Video: ಪುಟ್ಟ ಮಗುವಿಗೆ ಡಾಕ್ಟರ್ ಇಂಜೆಕ್ಷನ್ ಕೊಟ್ಟ ಬಗೆ ನೋಡಿದರೆ ಸೂಪರ್ ಎನ್ನದೆ ಇರಲಾರಿರಿ, ವೀಡಿಯೋ ನೋಡಿ!!
ವೈದ್ಯರನ್ನು ದೇವರೆಂದು ಸಹ ಕರೆಯುತ್ತಾರೆ, ವೈದ್ಯೋ ನಾರಾಯಣ ನಮಃ. ನಮ್ಮ ಜೀವನದಲ್ಲಿ ಹಲವಾರು ಬಾರಿ ನಾವು ಅನೇಕ ರೋಗಗಳಿಗೆ ಬಲಿಯಾಗುತ್ತೇವೆ ಆದರೆ ಎಂತಹದೇ ರೋಗ ಬಂದರು ಸಹ ಅದನ್ನು ಹತೋಟಿ ಮಾಡಿ ನಮ್ಮ ಜೀವನ ಕಾಪಾಡುವ ಕಾರ್ಯ ವೈದ್ಯರು ಮಾಡುತ್ತಾರೆ. ಹೀಗಾಗಿ ವೈದ್ಯರನ್ನು ಪರಬ್ರಹ್ಮ ಎಂದು ಹೇಳುತ್ತೇವೆ. ನಾವು ಸಣ್ಣ ಪುಟ್ಟ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾದರೆ ಮೊದಲು ನಾವು ಪ್ರಥಮೋಪಚಾರ ಅಂದರೆ ಮೆಡಿಕಲ್ ನಿಂದ ಟ್ಯಾಬ್ಲೆಟ್ ತಗೆದುಕೊಂಡು ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇವೆ. ಒಂದು ವೇಳೆ ಟ್ಯಾಬ್ಲೆಟ್ ತಗೆದುಕೊಂಡರು ಸಹ ಪರಿಹಾರ ಸಿಗದೆ ಇದ್ದಾಗ ನಾವು ಆಸ್ಪತ್ರೆಯ ಕಡೆಗೆ ಹೆಜ್ಜೆ ಹಾಕುತ್ತೇವೆ.
ಚಿಕ್ಕವರಿದ್ದಾಗಿನಿಂದಲೂ ನಮಗೆ ವೈದ್ಯರು ಹಲವಾರು ಪ್ರಕಾರದ ಡೋಸ್ ನೀಡುತ್ತಾರೆ. ಹೀಗಾಗಿ ನಾವು ಯಾವುದೇ ರೋಗವಿಲ್ಲದೆ ಆರೋಗ್ಯವಾಗಿ ಬೆಳೆಯುತ್ತೇವೆ. ಆಕಸ್ಮಿಕವಾಗಿ ಒಂದು ಡೋಸ್ ಸಹ ಮಿಸ್ ಆದರೂ ಸಹ ಮಕ್ಕಳು ಭವಿಷ್ಯದಲ್ಲಿ ಅಂಗವಿಕಲ ಆಗುವ ಸಂಭವ ವಿರುತ್ತದೆ. ತಂದೆ-ತಾಯಿಯರು ಎಷ್ಟೋ ಕಷ್ಟವಾದರೂ ಸಹ ಮಕ್ಕಳಿಗೆ ಚಿಕ್ಕವರಿದ್ದಾಗ ಡೋಸ್ ಕೊಟ್ಟು ಕೊಡುತ್ತಾರೆ. ಆದರೆ ಡೋಸ್ ಕೊಡುವಾಗ ಮಕ್ಕಳ ಪ್ರತಿಕ್ರಿಯೆ ಅಲ್ಲಿದ್ದ ಡಾಕ್ಟರ್ ಮೇಲೆ ಅವಲಂಬಿಸಿರುತ್ತದೆ. ಒಳ್ಳೆಯ ಡಾಕ್ಟರ್ ಇದ್ದರೆ ಮಕ್ಕಳು ಒಂದು ಚೂರು ಸಹ ಅಳದೆ ಡೋಸ್ ಚುಚ್ಚಿಕೊಳ್ಳುತ್ತವೆ ಅದೇ ಡಾಕ್ಟರ್ ಮನಸ್ಸಿಗೆ ಬಂದ ಹಾಗೆ ಇಂಜೆಕ್ಷನ್ ಕೊಟ್ಟರೆ ಮಕ್ಕಳು ಗೋಳೋ ಅಂತ ಇರಲಾರವು. ಡಾಕ್ಟರ್ ಮಕ್ಕಳಿಗೆ ಡೋಸ್ ಯಾವ ರೀತಿಯಾಗಿ ಕೊಡಬೇಕು ಎಂಬುದು ಈ ವೀಡಿಯೋ ನೋಡಿದ ಮೇಲೆ ಗೊತ್ತಾಗುತ್ತದೆ.
ಪ್ರಸ್ತುತ ವೀಡಿಯೋದಲ್ಲಿ ಒಂದು ಪುಟ್ಟ ಮಗುವಿಗೆ ಡೋಸ್ ಕೊಡುವದಿರುತ್ತದೆ. ಆ ಮಗುವಿನ ತಾಯಿ ಟೇಬಲ್ ಮೇಲೆ ಮಗುವನ್ನು ಮಲಗಿಸಿ ಡಾಕ್ಟರ್ ಹಿಂದುಗಡೆ ನಿಂತು ಕೊಳ್ಳುತ್ತಾಳೆ. ಹೆತ್ತ ಮಗು ಅತ್ತರೆ ತಾಯಿಯ ಕರಳು ಚುರ್ರ ಅನ್ನುತ್ತೆ. ಆದ್ದರಿಂದ ಈಗ ತನ್ನ ಮಗುವಿಗೆ ಡೋಸ್ ಕೊಡುವರಿದ್ದಾರೆ ಮಗು ಅಳುತ್ತೆ ಎಂದು ವಿಚಾರ ಮಾಡಿ ತಾಯಿ ಡಾಕ್ಟರ್ ಹಿಂದೆ ನಿಲ್ಲುತ್ತಾಳೆ. ಆದರೆ ಈ ಮಗು ಡಾಕ್ಟರ್ ಬರುತ್ತಿದ್ದ ಹಾಗೆ ಅಳುವ ಮುಖ ಮಾಡುತ್ತೆ. ಡಾಕ್ಟರ್ ಮಗುವಿನ ಭಾವನೆ ಅರಿತು ಕೊಂಡು ಆ ಮಗುವಿಗೆ ಚೆಕ್ ಅಪ್ ಮಾಡುವ ಬಗೆಯನ್ನು ನೋಡಿದರೆ ನೀವು ಸಹ ಗ್ರೇಟ್ ಡಾಕ್ಟರ್ ಎನ್ನುವಿರಿ. ಆಟ ಅಡಿಸುತ್ತಲೇ ಮಗುವಿನ ಚೆಕ್ ಅಪ್ ಮಾಡಿ ಇಂಜೆಕ್ಷನ್ ಸಹ ಕೊಡುತ್ತಾನೆ ಈ ಡಾಕ್ಟರ್. ಇಂಜೆಕ್ಷನ್ ಅಂದರೆ ಎಲ್ಲರಿಗೆ ಹೆದರಿಕೆ ಆಗುವದು ಸಹಜ . ಆದರೆ ಈ ಪುಟ್ಟ ಇಂಜೆಕ್ಷನ್ ಕೊಟ್ಟರು ಸಹ ಸ್ವಲ್ಪವೂ ಸಹ ಅಳಲೇ ಇಲ್ಲ ಏಕೆಂದರೆ ಆ ಅದ್ಭುತ ರೀತಿಯಲ್ಲಿ ಡಾಕ್ಟರ್ ಇಂಜೆಕ್ಷನ್ ಕೊಟ್ಟಿದ್ದಾರೆ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಐದು ಲಕ್ಷಕ್ಕೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಒಂದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ