Video; ಪುಟ್ಟ ನಡೆಸಿದ್ದಾನೆ ಸ್ಟೂಲ್ ಮೇಲೆ ಕುಳಿತುಕೊಳ್ಳಲು ಘೋರ ಪ್ರಯತ್ನ; ಮುಂದಿನ ಸುಂದರ ದೃಶ್ಯ ಮಿಸ್ ಮಾಡದೆ ನೋಡಿ.

ಮಕ್ಕಳ ವಿಡಿಯೋಗಳು ಎಂಥವರಿಗೂ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತವೆ. ಇನ್ನು ತುಂಟ ಮಕ್ಕಳ ತುಂಟಾಟದ ವಿಡಿಯೋಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತವೆ. ಮುಗ್ಧ ಮಕ್ಕಳ ಆಟಗಳೇ ಹಾಗೆ ಇರುತ್ತವೆ.

ಸದ್ಯ ನೋಡುವ ಈ ವಿಡಿಯೋದಲ್ಲಿಯ ಮಗುವಿನ ಆಟದ ಈ ದೃಶ್ಯ ವರ್ಣಿಸಲು ಅಸಾಧ್ಯ. ಅಷ್ಟೊಂದು ಅದ್ಭುತ ಮತ್ತು ಸುಂದರವಾದ ದೃಶ್ಯ ಈ ವಿಡಿಯೋದಲ್ಲಿ ನೋಡಲಿದ್ದೀರಿ.

ವಿಡಿಯೋದಲ್ಲಿ ಮಗು ಒಂದು ಸ್ಟೂಲ್ ಮೇಲೆ ಕುಳಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಸ್ಟೂಲ್ ಒಂದು ಕಡೆಗೆ ಮತ್ತು ಆತ ಕುಳಿತುಕೊಳ್ಳುವ ಸ್ಥಳ ಒಂದು ಕಡೆ ಆಗುತ್ತಿರುವ ಕಾರಣ ಆತನಿಗೆ ಸ್ಟೂಲ್ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುಟ್ಟನು ಸಹ ಸೋಲದೆ ಮೇಲಿಂದ ಮೇಲೆ ತನ್ನ ಪ್ರಯತ್ನವನ್ನು ಜಾರಿಯಲ್ಲಿ ಇಡುತ್ತಾನೆ. ಆದರೆ ಆತನಿಗೆ ಇದರಲ್ಲಿ ಯಶಸ್ಸು ಸಿಗುವುದಿಲ್ಲ. ಹೀಗಾದಾಗ ಪುಟ್ಟನ ಸಂಯಮದ ಫ್ಯೂಸ್ ಹಾರಿ ಬಿಟ್ಟಿದೆ. ಕ್ಷಣದಲ್ಲಿ ಸ್ಟೂಲ್ ನ್ನು ಗರಗರನೇ ತಿರುಗಿಸಿ ಬಿಸಾಡಿ ಬಿಟ್ಟಿದ್ದಾನೆ. ಕೆಲವೇ ಕೆಲವು ಕ್ಷಣಗಳ ಈ ಸುಂದರ ವಿಡಿಯೋ ನೆಟ್ಟಿಗರಿಗೆ ಫುಲ್ ಇಷ್ಟವಾಗಿದೆ.

ವೀಡಿಯೋ ನೋಡಿ

 

View this post on Instagram

 

A post shared by não espie 👀 (@naoespie)

ಮಗುವಿನ ತುಂಟಾಟದ ಈ ಸಖತ್ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ naoespie ಹೆಸರಿನ ಅಕೌಂಟ್ನಿಂದ ಶೇರ್ ಮಾಡಲಾಗಿದ್ದು, ಈ ವಿಡಿಯೋ ಇಲ್ಲಿಯವರೆಗೆ 4.8 ಮಿಲಿಯನ್ ಜನರಿಗೆ ಮೋಡಿ ಮಾಡಿದೆ. ಹಾಗೂ ಸುಮಾರು ಒಂದುವರೆ ಲಕ್ಷ ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.