Video; ನೀರು ತುಂಬಿದ ರಸ್ತೆ ಮಧ್ಯೆ ಸ್ಕೂಟಿಯಿಂದ ಇಳಿಯಲು ನಿರಾಕರಿಸಿದಳು ಗರ್ಲ್ ಫ್ರೆಂಡ್! ಬಾಯ್ ಫ್ರೆಂಡ್ ಮಾಡಿದ ಈ ಕೆಲಸ.

ಸೋಶಿಯಲ್ ಮೀಡಿಯಾದಲ್ಲಿ ತಮಾಷೆ ವಿಡಿಯೋಗಳು ಹರಿದಾಡುವುದು ಅಷ್ಟಿಷ್ಟಲ್ಲ. ಅದರಲ್ಲೂ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಗಳ ವಿಡಿಯೋಗಳು ನೆಟ್ಟಿಗರಿಗೆ ನೋಡಲು ತುಂಬಾ ಇಷ್ಟವಾಗುತ್ತದೆ. ಕೆಲವೊಂದು ಸಲ ತಮಾಷೆಯಿಂದ ಕೂಡಿದ ಈ ವಿಡಿಯೋಗಳು ಹೊಟ್ಟೆ ಹುಣ್ಣಾಗುವಂತೆ ನಗಿಸುವುದು ಉಂಟು. ಸದ್ಯ ಈ ಜೋಡಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ ನೀವೂ ಒಂದು ಸಲ ನೋಡಿ ಮಜಾ ತೆಗೆದುಕೊಳ್ಳಿ.

ಪ್ರಸ್ತುತ ವಿಡಿಯೋದಲ್ಲಿ ಗರ್ಲ್ ಫ್ರೆಂಡ್ ಮತ್ತು ಬಾಯ್ ಫ್ರೆಂಡ್ ಇಬ್ಬರು ಜೋಡಿಯಾಗಿ ಸ್ಕೂಟಿ ಮೇಲೆ ನಡೆದಿದ್ದರು. ಆದರೆ ದಾರಿ ಮಧ್ಯೆ ಮಳೆಯಿಂದಾಗಿ ರಸ್ತೆಯ ಮೇಲೆ ನಿಂತ ನೀರಿನಲ್ಲಿ ಸಿಕ್ಕಿ ಬೀಳುತ್ತಾರೆ. ಅಲ್ಲಿ ನಡೆದ ದೃಶ್ಯ ನೋಡಿದ ನಂತರ ನಗುತಡೆಯುವುದು ಅಸಾಧ್ಯವಾಗುತ್ತದೆ. ಕಾರಣ ರಸ್ತೆಯ ಮೇಲೆ ಎಲ್ಲಿ ಬೇಕಾದಲ್ಲಿ ನೀರು ನಿಂತಿದೆ. ಅದರಲ್ಲಿ ವಾಹನಗಳು ಹೋಗುವುದು ಬರುವುದು ಕಂಡು ಬರುತ್ತಿದೆ. ಅಂತದ್ದರಲ್ಲಿ ಇವರಿಬ್ಬರ ಸ್ಕೂಟಿ ನೀರಿನಲ್ಲಿ ಚಲಿಸುವುದನ್ನು ಬಿಟ್ಟು ಬಿಡುತ್ತದೆ. ಆಗ ಹುಡುಗ ಸ್ಕೂಟಿಯಿಂದ ಇಳಿದು ಹೇಗಾದರೂ ಮಾಡಿ ಸ್ಕೂಟಿಯನ್ನು ನೀರಿನಿಂದ ತೆಗೆಯಲು ಪ್ರಯತ್ನಿಸುತ್ತಿರುತ್ತಾನೆ. ಆದರೆ ಸ್ಕೂಟಿ ಮೇಲೆ ಕುಳಿತ ಹುಡುಗಿ ಮಾತ್ರ ಕೆಳಗೆ ಇಳಿಯಲು ತಯಾರಿಲ್ಲ. ಇದನ್ನು ನೋಡಿದ ಹುಡುಗ ತನ್ನ ಸಂಯಮ ಕಳೆದುಕೊಂಡು ಸ್ಕೂಟಿಯನ್ನು ನೀರಿನಲ್ಲಿ ಹುಡುಗಿ ಸಮೇತ ತಳ್ಳಿ ಬಿಡುತ್ತಾನೆ. ಆಗ ಹುಡುಗಿ ನೀರಿನಿಂದ ತುಂಬಿದ ರಸ್ತೆಯ ಮೇಲೆ ಡಮಾರ್ ಎಂದು ಬಿದ್ದು ಬಿಡುತ್ತಾಳೆ.

ವೀಡಿಯೋ ನೋಡಿ

ವಿಡಿಯೋದ ಈ ದೃಶ್ಯ ನೋಡಲು ತುಂಬಾ ತಮಾಷೆ ಎನಿಸುತ್ತದೆ. ಇದನ್ನು ನೋಡಿದಾಗ ನೀವು ಸಹ ನಕ್ಕು ಬಿಡುತ್ತೀರಿ. ನೆಟ್ಟಿಗರಿಗೆ ಈ ವಿಡಿಯೋ ತುಂಬಾ ಇಷ್ಟವಾಗಿದೆ. ವಿಡಿಯೋದ ಈ ದೃಶ್ಯವನ್ನು ಇನ್ಸ್ಟಾಗ್ರಾಮ್ ನಲ್ಲಿ thebackbencherrs ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ನಂತರ ನೇಟಿಜನ್ಸ್ ಗಳು ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಒಬ್ಬನು ‘ಕೊನೆಗೂ ಅಕ್ಕ ಬಿದ್ದೇ ಬಿಟ್ಟಳು’ ಎಂದರೆ ಇನ್ನೊಬ್ಬ ‘ತುಂಬಾ ಮಜಾ ಬಂತು’ ಎಂದಿದ್ದಾನೆ.