Video; ದಡೂತಿ ಕಾಯದ ವ್ಯಕ್ತಿ ಬಾವಿಯಲ್ಲಿ ಹೊಡೆಯುವ ಜಿಗಿತ ನೋಡದೆ ಮಿಸ್ ಮಾಡಬೇಡಿ! ಸಖತ್ ಡೇಂಜರ್.
ಸೋಶಿಯಲ್ ಮೀಡಿಯಾದಲ್ಲಿ ಹೊಳೆಯಬೇಕು ಎಂಬ ಹುಚ್ಚುತನ ಹದಿ ಹರೆಯದವರಲ್ಲಿ ತುಂಬಾ ಜಾಸ್ತಿನೇ ಇರುತ್ತದೆ. ಇದಕ್ಕಾಗಿ ತಮ್ಮ ಜೀವವನ್ನೇ ಅಪಾಯಕ್ಕೆ ಸಿಲುಕಿಸಲು ಮುಂದಾಗುತ್ತಾರೆ. ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ನೋಡಿ ಇಲ್ಲಿ.
ವಿಡಿಯೋದಲ್ಲಿ ವ್ಯಕ್ತಿಯು ಬಾವಿಯ ಬದಿಗೆ ನಿಂತು ಬಾವಿಯಲ್ಲಿ ಜೋರಾಗಿ ಜಿಗಿಯುವ ಪ್ರಯತ್ನದಲ್ಲಿದ್ದಾನೆ. ಆ ರೀತಿ ಆತ ತಯಾರಿಯೂ ಮಾಡುತ್ತಿದ್ದಾನೆ. ಇನ್ನೇನು ಬಾವಿಯಲ್ಲಿ ಜಂಪ್ ಹೊಡೆಯಲು ಮುಂದಾಗಿ ಓಡೋಡಿ ಬಂದು ಬಾವಿಯ ಅಂಚಿನಲ್ಲಿದ್ದ ಕಾಂಕ್ರೀಟ್ ಗೋಡೆಯ ಮೇಲೆ ಕಾಲಿಟ್ಟು ಜಿಗಿಯಬೇಕು ಎನ್ನುವಾಗ ಕಾಲು ಎಡ್ಜ್ ಮೇಲೆ ಸರಿಯಾಗಿ ಕೂಡದೆ ಕೆಳಗೆ ಸ್ಲಿಪ್ ಆಗುತ್ತದೆ. ಮತ್ತೇನು ಒಂದು ಕಾಲು ಕೆಳಗೆ ಜರಿಯುತ್ತದೆ, ಇನ್ನೊಂದು ಕಾಲು ಕಾಂಕ್ರೀಟ್ ಗೋಡೆಗೆ ಜೋರಾಗಿ ತಗುಲಿದೆ. ಅದೃಷ್ಟ ಚೆನ್ನಾಗಿತ್ತು ವ್ಯಕ್ತಿ ಆಯ ತಪ್ಪಿದರೂ ವೇಗದ ಕಾರಣದಿಂದಾಗಿ ಬಾವಿಯ ನೀರಿನಲ್ಲಿಯೇ ಬಿದ್ದಿದ್ದಾನೆ. ಈ ಮಧ್ಯೆ ಆತನ ತೊಡೆಗೆ ಮಾತ್ರ ಬಲವಾಗಿ ಪೆಟ್ಟು ತಗುಲಿದೆ ಎಂಬುದು ವಿಡಿಯೋದ ದೃಶ್ಯದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತಿದೆ. ಇದು ಯಾವ ಪದ್ಧತಿಯ ಜಿಗಿತ ಯಾವ ರೀತಿಯ ವಿಡಿಯೋ ಮಾಡಿಕೊಳ್ಳುವದು ಒಂದು ಗೊತ್ತಾಗ್ತಾ ಇಲ್ಲ.
View this post on Instagram
ಪ್ರಸ್ತುತ ವಿಡಿಯೋವನ್ನು mr.pritam7 ಹೆಸರಿನ ಅಕೌಂಟ್ ನಿಂದ ಇನ್ಸ್ಟಾ ಗ್ರಾಂ ನಲ್ಲಿ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ 11 ಮಿಲಿಯನ್ ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಮತ್ತು ಸಾವಿರಾರು ಜನರು ಲೈಕ್ ಮಾಡಿದ್ದಾರೆ.