Video; ನಿನ್ನೆಯ ರೋಚಕ ಪಂದ್ಯದ ಕೊನೆಯ ಓವರ್ ನಲ್ಲಿ Wicket, No ball, 6, 4, Bold, Free hit, Luck, Win ಇನ್ನು ಏನೇನು ನೋಡಿ
ರವಿವಾರದ ಟಿ-20 ಪಂದ್ಯ ಕೊನೆಯ ಎಸೆತದವರೆಗೂ ರೋಚಕತೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿತ್ತು. ಪ್ರಸ್ತುತ ಪಂದ್ಯದಲ್ಲಿ ವಿರಾಟ್ ಮತ್ತೊಮ್ಮೆ ತಮ್ಮ ಅದ್ಭುತ ಆಟವನ್ನು ಪ್ರದರ್ಶಿಸಿ ಕೊನೆಯವರೆಗೂ ನಿಂತು ತಂಡವನ್ನು ಗೆಲ್ಲಿಸಿಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದರು.
ಈ ಪಂದ್ಯದ ಕೊನೆಯ ಓವರ್ ನಲ್ಲಿ ವಿರಾಟ್ ಕೊಹ್ಲಿ ನೋ ಬಾಲ್ ಗೆ ಸಿಕ್ಸ್ ಬಾರಿಸಿದರು. ತದ ನಂತರದ ಫ್ರೀ ಹಿಟ್ ಬಾಲಿಗೆ ವಿರಾಟ್ ಆಡಲು ಯತ್ನಿಸಿದಾಗ ಕ್ಲೀನ್ ಬೋಲ್ಡ್ ಆದರೂ ಬಾಲ್ ವೇಗವನ್ನು ಪಡೆದ ಕಾರಣ ಥರ್ಡ್ ಮ್ಯಾನ್ ಬೌಂಡರಿ ಕಡೆಗೆ ಚೆಂಡು ಮುನ್ನುಗ್ಗಿತು. ಈ ಸಂದರ್ಭದಲ್ಲಿ ವಿರಾಟ್ ಮತ್ತು ದಿನೇಶ್ ವೇಗದಲ್ಲಿ ಓಡಿ 3 ರನ್ ಗಳನ್ನು ಕಾಲ್ ಹಾಕುವಲ್ಲಿ ಯಶಸ್ವಿಯಾದರು. ಇದಕ್ಕೆ ಪಾಕ್ ನಾಯಕ ಆಕ್ಷೇಪ ವ್ಯಕ್ತ ಪಡಿಸಿ ಪ್ರಸ್ತುತ ಬಾಲ್ ಡೆಡ್ ಎಂದು ತಿಳಿಯಬೇಕು ಎಂಬ ವಿಚಾರವನ್ನು ವ್ಯಕ್ತ ಪಡಿಸಿದರು. ಆದರೆ ಐಸಿಸಿ ನಿಯಮವೇನು ಹೇಳುತ್ತದೆ ಎಂದರೆ ಫ್ರೀ ಹಿಟ್ ಸಂದರ್ಭದಲ್ಲಿ ಬಾಲ್ ಸ್ಟಂಪ್ ಗೆ ಬಡಿದರೂ ಆ ಬಾಲ್ ಮರಳಿ ವಿಕೆಟ್ ಕೀಪರ್ ಅಥವಾ ಬೌಲರ್ ಕೈಗೆ ಸೇರುವ ತನಕ ಬಾಲ್ ಡೆಡ್ ಎಂದು ತಿಳಿಯಲಾಗುವದಿಲ್ಲ. ಇನ್ನೊಂದು ಸಂದರ್ಭದಲ್ಲಿ ಪ್ರಸ್ತುತ ಬಾಲ್ ಬೌಂಡರಿ ಗೆರೆ ದಾಟುವ ತನಕ ಡೆಡ್ ಆಗುವದಿಲ್ಲ. ಮತ್ತೊಂದು ವಿಷಯದ ಪ್ರಕಾರ, ಬ್ಯಾಟ್ಸ್ ಮನ್ ರನ್ ಔಟ್ ಆದಾಗಲೂ ಬಾಲ್ ಡೆಡ್ ಎಂದು ತಿಳಿಯಲಾಗುತ್ತದೆ. ಹೀಗಾಗಿ ಇಲ್ಲಿ ಭಾರತ ತಂಡಕ್ಕೆ ಬೈಜ್ ರೂಪದಲ್ಲಿ 3 ರನ್ ಗಳು ನಿಯಮಕ್ಕೆ ಅನುಸಾರವಾಗಿಯೇ ದೊರಕಿವೆ ಎಂದು ಹೇಳಲಾಗುತ್ತದೆ. MCC ಯ 20.1.1 ನಿಯಮದ ಪ್ರಕಾರ ಬಾಲ್ ಡೆಡ್ ಘೋಷಿಸುವ ಅಧಿಕಾರ ಫೀಲ್ಡ್ ಅಂಪಾಯರ್ ಗೆ ನೀಡಲಾಗಿದೆ.
ಕೊನೆಯ ಓವರ್ ನಲ್ಲಿ ನಡೆದ ಅನೇಕ ರೋಚಕ ಘಟ್ಟಗಳು….
ಟಿ -20 ವರ್ಲ್ಡ್ ಕಪ್ ನಲ್ಲಿಯ ಭಾರತ – ಪಾಕ್ ಹಣಾಹಣಿಯ ಕೊನೆಯ ಒಂದೇ ಓವರ್ ನಲ್ಲಿ ಕ್ರಿಕೆಟ್ ನ ಅನೇಕ ಘಟಕಗಳು ಏಕಕಾಲಕ್ಕೆ ನೋಡಲು ಸಿಕ್ಕವು ಎಂದರೆ ತಪ್ಪಲ್ಲ. ನಿನ್ನೆಯ ಈ ಪಂದ್ಯ ನಿಜಕ್ಕೂ ಕ್ರಿಕೆಟ್ ರಸಿಕರಿಗೆ ಒಂದು ಪರ್ವವೇ ಆಗಿತ್ತು ಎನ್ನಬಹುದು. ಈ ಪಂದ್ಯದ ಕೊನೆಯ ಓವರ್ ನಲ್ಲಿ ಅನೇಕ ಅದ್ಭುತ ಘಟಕಗಳು ನೋಡಲು ಸಿಕ್ಕವು.
ಅವು ಈ ಕೆಳಗಿನಂತಿವೆ…Wicket, No ball, Six, Bold, Wide, Free hit, Runout, stumping, Tragedy, Mystry, Luck, Destiny , And Game over
Wining 🍻 etc.
ನೋಡಿ ಈ ವಿಡಿಯೋ…