Video: ಟೆರೇಸ್ ನಿಂದ ಸ್ವಿಮಿಂಗ್ ಪೂಲ್ ನಲ್ಲಿ ಜಿಗಿಯಲು ಹೋದ ಮಹಿಳೆಯ ಜೊತೆಗೆ ಏನಾಯ್ತು ನೋಡಿ!
ಮುಂಬಯಿ: ಸದ್ಯದ ಲೈಫ್ ಸ್ಟೈಲ್ ನಲ್ಲಿ ಥ್ರಿಲ್ ಸಹ ಕೆಲವರಿಗೆ ಚಾಲೆಂಜ್ ಆಗಿದೆ. ಥ್ರಿಲ್ ಯಾರಿಗೆ ಇಷ್ಟವಿಲ್ಲ? ಅದರ ಮಜಾ ಎಲ್ಲರಿಗೂ ತೆಗೆದುಕೊಳ್ಳಬೇಕೆನಿಸುತ್ತದೆ. ಕೆಲವೊಂದು ಸಲ ಈ ಮಜಾ ಸಜಾದಲ್ಲಿ ಪರಿವರ್ತನೆಯಾಗುವದು.
ಟೆರೇಸ್ ಮೇಲಿಂದ ಸ್ವಿಮಿಂಗ್ ಪೂಲ್ ನಲ್ಲಿ ಜಂಪ್ ಹೊಡೆಯುವ ಥ್ರಿಲ್ ಅನುಭವಿಸುವ ಪ್ಲಾನ್ ಮಾಡಿದ ಮಹಿಳೆಯ ಹಂಬಲ ಅವಳ ಜೀವಕ್ಕೆ ಅಪಾಯ ತಂದೊಡ್ಡಿತ್ತು.
ಟೆರೇಸ್ ನಿಂದ ಜಿಗಿಯಲು ಮಹಿಳೆ ತಯಾರಾದಳು. ಹಾಗೆ ಆಕೆ ಅಲ್ಲಿಂದ ಜಿಗಿದಳು ಸಹ. ಆದರೆ ಜಿಗಿಯುವಾಗ ಸ್ವಲ್ಪ ಹಿಂಜರಿಕೆಯಾದ ಕಾರಣ ಆಕೆಯ ವೇಗ ಕಡಿಮೆಯಾಗಿ ನೀರಿನಲ್ಲಿ ಹಾರುವ ಮುಂಚೆ ಕೆಳಗಿನ ಟೆರೇಸ್ ಗೆ ಬಡಿದು ಅಪ್ಪಳಿಸಿ ಆಮೇಲೆ ನೀರಿನಲ್ಲಿ ಜಂಪ್ ಮಾಡಿದಳು. ಟೆರೇಸ್ ಮೇಲೆ ಅಪ್ಪಳಿಸಿದ ನಂತರ ಸುತ್ತಲೂ ಸ್ವಲ್ಪ ಭಯದ ಹಾಗೂ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ಸಂಪೂರ್ಣ ಘಟನೆಯ ವಿಡಿಯೋ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
it got deleted twice on tik tok but.. this was my 4th of July /: pic.twitter.com/1BtEzA0Mtv
— Jasmine Rodriguez (@jaahmiiin) July 5, 2020
ಇದನ್ನು ಟ್ವೀಟರ್ ನಲ್ಲಿ ಇಲ್ಲಿಯವರೆಗೆ 90 ಲಕ್ಷಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. @jaahmiiin ಇವರು ಜುಲೈ 6 ಕ್ಕೆ ಶೇರ್ ಮಾಡಿದ್ದಾರೆ. ಈ ವೀಡಿಯೊವನ್ನು ಟಿಕ್ ಟಾಕ್ ನಿಂದ ಎರಡು ಸಲ ತೆಗೆದು ಹಾಕಲಾಗಿತ್ತು, ಎಂದು ಯೂಜರ್ ಹೇಳಿದ್ದಾನೆ. ಈ ವೀಡಿಯೋಗೆ ಇಲ್ಲಿಯವರೆಗೆ 78 ಸಾವಿರಕ್ಕೂ ಹೆಚ್ಚು ರೀಟ್ವೀಟ್ ಗಳು ಬಂದಿವೆ. ಮೂರು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ಮನೆಯ ಟೆರೇಸ್ ಮೇಲಿಂದ ಮಹಿಳೆ ತನ್ನ ಗೆಳೆಯನ ಜೊತೆಗೆ ಸ್ವಿಮಿಂಗ್ ಪೂಲ್ ನಲ್ಲಿ ಜಿಗಿಯಲು ಓಡುತ್ತಾಳೆ. ಪುರುಷ ಮಾತ್ರ ಸಹಜವಾಗಿ ಪೂಲ್ ನಲ್ಲಿ ಜಿಗಿದನು. ಪುರುಷನ ಜೊತೆಗೆ ಏಕಕಾಲಕ್ಕೆ ಪೂಲ್ ನಲ್ಲಿ ಜಂಪ್ ಮಾಡುವ ಸಲುವಾಗಿ ಕೆಳಗೆ ಹಾರಬೇಕೆನ್ನುವಷ್ಟರಲ್ಲಿ, ಮಹಿಳೆಯು ಹೆದರಿದ ಕಾರಣ ಪೂಲ್ ನಲ್ಲಿ ಜಿಗಿಯುವಷ್ಟು ಬೇಕಾದ ವೇಗ ಆಕೆ ಕಳೆದುಕೊಳ್ಳುತ್ತಾಳೆ. ಹೀಗಾಗಿ ಆಕೆ ಅಲ್ಲಿಯೇ ಸಮೀಪ ಜಿಗಿದ ಕಾರಣ ಕೆಳಗಿನ ಟೆರೇಸ್ ಮೇಲೆ ಅಪ್ಪಳಿಸಿ ಆಮೇಲೆ ಪೂಲ್ ನಲ್ಲಿ ಬಿಳುತ್ತಾಳೆ. ಆಕಸ್ಮಿಕವಾಗಿ ಆದ ಈ ಘಟನೆಯಿಂದ ಅಲ್ಲಿದ್ದವರು ಒಂದು ನಿಮಿಷ ಗರ ಬಡಿದವರಂತಾದಾಗ ಮುಂದೆ ಕೆಲವೇ ಕ್ಷಣದಲ್ಲಿ ನೀರಿನಿಂದ ಮಹಿಳೆ ಮೇಲೆದ್ದು ಚಿಯರ್ಸ್ ಮಾಡಿದ್ದಾಗ ಎಲ್ಲರೂ ನಗೆಗಡಲಲ್ಲಿ ಮುಳುಗಿದರು. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ತುಂಬಾ ವೈರಲ್ ಆಗುತ್ತಿದೆ.