Video: ನಾಲ್ಕು ಅತ್ಯಂತ ವಿಷಕಾರಿ ನಾಗರ ಹಾವುಗಳ ಮಧ್ಯದಲ್ಲಿ ಕುಳಿತುಕೊಂಡು ಆಟವಾಡುತ್ತಿದ್ದ ಬಾಲಕಿ, ಒಮ್ಮೆಲೇ ಹೆಡೆ ಎತ್ತಿ ಹಾವು ಕಚ್ಚಲು ಬಂದಾಗ……….!!!!!

ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಏನು ವೈರಲ್ ಆಗುತ್ತೆ ಅಂತ ಹೇಳಲು ಸಾಧ್ಯವಾಗುವದಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಸೋಶಿಯಲ್ ಮಿಡಿಯಾದೊಂದಿಗೆ ಹೊಂದಿಕೊಂಡಿದ್ದಾರೆ. ತಾವು ಮಾಡಿರುವ ಅನೇಕ ಕಾರ್ಯಗಳ ಅಥವಾ ಆಕಸ್ಮಿಕವಾಗಿ ಘಟಿಸಿದ ಘಟನೆಯ ವಿಡಿಯೋಗಳು ಸೋಶಿಯಲ್ ಮಿಡಿಯಾದೊಂದಿಗೆ ಶೇರ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತರುತ್ತಿದ್ದಾರೆ. ಸದ್ಯಕ್ಕೆ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವಿಡಿಯೋ ಹಾವಿನ ವಿಡಿಯೋ ಆಗಿದ್ದು, ವಿಡಿಯೋದಲ್ಲಿ ಒಬ್ಬ ಚಿಕ್ಕ ಬಾಲಕಿ ಅತ್ಯಂತ ವಿಷಕಾರಿ ಹಾವೆಂದೇ ಪ್ರಸಿದ್ಧವಾದ ನಾಲ್ಕು ನಾಗರಹಾವಿನ ಜೊತೆಗೆ ಆಟ ಆಡುತ್ತಿದ್ದಾಳೆ. ಅಲ್ಲದೆ ಹಾವನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾಳೆ.

ಪ್ರಸ್ತುತ ವಿಡಿಯೋದಲ್ಲಿ ನೀವು ನೋಡಬಹುದು ಒಂದು ಚಿಕ್ಕ ಹುಡುಕಿ ನಾಲ್ಕು ಅತ್ಯಂತ ಅಪಾ#ಯಕಾರಿ ಹಾವುಗಳ ಮದ್ಯೆ ಕುಳಿತುಕೊಂಡು ಆಟ ಆಡುತ್ತಿರುತ್ತಾಳೆ. ಅವಳು ಆಡುವ ಬಗೆಯನ್ನು ಕಂಡರೆ ಏನೋ ಆಟಿಕೆ ಜೊತೆಗೆ ಆಡುತ್ತಿದ್ದಾಳೆ ಅನ್ನಿಸುತ್ತೆ ಅಷ್ಟೊಂದು ಧೈರ್ಯ ಹಾಗೂ ಪ್ರೀತಿಯಿಂದ ಆಟ ಆಡುತ್ತಾ ಅವುಗಳನ್ನು ಒಂದೊಂದಾಗಿ ಹಿಡಿಯಲು ಪ್ರಯತ್ನ ಮಾಡಿತ್ತಿರುತ್ತಾಳೆ. ಆದರೆ ನಾಲ್ಕು ಹಾವುಗಳು ತಮ್ಮ ಹೆಡೆಗಳನ್ನು ತಗೆದುಕೊಂಡು ಆಟ ಆಡುತ್ತಿರುತ್ತವೆ ಅಷ್ಟರಲ್ಲಿ ಬದಿಯಲ್ಲಿದ್ದ ಒಂದು ಹಾವು ನೇರವಾಗಿ ಈ ಬಾಲಕಿಯ ಕೈಗೆ ಮತ್ತು ಮುಖಕ್ಕೆ ಕಚ್ಚಲು ಪ್ರಯತ್ನ ಮಾಡುತ್ತದೆ ಆದರೆ ಹುಡುಗಿ ಸ್ವಲವು ಸಹ ಹೆದರದೆ ಅದನ್ನು ತನ್ನ ಕೈಯಿಂದ ದೂರ ಸರಿಸುತ್ತಾಳೆ ಅಷ್ಟೇ ಅಲ್ಲ ತನ್ನಿಂದ ದೂರ ಹೊರಟಿದ್ದ ಹಾವನ್ನು ತನ್ನ ಪುಟ್ಟ ಕೈಗಳಿಂದ ಹೊಡೆದು ತನ್ನ ಬಳಿ ನಿಲ್ಲುವ ಹಾಗೆ ಮಾಡುತ್ತಾಳೆ ಒಟ್ಟಾರೆಯಾಗಿ ಈ ಹುಡುಗಿಯ ವೀಡಿಯೋ ನೋಡಿದರೇ ನಿಜಕ್ಕೂ ಆಶ್ಚರ್ಯ ವಾಗುತ್ತೆ.

ವಿಡಿಯೋ ನೋಡಿ

 

View this post on Instagram

 

A post shared by Kingdom of snakes 🐍 (@snake_unity)

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಎಲ್ಲರೂ ನೋಡಿಯೇ ನೋಡುತ್ತಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು snake_unity ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋ ಅಪ್ ಲೋಡ್ ಮಾಡಿದ ನಂತರ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ವೀಕ್ಷಿಸಿ ಲೈಕ್ ಸಹ ಮಾಡುತ್ತಿದ್ದಾರೆ. ಜೊತೆಗೆ ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.