Video: ನಾಸಾ ಶೇರ್ ಮಾಡಿದ ಆಕಾಶಗಂಗೆಯ ಅತ್ಯದ್ಭುತ ವೀಡಿಯೋ: ನೋಡಿದವರು ಮಂತ್ರಮುಗ್ಧರಾಗುವುದು ಖಚಿತ!

ಸಾಮಾನ್ಯವಾಗಿ ಬಾಹ್ಯಾಕಾಶ ಅಥವಾ ಅಂತರಿಕ್ಷ ಎಂದರೆ ಅದೊಂದು ಕುತೂಹಲ, ಅಲ್ಲೊಂದು ನಿಗೂಢತೆ ಇದ್ದೇ ಇರುತ್ತದೆ. ನೀವು ಅಂತರಿಕ್ಷದ ಕುರಿತಾಗಿ ಹಾಗೂ ಅಲ್ಲಿನ ವಸ್ತುಗಳ ಕುರಿತು ತಿಳಿದುಕೊಳ್ಳುವ ಆಸಕ್ತಿ ಉಳ್ಳಂತಹ ವ್ಯಕ್ತಿಯಾಗಿರುವಿರೇ?? ನೀವು ಅಂತರ್ಜಾಲದಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹಾಗೂ ಚಿತ್ರಗಳು ಮತ್ತು ವಿಡಿಯೋಗಳನ್ನು ಹುಡುಕುವ ಆಸಕ್ತಿಯನ್ನು ಹೊಂದಿರುವಿರಾ?? ನಮ್ಮ ಭೂ ಗ್ರಹದಿಂದ ಹೊರಗೆ ಜಗತ್ತು ಹೇಗಿದೆ?? ಎನ್ನುವುದನ್ನು ತಿಳಿಯುವ ಪ್ರಯತ್ನವನ್ನು ಮಾಡುತ್ತಿರುವಿರಾ?? ಹಾಗಾದರೆ ನಿಮ್ಮ ಕುತೂಹಲವನ್ನು ಆಸಕ್ತಿಯನ್ನು ತಣಿಸುವ ಒಂದು ಸುಂದರವಾದ ಹಾಗೂ ಅದ್ಭುತವಾದ ವಿಡಿಯೋವನ್ನು ನಾಸಾ ಶೇರ್ ಮಾಡಿಕೊಂಡಿದ್ದು, ಅಂತರಿಕ್ಷದ ಕುರಿತಾಗಿ ಆಸಕ್ತಿಯನ್ನು ಹೊಂದಿರುವವರಿಗೆ ಈ ವಿಡಿಯೋ ನಿಜಕ್ಕೂ ಬಹಳ ಇಷ್ಟವಾಗುತ್ತದೆ.

ನಾಸಾ ತನ್ನ ವಿಡಿಯೋದಲ್ಲಿ ಸ್ಪೈರಲ್ ಗ್ಯಾಲಕ್ಸಿಯ ವಿಡಿಯೋವನ್ನು ಹಂಚಿಕೊಂಡಿದ್ದು, ಆಕಾಶ ಗಂಗೆಯನ್ನು ಇಷ್ಟೊಂದು ಅದ್ಭುತವಾಗಿ ತೋರಿಸುವ ಈ ವಿಡಿಯೋ ಅಂತರಿಕ್ಷದ ಕುರಿತಾಗಿ ತಿಳಿದುಕೊಳ್ಳಲು ಬಯಸುವ ಹಾಗೂ ಅಂತರಿಕ್ಷದ ನೋಟವನ್ನು ಆನಂದಿಸುವ ವ್ಯಕ್ತಿಗಳಿಗೆ ಬಹಳ ಇಷ್ಟವಾಗುತ್ತದೆ. ಈ ವಿಡಿಯೋ ಖಂಡಿತವಾಗಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಏಕೆಂದರೆ ನೀವು ಇದಕ್ಕಿಂತ ಮೊದಲು ಖಂಡಿತ ಆಕಾಶಗಂಗೆಯ ಇಂತಹಾ ಒಂದು ಅದ್ಭುತವಾದ ವಿಡಿಯೋವನ್ನು ನೋಡಿರುವುದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಬಹುದು.

ಈ ಸುಂದರವಾದ ವಿಡಿಯೋವನ್ನು ನಾಸಾ ಹಬಲ್ ಟೆಲಿಸ್ಕೋಪ್ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋ ನೋಡುಗರನ್ನು ಜೀವನದ ಬ್ರಹ್ಮಾಂಡ ಚಕ್ರದ ಮೂಲಕ ಅಂತರಿಕ್ಷಯಾನಕ್ಕೆ ಕೊಂಡೊಯ್ಯುತ್ತದೆ ಎಂದು ಕ್ಯಾಪ್ಷನ್ ನಲ್ಲಿ ಬರೆಯಲಾಗಿದೆ. ವಿಡಿಯೋ ಶೇರ್ ಮಾಡಿಕೊಂಡು ಕ್ಯಾಪ್ಷನ್ ನಲ್ಲಿ ವಿಡಿಯೋಗೆ ಸಂಬಂಧಿಸಿದಂತೆ ಒಂದಷ್ಟು ಮಾಹಿತಿಯನ್ನು ಕೂಡಾ ನೀಡಲಾಗಿದೆ. ಸ್ಪೈರಲ್ ಆಕಾಶಗಂಗೆ M83 ಇದನ್ನು ದಕ್ಷಿಣದ ಪಿನ್ ವೀಲ್ ಎಂದು ಕೂಡ ಕರೆಯಲಾಗುತ್ತದೆ. ಇದು 15 ದಶಲಕ್ಷ ಜ್ಯೋತಿರ್ವರ್ಷಗಳ ದೂರದಲ್ಲಿ ಹೈಡ್ರಾ ನಕ್ಷತ್ರ ಪುಂಜದಲ್ಲಿ ಕಂಡುಬರುತ್ತದೆ.

50, 000 ಬೆಳಕಿನ ವರ್ಷಗಳಿಗೆ ವ್ಯಾಪಿಸಿರುವ ಸ್ಪೈರಲ್ ಆಕಾಶಗಂಗೆಯು ಒಂದು ಆಶ್ಚರ್ಯಚಕಿತ ಆಕಾಶಗಂಗೆ ಎನಿಸಿಕೊಂಡಿದೆ. ಇಲ್ಲಿ ಜೀವನದ ವಿವಿಧ ಕಾಲಘಟ್ಟಗಳನ್ನು ಪ್ರತಿನಿಧಿಸುವ ಕೋಟಿಗಳಷ್ಟು ಸಂಖ್ಯೆಯಲ್ಲಿ ನಕ್ಷತ್ರಗಳಿವೆ. ಹುಟ್ಟಿನಿಂದ ಸಾವಿನವರೆಗೆ, ಈ ಹಬಲ್ ಚಿತ್ರದಲ್ಲಿನ ರೋಮಾಂಚಕ ಬಣ್ಣಗಳು ಈ ನಕ್ಷತ್ರಪುಂಜದ ವಿವಿಧ ವಯಸ್ಸಿನ ನಕ್ಷತ್ರಗಳನ್ನು ಪ್ರತಿನಿಧಿಸುತ್ತವೆ. ನಾಸಾ ತನ್ನ ಶೀರ್ಷಿಕೆಯಲ್ಲಿ ವಿವಿಧ ಬಣ್ಣ ಸಮೂಹಗಳು ಏನನ್ನು ಸೂಚಿಸುತ್ತದೆ ಎನ್ನುವ ವಿಷಯವನ್ನು ತಿಳಿಸಿದೆ‌.

ವಿಡಿಯೋ ನೋಡಿ

ನಾಸಾ ಶೇರ್ ಮಾಡಿರುವ ಈ ವಿಶೇಷವಾದ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. ಸುಮಾರು 90 ಸಾವಿರಕ್ಕಿಂತ ಅಧಿಕ ಮಂದಿ ಈ ವಿಡಿಯೋಗೆ ಲೈಕ್ ಗಳನ್ನು ನೀಡಿದ್ದಾರೆ. ಬಹಳಷ್ಟು ಜನರು ಕಾಮೆಂಟ್ ಗಳನ್ನು ಮಾಡುವ ಮೂಲಕ ಒಂದು ಅದ್ವಿತೀಯ ಅನುಭವದ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಾರೆ ಅಂತರಿಕ್ಷದ ಕುರಿತಾಗಿ ಆಸಕ್ತಿಯನ್ನು ಉಳ್ಳವರಿಗೆ ಈ ವಿಡಿಯೋ ಒಂದು ರೋಚಕ ಲೋಕವನ್ನು ಅವರ ಕಣ್ಮುಂದೆ ತಂದಿರಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.