Video: ನೀರಿನಲ್ಲಿಯ ಕ್ರಿಕೆಟ್: ಕಾಣದ ಬೌಲರ್ ಬಾಲಿಗೆ ಜೋರಾಗಿ ಸಿಕ್ಸ್ ಬಾರಿಸಿದ ಬ್ಯಾಟ್ಸ್ಮನ್!!!
ಇಂದು ಐಪಿಎಲ್ ಕ್ರಿಕೆಟ್ ನ ಕ್ರೇಜು ಎಲ್ಲೆಡೆಗೂ ಹರಡಿದೆ. ಅದರಲ್ಲಿ ನಮ್ಮ ಬೆಂಗಳೂರು ಟೀಮ್ ಎಂದರೆ ಸಾಕು ನಮ್ಮ ಕರುನಾಡಿನ ಪ್ರತಿಯೊಬ್ಬರ ಮೈನವಿರೇಳುವದು ಸಹಜ. ಐಪಿಎಲ್ ಸ್ಟಾರ್ಟ್ ಆಗಿ ಸುಮಾರು ಹದಿನಾಲ್ಕು ವರ್ಷವಾದರೂ ಸಹ ಒಂದು ಬಾರಿಯೂ ಬೆಂಗಳೂರು ಟೀಮ್ ಕಪ್ ತನ್ನದಾಗಿಸಿಕೊಂಡಿಲ್ಲ ಆದರೂ ಸಹ ಧೈರ್ಯ, ಸಾಹಸದಿಂದ ಹಾಗೆ ಮುನ್ನಡೆಯುತ್ತಿದೆ ಈ ವರ್ಷವಾದರೂ ನಮ್ಮ ಕರುನಾಡಿನ ಜನತೆಯ ಕನಸು ನನಸಾಗಿತ್ತಾರೆಯೋ ಅಂತ ಕಾದು ನೋಡಬೇಕಾಗಿದೆ.
ಕ್ರಿಕೆಟ್ ಇದೊಂದು ಅಚ್ಚುಮೆಚ್ಚಿನ ಭಾರತದ ಆಟವಾಗಿದೆ. ನಮ್ಮ ರಾಷ್ಟ್ರೀಯ ಆಟ ಹಾಕಿ ಇದ್ದರೂ ಸಹ ಅದಕ್ಕೂ ಹೆಚ್ಚು ಕ್ರಿಕೆಟ್ ಆಟ ಜನಪ್ರಿಯತೆ ಪಡೆದುಕೊಂಡಿದೆ. ಮೊದಲು ಪುರುಷರ ಆಟವಾಗಿದ್ದ ಕ್ರಿಕೆಟ್ ಇಂದು ಮಹಿಳೆಯರು ಸಹ ಆಟದಲ್ಲಿ ಪ್ರಬಲರಾಗಿದ್ದರೆ. ಇಂದು ಅನೇಕ ಪ್ರಕಾರದ ಕ್ರಿಕೆಟ್ ಸರಣಿಗಳ ನಡೆಯುತ್ತವೆ. ಈ ಆಟದಲ್ಲಿ ವನ್ ಡೇ, ಟೆಸ್ಟ್, 20-20 ಹೀಗೆ ಆಟದಲ್ಲಿ ವಿವಿಧ ಪ್ರಕಾರಗಳಿವೆ. ಆದರೆ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ಎಲ್ಲಕ್ಕೂ ಹೆಚ್ಚು ಮೆಚ್ಚುಗೆ ಪಡುವ ಲೀಗ್ ಎಂದರೆ ಅದು ಐಪಿಎಲ್. ಬಿಸಿಸಿಐ ಯವರು ಪ್ರತಿವರ್ಷ ಐಪಿಎಲ್ ಸರಣಿಯನ್ನು ಆಡಿಸುತ್ತಾರೆ. ಈ ವರ್ಷವೂ ಸಹ ಸದ್ಯಕ್ಕೆ ತುಂಬಾ ಹುರಿಪಿನಲ್ಲಿ ಐಪಿಎಲ್ ನಡೆಯುತ್ತಿದೆ. ಈ ವರ್ಷ ಎರಡು ತಂಡಗಳು ಹೆಚ್ಚಾಗಿ ಪಾಲ್ಗೊಂಡಿವೆ ಹೀಗಾಗಿ ಈ ವರ್ಷ ಒಟ್ಟು ಹತ್ತು ಟೀಮ್ ಗಳ ನಡುವೆ ಐಪಿಎಲ್ ನಡೆಯುತ್ತಿದೆ.
ನಾವು ಕ್ರಿಕೆಟ್ ಆಟ, ಮೈದಾನದಲ್ಲಿ, ರಸ್ತೆಯ ಮೇಲೆ, ಗಲ್ಲಿಯಲ್ಲಿ, ಹಾಗೂ ಬರಿದಾದ ಜಾಗದಲ್ಲಿ ಆಡುವದನ್ನು ನಾವು ನೋಡಿದ್ದೇವೆ ಅಲ್ಲದೆ ನಾವು ಸಹ ಆಡಿದ್ದೇವೆ. ಆದರೆ ಸದ್ಯಕ್ಕೆ ಒಂದು ವಿಚಿತ್ರವಾದ ವೀಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕ್ರಿಕೆಟ್ ಆಟ ನೀರಿನಲ್ಲಿ ಅಂದರೆ ಹರಿಯುತ್ತಿರುವ ಕೊಳವೆಯಲ್ಲಿ ಆಡುತ್ತಿದ್ದಾರೆ. ಈ ವೀಡಿಯೋ ನೋಡಿದರೆ ಆಶ್ಚರ್ಯ ವೆನಿಸುವದು. ಏಕೆಂದರೆ ಈ ವೀಡಿಯೋದಲ್ಲಿ ಬರಿ ಬ್ಯಾಟ್ಸ್ಮನ್ ಮಾತ್ರ ನೀರಿನ ಸ್ವಲ್ಪ ಎತ್ತರದ ಮೇಲೆ ನಿಂತು ಬ್ಯಾಟ್ ಮಾಡುತ್ತಿದ್ದಾನೆ ಆದರೆ ಬಾಲರ್ ಮಾಡುವ ವ್ಯಕ್ತಿಯ ಪೂರ್ಣ ಶರೀರ ನೀರಿನ ಒಳಗಡೆ ಇದ್ದು ಕೇವಲ ಆತನ ಕೈ ಮಾತ್ರ ನೀರಿನ ಮೇಲೆ ಇದೆ. ನೀರಿನ ಮೇಲೆ ಎತ್ತಿ ಹಿಡಿದ ಕೈಯಲ್ಲಿ ಚೆಂಡನ್ನು ಹಿಡಿದು ಬಾಲಿಂಗ್ ಮಾಡುತ್ತಾನೆ. ಬಾಲಿಂಗ್ ಮಾಡಿದ ನಂತರ ಬ್ಯಾಟ್ಸ್ಮನ್ ಸಹ ಆ ಬಾಲಿಗೆ ಜೋರಾಗಿ ಹೊಡೆಯುತ್ತಾನೆ. ಯಾವ ರೀತಿಯಲ್ಲಿ ಕ್ರಿಕೆಟ್ ನಲ್ಲಿ ಸಿಕ್ಸ್ ಹೊಡೆಯುತ್ತಾರೆಯೋ ಅದೇ ರೀತಿಯಾಗಿ ಈ ಉತ್ತಮವಾದ ಶಾಟ್ ಹೊಡೆಯುತ್ತಾನೆ. ಅಲ್ಲಿ ನಿಂತ ಫೀಲ್ಡರ್ ಸಹ ನೀರಿನ ಮಧ್ಯದಲ್ಲಿ ನಿಂತಿದ್ದಾನೆ ಆದರೆ ಆತ ಯಾರಿಗೂ ಸಹ ಕಾಣುವದಿಲ್ಲ. ಬ್ಯಾಟ್ಸ್ಮನ್ ಹೊಡೆದ ಚೆಂಡು ನೆರವಾಗಿ ಕೊಳವೆಯ ಆಚೆ ಇದ್ದ ರಸ್ತೆಯನ್ನು ದಾಟಿ ಹೋಗುತ್ತದೆ.
ವೀಡಿಯೋ ನೋಡಿ.
View this post on Instagram
ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ iabhicricketer ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಹತ್ತು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಈ ವೀಡಿಯೋವನ್ನು ಎರಡು ಮಿಲಿಯನ್ ಗಿಂತಲೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ.