Video; ಡ್ರಿಂಕ್ಸ್ ಜೊತೆ ಮ್ಯಾಚ್ ಎಂಜಾಯ್ ಮಾಡಲು ವ್ಯಕ್ತಿ ಮಾಡಿದ ಜುಗಾಡ್! ಸ್ಟೇಡಿಯಂ ನಲ್ಲಿ ಎಣ್ಣೆ ಒಯ್ದ ಪರಿ ನೋಡಿ…
ಈ ಜಗತ್ತಿನಲ್ಲಿ ಎಲ್ಲ ಪ್ರಕಾರದ ಜನ ನೋಡಲು ಸಿಗುತ್ತಾರೆ. ಕೆಲವರು ನಿಯಮಗಳಿಗೆ ಅನುಸರಿಸಿ ನಡೆದರೆ ಇನ್ನು ಕೆಲವರು ನಿಯಮಗಳನ್ನು ಮುರಿಯಲೆಂದೇ ಜನ್ಮ ತೆಗೆದುಕೊಂಡಿದ್ದಾರೆ ಎನಿಸುತ್ತದೆ. ಈಗ ಇಲ್ಲಿ ನೋಡುವ ವಿಡಿಯೋ ಇದೇ ರೀತಿಯದಾಗಿದೆ.
ಪ್ರಸ್ತುತ ವಿಡಿಯೋದಲ್ಲಿ ಕಂಡು ಬಂದ ದೃಶ್ಯದ ಪ್ರಕಾರ ವ್ಯಕ್ತಿಯೊಬ್ಬ ತುಂಬಿದ ಸ್ಟೇಡಿಯಂ ನಲ್ಲಿಯೇ ಎಣ್ಣೆ ಹೊಡೆಯುವ ತಯಾರಿ ಮಾಡುತ್ತಿದ್ದಾನೆ. ಆತ ತುಂಬಾ ಖುಷಿಯಲ್ಲಿಯೂ ಕಾಣುತ್ತಿದ್ದಾನೆ. ಕಾರಣ ಆತನ ಐಡಿಯಾ ವರ್ಕೌಟ್ ಆಗಿದೆ. ಹಾಗೂ ದೊಡ್ಡದಾದ ಘನಕಾರ್ಯ ಅಥವಾ ಸಾಧನೆಯೇ ಮಾಡಿದ ಖುಷಿ ಆತನ ಮುಖದ ಮೇಲೆ ಕಂಡು ಬರುತ್ತಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಸ್ಟೇಡಿಯಂ ಗಳಲ್ಲಿ ಮಧ್ಯ ತೆಗೆದುಕೊಂಡು ಹೋಗುವುದು ನಿಷೇಧವಾಗಿರುತ್ತದೆ. ಆದರೆ ಕೆಲವರಿಗೆ ಎಲ್ಲಿ ಕುಳಿತರೂ ಎಣ್ಣೆ ಮಾತ್ರ ಬೇಕೇ ಬೇಕು. ಹೀಗಾಗಿ ಎಣ್ಣೆಯನ್ನು ತೆಗೆದುಕೊಂಡು ಈ ವ್ಯಕ್ತಿ ಮಾಡಿದ ಐಡಿಯಾ ನೋಡಿ ಹೇಗಿದೆ. ಸೀಟ್ ಮೇಲೆ ಕುಳಿತು ಮೊದಲು ಸ್ಯಾಂಡ್ವಿಚ್ ತೆಗಿಯುತ್ತಾನೆ. ಆ ಸ್ಯಾಂಡ್ ವಿಚ್ ಮೇಲಿಂದ ಬ್ರೇಡ್ ತೆಗೆಯುತ್ತಲೇ ಅದರ ಕೆಳಗೆ ಎಣ್ಣೆಯ ಬಾಟಲ್ ಕಾಣಿಸುತ್ತದೆ. ಬಾಟಲ್ ಮೇಲಿರುವ ಹಸಿರೆಲೆಗಳನ್ನು ತೆಗೆದು ಬಿಸಾಕುತ್ತಾನೆ. ಆಗ ಆತನ ಮುಖ ನೋಡಬೇಕು ಎಷ್ಟೊಂದು ಆನಂದ ಆ ಮುಖದಲ್ಲಿ ತುಂಬಿಕೊಂಡಿದೆ ಎಂಬುದು ಗೊತ್ತಾಗುತ್ತದೆ. ಈ ಎಲ್ಲ ದೃಶ್ಯವೂ ಆತನಿಗೆ ಗೊತ್ತಿಲ್ಲದೆ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದೆ. ಅದು ಕೊನೆಯಲ್ಲಿ ಆತನಿಗೂ ತಿಳಿದು ಬರುತ್ತದೆ.
ಈ ದೃಶ್ಯವನ್ನು ನೋಡಿ ವಿಡಿಯೋದಲ್ಲಿ…
https://twitter.com/Unexpec1ed/status/1567830073662935041?ref_src=twsrc%5Etfw%7Ctwcamp%5Etweetembed%7Ctwterm%5E1567830073662935041%7Ctwgr%5Eaa9a35a5671d0826e11e9445f457bb69b6547382%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Fman-adopted-an-amazing-jugaad-to-bring-liquor-bottle-to-the-stadium-video-viral-au262-1453295.html
ಈ ತಮಾಷೆಯ 20 ಸೆಕೆಂಡುಗಳ ವಿಡಿಯೋವನ್ನು Unexpected Videos ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.