Video: “ನನ್ನ ಚೆಂಡು ನಾನು ಯಾರಿಗೂ ಕೊಡುವುದಿಲ್ಲ”, ಆನೆ ಮರಿಯ ತುಂಟಾಟ ನೋಡಿದರೆ ಮಕ್ಕಳು ನೆನಪಾಗುತ್ತಾರೆ!

ಮಕ್ಕಳಿರುವ ಮನೆಯಲ್ಲಿ ಆ ಮಕ್ಕಳ ತುಂಟಾಟ, ಚೇಷ್ಟೆಗಳು ಹಾಗೂ ಅವರ ಜಗಳ, ಕುಸ್ತಿ ಇವೆಲ್ಲವೂ ಕೂಡ ಸಾಮಾನ್ಯವಾದ ಸಂಗತಿಗಳು. ಮನೆಯಲ್ಲಿ ಹಿರಿಯರಿಗೆ ಮಕ್ಕಳ ನಡುವಿನ ಜಗಳವನ್ನು ಬಿಡಿಸುವುದು ಕೂಡ ಒಂದು ದೊಡ್ಡ ತಲೆನೋವು ಎಂದು ಹೇಳುವುದನ್ನು ಕೇಳಿರುತ್ತೇವೆ. ಆದರೆ ಅದೇ ವೇಳೆ ಮಕ್ಕಳ ಗ ಲಾ ಟೆ ಮಾಡದೇ ನಿಶಬ್ದವಾಗಿದ್ದರೆ ಮನೆಯಲ್ಲಿನ ಕಳೆಯೇ ಕಳೆದು ಹೋದಂತೆ ಭಾವಿಸುವುದು ಕೂಡ ಅಷ್ಟೇ ನಿಜ. ಮನೆಯಲ್ಲಿ ಮಕ್ಕಳ ನಡುವೆ ಸಾಮಾನ್ಯವಾಗಿ ಆಟದ ವಿಚಾರದಲ್ಲಿ, ಆಟಿಕೆಗಳ ವಿಚಾರದಲ್ಲಿ ಜಗಳಗಳು ಆಗುವುದು ಸಹಜ. ಒಬ್ಬರ ಆಟಿಕೆಯನ್ನು ಇನ್ನೊಬ್ಬರ ಜೊತೆ ಶೇರ್ ಮಾಡಿಕೊಳ್ಳುವುದಕ್ಕೆ ಮಕ್ಕಳು ಸಾಮಾನ್ಯವಾಗಿಯೇ ಬಯಸುವುದಿಲ್ಲ.

ಒಂದು ವೇಳೆ ಒಬ್ಬರಿಗೆ ತಿಳಿಯದಂತೆ ಇನ್ನೊಬ್ಬರು ಯಾವುದಾದರೂ ಒಂದು ಆಟಿಕೆಯೊಂದಿಗೆ ಆಡುವುದನ್ನು ನೋಡಿದರೆ, ಆಟಿಕೆಯು ಯಾರಾದಾಗಿರುವುದೋ ಆ ಮಗು ಬಿದ್ದು, ಹೊರಳಾಡಿ, ರಂಪಾಟ ಮಾಡಿಯಾದರೂ ತನ್ನ ಆಟಿಕೆಯನ್ನು ಮರಳಿ ಪಡೆಯುವವರೆಗೆ ಸುಮ್ಮನಾಗುವುದಿಲ್ಲ. ಮಕ್ಕಳಲ್ಲಿನ ಕಾಣುವು ಇಂತಹುದೊಂದು ಗುಣ ಆನೆಮರಿ ಗಳಲ್ಲಿ ಕೂಡಾ ಇರುತ್ತದೆ ಎಂದರೆ ನಿಮಗೆ ನಂಬುವುದಕ್ಕೆ ಕಷ್ಟವಾಗಬಹುದು. ಆದರೆ ಹೇಗೆ ನಮ್ಮ ಮನೆಗಳಲ್ಲಿ ಮಕ್ಕಳು ಆಟದ ಸಾಮಾನು ನನ್ನದು ಎಂದು ಬೇರೆಯವರಿಗೆ ಕೊಡುವುದಿಲ್ಲ ಎಂದು ಹಠ ಹಿಡಿಯುವರೋ, ಅಂತಹುದೇ ಒಂದು ಗುಣ ಆನೆಮರಿ ಗಳಲ್ಲಿ ಕೂಡ ಇದೆಯಂತೆ.

ವೀಡಿಯೊ ನೋಡಿ

ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಹೊಸದೊಂದು ವಿಡಿಯೋವನ್ನು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು ಈ ವಿಡಿಯೋ ಮೂಲಕ ಅವರು ಮನುಷ್ಯರಲ್ಲಿ ಕಾಣುವಂತಹ ನನ್ನದು ಎನ್ನುವ ಗುಣವು ಆನೆಮರಿ ಗಳಲ್ಲಿ ಕೂಡ ಕಾಣುತ್ತದೆ ಎಂದು ತಿಳಿಸುತ್ತಾ, ವಿಡಿಯೋದ ಶೀರ್ಷಿಕೆಯಲ್ಲಿ ಅದೇ ವಿಷಯವನ್ನು ಅವರು ಬರೆದುಕೊಂಡಿದ್ದಾರೆ. ಇನ್ನು ಈ ವೀಡಿಯೋ ವಿಷಯಕ್ಕೆ ಬಂದರೆ ಇದರಲ್ಲಿ ಎರಡು ಆನೆ ಮರಿಗಳು ಆಟವಾಡುತ್ತಿರುವುದನ್ನು ನಾವು ಗಮನಿಸಬಹುದು. ಅದರಲ್ಲಿ ಒಂದು ಆನೆ ಮರಿಯ ಬಳಿ ಒಂದು ಚೆಂಡು ಇದ್ದು, ಅದು ತಾನು ಆಡುತ್ತಿರುವ ಚೆಂಡನ್ನು ಇನ್ನೊಂದು ಆನೆ ಮರಿಗೆ ಆಟವಾಡಲು ಕೊಡುವುದಕ್ಕೆ ತಯಾರಿಲ್ಲ.

ಹೀಗೆ ಆ ಇನ್ನೊಂದು ಆನೆ ಮರಿಯಿಂದ ತನ್ನ ಬಳಿ ಇರುವ ಚೆಂಡನ್ನು ಎಸೆದಾಗ ಇನ್ನೊಂದು ಆನೆ ಮರಿ ಕೂಡಾ ಆಡಲು ಬಂದರೆ, ಚೆಂಡನ್ನು ಎತ್ತಿಕೊಂಡು ಬಂದ ಆನೆ ಮರಿ ತನ್ನ ಜೊತೆಯ ಮರಿಗೆ ಅದನ್ನು ಮುಟ್ಟಲು ಕೂಡಾ ಅವಕಾಶವನ್ನು ನೀಡವುದಿಲ್ಲ. ಅಲ್ಲದೇ ಚೆಂಡನ್ನು ತಾನೇ ಅಡಗಿಸಿಕೊಳ್ಳಲು ಆನೆ ಮರಿ ಬಹಳ ಪ್ರಯತ್ನವನ್ನು ಮಾಡುತ್ತದೆ. ಎಲ್ಲಿ ತನ್ನ ಜೊತೆಯಿರುವ ಆನೆ ಮರಿ ತನ್ನ ಚೆಂಡನ್ನು ಕಸಿದುಕೊಳ್ಳುವುದೋ ಎಂದು ಚೆಂಡನ್ನು ತನ್ನ ಕೆಳಗೆ ಹಾಕಿಕೊಂಡು ಅನಂತರ ಅದರ ಮೇಲೆ ಮಲಗಿ ಹೊರಳಾಡಿ, ಇನ್ನೊಂದು ಆನೆ ಮರಿಗೆ ಆ ಚೆಂಡು ಸಿಗದಂತೆ ಎಚ್ಚರವನ್ನು ವಹಿಸುವುದು ನಾವು ನೋಡಬಹುದು.

ಪಾಪ ಪಕ್ಕದಲ್ಲಿದ್ದ ಆನೆ ಮರಿ ಚೆಂಡಿಗಾಗಿ ಪ್ರಯತ್ನ ಪಟ್ಟರೂ ಅದು ಸಿಗುವುದಿಲ್ಲ. ಡಿಸೆಂಬರ್ 28 ರಂದು ಶೇರ್ ಆಗಿರುವ ಈ ವೀಡಿಯೋವನ್ನು ಈಗಾಗಲೇ 23 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.‌ ಸುಮಾರು ಎರಡು ಸಾವಿಕ್ಕಿಂತ ಅಧಿಕ ಮಂದಿ ಲೈಕ್ ಗಳನ್ನು ನೀಡಿರುವ ಈ ವೀಡಿಯೋವನ್ನು ನೂರಾರು ಜನ ರಿಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಈ ಆಧುನಿಕ ಕಾಲದಲ್ಲಿ ಇಂತಹ ಆಟ ನೋಡುವ ಮನಸ್ಸಿಲ್ಲ, ಬದಲಿಗೆ ರೊಬೋಟ್ ಗಳನ್ನು ತಯಾರಿಸಿ ಈ ಮುಗ್ಧ ಜೀವಿಗಳ ಮಿಮಿಕ್ರಿ ಮಾಡಿಸುತ್ತಾರೆ ಎಂದಿದ್ದಾರೆ. ಮತ್ತೊಬ್ಬರು ನಾನು ಚಿಕ್ಕವನಾಗಿದ್ದಾಗ ಹೀಗೆ ಮಾಡುತ್ತಿದ್ದೆ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.‌