Video ನೋಡಿದ್ಮೆಲೆ ಈ ಡ್ರಾಮೆಬಾಜ್ ಬೆಕ್ಕಿಗೆ ಮೊದ್ಲು ಬೆಸ್ಟ್ ಆಕ್ಟರ್ ಅವಾರ್ಡ್ ಕೊಟ್ಟುಬಿಡಿ ಅಂತೀರಾ!

ಪ್ರಾಣಿಗಳ ಕೆಲವು ವಿಡಿಯೋಗಳು ನಿಜಕ್ಕೂ ತುಂಬಾ ತಮಾಷೆಯಿಂದ ಕೂಡಿರುತ್ತವೆ. ಸಾಕುಪ್ರಾಣಿಗಳಲ್ಲಿಯೇ ಮನುಷ್ಯನಿಗೆ ಎಲ್ಲಕ್ಕೂ ಹೆಚ್ಚು ಪ್ರೀತಿಯ ಪ್ರಾಣಿ ಎಂದರೆ ಬೆಕ್ಕು. ಇದು ಅತೀ ಹೆಚ್ಚು ಮನೆಗಳಲ್ಲಿ ಸಾಕುವಂಥ ಪ್ರಾಣಿ. ಈ ಬೆಕ್ಕುಗಳ ವಿಡಿಯೋಗಳು ನೋಡಿದಾಗ ಒಮ್ಮೊಮ್ಮೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುತ್ತದೆ. ಇಂಥ ಒಂದು ತಮಾಷೆಯ ವಿಡಿಯೋ ಒಂದನ್ನು ಈಗ ನಿಮ್ಮ ಮುಂದೆ ತಂದಿದ್ದೇವೆ. ಪ್ರಸ್ತುತ ವಿಡಿಯೋದಲ್ಲಿಯ ಬೆಕ್ಕಿನ ಡ್ರಾಮಾ ನೋಡಿದ ನಂತರ ಏನೇ ಆಗಲಿ ಈ ಬೆಕ್ಕಿಗೆ ಬೆಸ್ಟ್ ಡ್ರಾಮಾ ಕಿಂಗ್ ಅವಾರ್ಡ್ ಏನಾದ್ರೂ ಇದ್ದರೆ ಮೊದ್ಲು ಕೊಟ್ಟುಬಿಡಿ ಎನ್ನುವಿರಿ.

ಪ್ರಸ್ತುತ ವಿಡಿಯೋದಲ್ಲಿ ಒಂದು ಬೆಕ್ಕು ಕಾಲಿಗೆ ತುಂಬಾ ಪೆಟ್ಟಾದ ಹಾಗೆ ರಸ್ತೆಯನ್ನು ದಾಟುವಾಗ ಕುಟುಂತ್ತ ಕುಂಟುತ್ತ ಬರುತ್ತಿರುವದು ಕಂಡು ಬರುತ್ತದೆ. ಆದರೆ ಅದು ಕುಂಟು ನೆಪ ಮಾಡಿಕೊಂಡು ಚಲಿಸುತ್ತಿದೆ ಎಂಬುದು ನಂತರ ಗಮನಕ್ಕೆ ಬರುತ್ತದೆ. ಆ ಬೆಕ್ಕು ಮನೆಯಲ್ಲಿ ಎಂಟರನ್ಸ್ ಮಾಡುತ್ತಲೇ ಕುಂಟುವದನ್ನು ಮರೆತು ಮತ್ತೆ ಸಹಜವಾಗಿ ನಡೆಯಲು ಶುರು ಮಾಡುತ್ತದೆ. ಈ ದೃಶ್ಯ ನೋಡಲು ತುಂಬಾ ತಮಾಷೆಯದ್ದಾಗಿದೆ. ಇದನ್ನು ನೋಡಿದಾಗ ಬೆಕ್ಕುಗಳು ಅಥವಾ ಇನ್ನಿತರ ಪ್ರಾಣಿಗಳು ಸಹ ಈ ರೀತಿಯ ನಾಟಕವನ್ನು ಮಾಡುತ್ತವೆಯೇ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.

ಈ ವೀಡಿಯೋವನ್ನು whiskers.universe ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 3 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದೆ.