೆಟ್ ವಿಡಿಯೋ ಮಾಡುವದರಲ್ಲಿ ಮಗ್ನ! ಒಮ್ಮೆಲೆ ಮುಂದೇನಾಯಿತು ನೋಡಿ…

ಸದ್ಯದ ಸಮಯದಲ್ಲಿ ನೀವು ಏನೇ ಮಾಡಲಿ, ಮಾಡುವ ಮೊದಲು ತುಂಬಾ ಹುಷಾರಾಗಿರಬೇಕು. ಕಾರಣ ಈ ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರ ಕೈಯಲ್ಲಿ ಕ್ಯಾಮೆರಾ ಇದೆ. ಅವರ ಕ್ಯಾಮೆರಾದಲ್ಲಿ ನಾವು ಯಾವಾಗ, ಎಲ್ಲಿ, ಯಾವ ರೀತಿಯಲ್ಲಿ ಸಿಕ್ಕು ಶೂಟ್ ಆಗಿ ಬಿಡುತ್ತೇವೆ ಗೊತ್ತಿಲ್ಲ. ಸದ್ಯ ಇದೇ ರೀತಿಯ ಒಂದು ಮುಜುಗರದ ಅನುಭವ ಇಬ್ಬರು ಹುಡುಗಿಯರಿಗೆ ಬಂದಿದೆ. ಈ ವಿಡಿಯೋ ನೋಡಿದಾಗ ನೀವು ಸಹ ನಗುತ್ತಿರಿ.

ಈ ವಿಡಿಯೋ ದೃಶ್ಯದಲ್ಲಿ ಇಬ್ಬರೂ ಹುಡುಗಿಯರು ಟೆರೆಸ್ ಮೇಲೆ ಯಾರಿಗೂ ಗೊತ್ತಿಲ್ಲದಂತೆ ತುಂಬಾ ರಹಸ್ಯವಾಗಿ ಶಾರ್ಟ್ ವಿಡಿಯೋ ತಯಾರಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಒಬ್ಬಳು ಹುಡುಗಿ ಡಾನ್ಸ್ ಮಾಡಲು ಶುರುಮಾಡುತ್ತಾಳೆ, ಇನ್ನೊಬ್ಬಳು ಆಕೆಯ ಡಾನ್ಸ್ ಮೊಬೈಲ್ ನಲ್ಲಿ ಶೂಟ್ ಮಾಡುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಹುಡುಗಿಯು ಮೇಲಿಂದ ಮೇಲೆ ಮಾಡುತ್ತಿರುವ ಡ್ಯಾನ್ಸ್ ಸ್ಟೆಪ್ ಗಳನ್ನು ನೋಡಲು ತುಂಬಾ ಮಜಾ ಎನಿಸುತ್ತದೆ. ಇದೇ ರೀತಿ ಕೆಲವು ಕ್ಷಣಗಳು ನಡೆದಿರುವಾಗ ನೆರೆಮನೆಯವರು ಕುಣಿಯುತ್ತಿರುವ ದೃಶ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿರುವದು ಈ ಇಬ್ಬರೂ ಹುಡುಗಿಯರ ಗಮನಕ್ಕೆ ಬರುತ್ತದೆ. ನೆರೆ ಮನೆಯವರನ್ನು ಟೆರೆಸ್ ಮೇಲೆ ನೋಡಿದ್ದೇ ತಡ ಇಬ್ಬರೂ ಹುಡುಗಿಯರು ಮುಜುಗರಗೊಂಡು ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ಕಿತ್ತಿದ್ದಾರೆ.

ಹುಡುಗಿಯರು ಮುಜುಗರಪಟ್ಟು ಓಡಿಹೋದ ತಮಾಷೆಯ ಈ ವಿಡಿಯೋ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಓಡಾಡುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ memes.bks ಹೆಸರಿನ ಅಕೌಂಟ್ ನಿಂದ ಅಪ್ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದ ನೆಟ್ಟಿಗನೊಬ್ಬ, ‘ ಹುಡುಗಿಯರ ಅಪ್ಪ ನೋಡಿದಂತೆ ಕಾಣುತ್ತದೆ ಅದಕ್ಕಾಗಿಯೇ ಇಬ್ಬರೂ ಹುಡುಗಿಯರು ಅಲ್ಲಿಂದ ಓಡಿ ಹೋಗಿದ್ದಾರೆ’ ಎಂದಿದ್ದಾನೆ. ಇನ್ನೊಬ್ಬ ಯೂಸರ್, (‘ಪಾಪಾ ಕಿ ಪರಿ’) ‘ತಂದೆಯ ಪ್ರೀತಿಯ ಮಗಳು ಅಥವಾ ಏಂಜಲ್ ಬಹುಶಃ ನೆರೆಹೊರೆಯವರಿಗೆ ನೋಡಿ ಹೆದರಿ ಓಡಿ ಹೋಗಿದ್ದಾಳೆ’ ಎಂದು ಪ್ರತಿಕ್ರಿಯಿಸಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by BKS 💕💗 (@memes.bks)