Video: ತನ್ನ ನಾಯಿಯನ್ನು ಹಿಡಿದ ಕಾಂಗರೂವಿನ ಮುಖದ ಮೇಲೆ ಸಾಲಿಡ್ ಪಂಚ ನೀಡಿದ ವ್ಯಕ್ತಿ, ಬೆರಗಾಗಿ ನೋಡುತ್ತಾ ನಿಂತ ಕಾಂಗರೂ!!!

ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾವಾಗ ಫೇಮಸ್ ಆಗುತ್ತಾರೆ ಅಂತ ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣ ಭಿಕ್ಷುಕರಿಗೆ ಶ್ರೀಮಂತ, ಶ್ರೀಮಂತರಿಗೆ ಭಿಕ್ಷುಕ ಮಾಡುವ ಸಾಮರ್ಥ್ಯ ಸಹ ಹೊಂದಿದೆ. ರಾಣು ಮಂಡೆಲಾ ಒಂದೇ ರಾತ್ರಿಯಲ್ಲಿ ತನ್ನ ಹಾಡಿನಿಂದ ಫೇಮಸ್ ಆಗಿ ಹಲವು ಬಾಲಿವುಡ್ ಚಿತ್ರಗಳಲ್ಲಿ ಹಾಡು ಸಹ ಹಾಡಿದ್ದಾರೆ ಇದೆಲ್ಲ ನಮಗೆ ಗೊತ್ತಿರುವ ಸಂಗತಿಯಾಗಿದೆ. ಸದ್ಯಕ್ಕೆ ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವೀಡಿಯೋ ತುಂಬಾ ಟ್ರೆಂಡ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋ ಕಾಂಗರೂ ಮತ್ತು ವ್ಯಕ್ತಿ ನಡುವೆ ನಡೆದ ಘಟನೆಯ ವೀಡಿಯೋ ಇದಾಗಿದೆ.

ಪ್ರಸ್ತುತ ವೀಡಿಯೋದಲ್ಲಿ ಒಂದು ಅರಣ್ಯದ ಮಧ್ಯದಲ್ಲಿ ಒಬ್ಬ ಬೇ#ಟೆಗಾರ ತನ್ನ ನಾಯಿಯನ್ನು ಕರೆದುಕೊಂಡು ಬೇ#ಟೆಯಾಡಲು ಹೋಗುತ್ತಾನೆ. ಆ ಸಮಯದಲ್ಲಿ ನಾಯಿಗಳು ಜಿಂಕೆಯ ಬೇ#ಟೆಯಾಡಲು ವ್ಯಕ್ತಿಯನ್ನು ಬಿಟ್ಟು ದೂರದ ವರೆಗೆ ಹೋಗುತ್ತವೆ. ಅಷ್ಟರಲ್ಲಿ ಒಂದು ನಾಯಿಗೆ ಕಾಂಗರೂ ಪ್ರಾಣಿ ಕಾಣುತ್ತದೆ. ಆದರೆ ನಾಯಿ ಈ ಪ್ರಾಣಿ ಕಂಡಿದ ತಕ್ಷಣ ಜೋರಾಗಿ ಬೊಗಳಲು ಶುರು ಮಾಡುತ್ತದೆ. ಆಗ ಕಾಂಗರೂ ಓಡೋಡಿ ಬಂದು ನಾಯಿಯನ್ನು ಜೋರಾಗಿ ಹಿಡಿದುಕೊಳ್ಳುತ್ತದೆ ಆಗ ನಾಯಿ ಕಾಂಗರೂವಿನ ಹಿಡಿತದಿಂದ ಬಿಡಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರು ಸಹ ಬಿಡಿಸಿಕೊಳ್ಳಲು ಸಾಧ್ಯವಾಗುವದಿಲ್ಲ ಆಗ ಮಾತ್ರ ನಾಯಿ ಜೋರಾಗಿ ಕಿರುಚಲು ಶುರು ಮಾಡುತ್ತದೆ. ಇದನ್ನು ಕೇಳಿದ ಮಾಲೀಕ ನಾಯಿಯಿದ್ದ ಸ್ಥಳಕ್ಕೆ ಬರುತ್ತಾನೆ.

ಕಾಂಗರೂ ತನ್ನ ನಾಯಿಯನ್ನು ಮುಷ್ಟಿಯಲ್ಲಿ ಜೋರಾಗಿ ಹಿಡಿದಿರುವದನ್ನು ಕಂಡು ಮಾಲೀಕ ಗಾ#ಬರಿಯಾಗುತ್ತಾನೆ. ತಕ್ಷಣ ತನ್ನ ನಾಯಿಯನ್ನು ಕಾಂಗರೂವಿನ ಹಿಡಿತದಿಂದ ಬಿಡಿಸಲು ಓಡೋಡಿ ಕಾಂಗರೂವಿನ ಬಳಿ ಹೋಗುತ್ತಾನೆ ಹೋಗಿದ ತಕ್ಷಣ ತನ್ನ ನಾಯಿಯನ್ನು ಬಿಡುವಂತೆ ಕಾಂಗರೂವಿಗೆ ಬೆದರಿಕೆ ಹಾಕುತ್ತಾನೆ ಆಗ ಕಾಂಗರೂ ಸಹ ನಾಯಿಯನ್ನು ಬಿಡುತ್ತದೆ. ಬಿಟ್ಟ ತಕ್ಷಣ ಈ ವ್ಯಕ್ತಿಯ ಜೊತೆಗೆ ಫೈಟ್ ಆಡಬೇಕೆಂದು ಸಿದ್ಧವಾಗುತ್ತದೆ. ಆಗ ವ್ಯಕ್ತಿ ನೋಡು ನೋಡುವಷ್ಟರಲ್ಲಿ ಆ ಕಾಂಗರೂವಿನ ಮುಖದ ಮೇಲೆ ಜೋರಾಗಿ ಪಂಚ್ ಕೊಡುತ್ತಾನೆ. ಪಂಚ ಕೊಟ್ಟು ಅಲ್ಲಿಂದ ವೇಗವಾಗಿ ಓಡಿ ಹೋಗುತ್ತಾನೆ. ಇದನ್ನು ಕಂಡ ಕಾಂಗರೂ ಈತ ಪಂಚ ಹೇಗೆ ಕೊಟ್ಟ ಅನ್ನೋ ವಿಚಾರದಲ್ಲಿ ಹಾಗೆ ನಿಲ್ಲುತ್ತದೆ. ಸಾಮಾನ್ಯವಾಗಿ ಕಾಂಗರೂ ಯಾವುದೇ ಪ್ರಾಣಿಗಿಂತ ಹೆಚ್ಚು ಬಲಿಶಾಲಿಯಾಗಿರುತ್ತದೆ. ಅದರ ಗಟ್ಟಿಮುಟ್ಟಾದ ರಟ್ಟೆಗಳು ನೋಡಿದರೆ ಹೆದ#ರಿಕೆ ಯಾಗುವದು ಸಹಜ ಆದರೆ ಈ ವ್ಯಕ್ತಿ ಅಂತಹ ಬಲಿಷ್ಠ ಕಾಂಗರೂವಿನ ಮುಖಕ್ಕೆ ಪಂಚ ಕೊಟ್ಟು ಕಂಗಾರುವಿಗೆ ಶಾ#ಕ್ ನೀಡಿದ್ದಾನೆ.

ವಿಡಿಯೋ ನೋಡಿ.