Video; ಪಾಪ, ವಧುವಿನ ಕೊರಳಿಗೆ ಕೊನೆಗೂ ಹೂಮಾಲೆಯನ್ನು ಹಾಕಲು ವರನಿಗೆ ಸಿಗಲಿಲ್ಲ ಯಶಸ್ಸು..!

ಮದುವೆ ಮನೆಯಲ್ಲಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ವೈರಲ್ ಆಗಲು ಶುರು ಆಗಿ ಬಿಡುತ್ತವೆ. ಇಲ್ಲಿ ನಡೆಯುವ ಆಕಸ್ಮಿಕ ಪ್ರಸಂಗಗಳು ನೇಟಿಜನ್ಸ್ ಗಳಿಗೆ ತುಂಬಾ ಮನರಂಜನೆಯನ್ನು ನೀಡುತ್ತವೆ. ಸದ್ಯ ವಧು-ವರನ ಹೂಮಾಲೆಯನ್ನು ಧರಿಸುವ ಪ್ರಸಂಗದಲ್ಲಿ ನಡೆದ ರೋಚಕ ದೃಶ್ಯದ ತಮಾಷೆಯ ವಿಡಿಯೋ ಒಂದು ಇಂಟರ್ನೆಟ್ ನಲ್ಲಿ ಓಡಾಡುತ್ತಿದೆ. ಬನ್ನಿ ಅಲ್ಲಿ ಏನಾಗಿದೆ ನೋಡೋಣ…

ಈ ವಿಡಿಯೋದಲ್ಲಿ ವಧು ವರ ಇಬ್ಬರೂ ಸ್ಟೇಜ್ ಮೇಲೆ ನಿಂತಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಹೂಮಾಲೆಯನ್ನು ಧರಿಸುವ ವಿಧಾನ ನಡೆದಿತ್ತು. ಆ ಪ್ರಕಾರ ಇಬ್ಬರೂ ಕೈಯಲ್ಲಿ ಹೂಮಾಲೆಯನ್ನು ಹಿಡಿದುಕೊಂಡು ನಿಂತಿದ್ದಾರೆ. ವಧು ಮೊದಲು ತನ್ನ ಭಾವಿ ಪತಿಗೆ ಹೂಮಾಲೆಯನ್ನು ತೊಡಿಸುತ್ತಾಳೆ. ನಂತರ ವರ ಮಾಲೆಯನ್ನು ವಧುವಿನ ಕೊರಳಲ್ಲಿ ಹಾಕುತ್ತಾನೆ. ಅದು ಸರಿಯಾಗಿ ಕೊರಳಿಗೆ ಬೀಳದೆ ಮಧ್ಯೆದಲ್ಲಿಯೇ ತಲೆಗೆ ಸಿಕ್ಕಿ ಹಾಕಿಕೊಳ್ಳುತ್ತದೆ. ನಂತರ ಅದನ್ನು ತೆಗೆದು ಎರಡನೆಯ ಬಾರಿ ವಧುವಿನ ಕೊರಳಿಗೆ ಹೂಮಾಲೆ ಹಾಕಲು ಯತ್ನಿಸುತ್ತಾನೆ. ಆಗಂತೂ ಹೂಮಾಲೆ ಕೊರಳಿನಿಂದ ಜಾರಿ ದೇಹದಾಟಿ ನೇರ ನೆಲಕ್ಕೆ ಬಿದ್ದು ಬಿಡುತ್ತದೆ. ಹೀಗಾಗಿ ವರ ಎಷ್ಟೇ ಪ್ರಯತ್ನ ಮಾಡಿದರೂ ವಧುವಿಗೆ ಹೂಮಾಲೆ ತೊಡಿಸಲು ಯಶಸ್ಸು ಸಿಗುವುದೇ ಇಲ್ಲ.

ವರನಾದ ಹಾಸ್ಯಕ್ಕೆ ಗುರಿ…

ಕೆಲವೇ ಸೆಕೆಂಡುಗಳ ಈ ವಿಡಿಯೋದಲ್ಲಿ ವರ ತನ್ನದೇ ಮದುವೆಯಲ್ಲಿ ಕೂಡಿದ ಸಂಬಂಧಿಕರ ಮುಂದೆ ಪಾಪ ಮುಜಗರಕ್ಕೆ ಈಡಾಗಿದ್ದಾನೆ. ತನ್ನ ಈ ಎರಡೂ ಪ್ರಯತ್ನದಲ್ಲಿ ವರ ವಧುವಿಗೆ ಹೂಮಾಲೆ ತೊಡಿಸುವದರಲ್ಲಿ ಫೇಲ್ ಆಗುತ್ತಾನೆ. ಮತ್ತು ಅತಿಥಿಗಳ ಮುಂದೆ ಹಾಸ್ಯಕ್ಕೆ ಗುರಿಯಾಗುತ್ತಾನೆ.

ವಿಡಿಯೋ ನೋಡಿ

 

View this post on Instagram

 

A post shared by memes comedy (@ghantaa)

ಇಂಥ ವಿಡಿಯೋ ನೋಡಿದ ಮೇಲೆ ನೆಟ್ಟಿಗರು ಸುಮ್ಮನೆ ಕುಳಿತರೆ ಅದ್ಹೇಗೆ ಸಾದ್ಯ? ಅವರು ತುಂಬಾ ತಮಾಷೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಬ್ಬನು, ‘ಅಣ್ಣ ಮದುವೆ ಬೇಡವಾಗಿದ್ದರೆ ಬಿಟ್ಟುಬಿಡು’ ಎಂದರೆ ಇನ್ನೊಬ್ಬ ‘ಈತ ಎಲ್ಲಿಂದಲೋ ಎಣ್ಣೆ ಹೊಡೆದು ಬಂದಿದ್ದಾನೆ’ ಎಂದಿದ್ದಾನೆ.