VIDEO : ಪುಟ್ಟ ಮರಿಮಂಗ ಡ್ರ್ಯಾಗನ್ ಫ್ರೂಟ್ ಟೆಸ್ಟ್ ಮಾಡಿದ ನಂತರ, ಕ್ಯಾಮೆರಾ ಮುಂದೆ ನೀಡಿದ ಪ್ರತಿಕ್ರಿಯೆ ನೋಡಿ…
ಪ್ರಾಣಿಗಳ ತುಂಬಾ ತಮಾಷೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ವೈರಲ್ ಆಗಿಯೇ ಆಗುತ್ತವೆ. ಅದರಲ್ಲೂ ಪ್ರಾಣಿಗಳ ಪುಟ್ಟಪುಟ್ಟ ಮರಿಗಳಂತೂ ತುಂಬಾ ಚೂಟಿಯಾಗಿರುತ್ತವೆ. ಅವುಗಳ ವಿಡಿಯೋಗಳಿಗೆ ನೇಟಿಜನ್ಸ್ ಗಳು ತುಂಬಾ ಇಷ್ಟಪಟ್ಟು ನೋಡುತ್ತಾರೆ. ಈಗ ಇದೇ ರೀತಿಯ ಪುಟ್ಟ ಮರಿ ಮಂಗನ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸಂಚಲನ ಮೂಡಿಸಿದೆ.
ವಿಡಿಯೋದಲ್ಲಿ ಪುಟ್ಟದಾದ ಮರಿಮಂಗವೊಂದು ಡ್ರ್ಯಾಗನ್ ಫ್ರೂಟ್ ತಿನ್ನುವ ದೃಶ್ಯವಿದೆ. ಈ ದೃಶ್ಯವನ್ನು ಎಲ್ಲಿಯಾದರೂ ಕಾಡಿನಲ್ಲಿ ಶೂಟ್ ಮಾಡಲಾಗಿದೆ. ಮರಿ ಮಂಗವು ನೆಲದ ಮೇಲೆ ಕುಳಿತಿದೆ. ಅದರ ಮುಂದೆ ವ್ಯಕ್ತಿಯು ಡ್ರ್ಯಾಗನ್ ಫ್ರೂಟ್ ಕಟ್ ಮಾಡುವುದನ್ನು ಬಾಯಿಯಲ್ಲಿ ಬೆರಳಿಟ್ಟು ತುಂಬಾ ಆಶ್ಚರ್ಯದಿಂದ ಮಂಗ ವೀಕ್ಷಿಸುತ್ತಿದೆ. ಬಹುಶಃ ಈ ಹಣ್ಣು ಅದು ತಿನ್ನುತ್ತಿರುವದು ಮೊದಲ ಬಾರಿ ಎಂದೆನಿಸುತ್ತಿದೆ.
ವ್ಯಕ್ತಿಯು ಡ್ರ್ಯಾಗನ್ ಫ್ರೂಟ್ ಕಟ್ ಮಾಡಿದ ನಂತರ ಮೊದಲು ಒಂದು ಪೀಸ್ ಮಂಗನಿಗೆ ತಿನ್ನಲು ಕೊಡುತ್ತಾನೆ. ಮಂಗ ಆ ಹಣ್ಣಿನ ಹೋಳನ್ನು ಬೇಗನೆ ತಿನ್ನಲು ಮುಂದಾಗುವುದಿಲ್ಲ. ಆಗ ಪ್ರಸ್ತುತ ವ್ಯಕ್ತಿಯು ಮಂಗನಿಗೆ ವಿಶ್ವಾಸ ಮೂಡಲು ತಾನೇ ಮೊದಲು ತನ್ನ ಕೈಯಲ್ಲಿಯ ಆ ಹಣ್ಣನ್ನು ಸ್ವಲ್ಪ ತಿನ್ನುತ್ತಾನೆ. ತದನಂತರ ಮಂಗವು ತಿನ್ನಲು ಮುಂದಾಗುತ್ತದೆ. ಮಂಗವು ಒಂದು ಬೈಟ್ ತಿಂದ ನಂತರದ ಎಕ್ಸ್ಪ್ರೆಶನ್ ನೋಡಿದ ನೇಟಿಜನ್ಸ್ ಗಳು ತುಂಬಾ ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ. ಮರಿ ಮಂಗನ ಡ್ರ್ಯಾಗನ್ ಫ್ರೂಟ್ ತಿನ್ನುವ ದೃಶ್ಯ ನೇಟಿಜನ್ಸ್ ಗಳಿಗೆ ತುಂಬಾ ತುಂಬಾ ಹಿಡಿಸಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು lovinganimals.dg ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಂ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಈ ವಿಡಿಯೋಗೆ 5 ಲಕ್ಷ ಜನರು ಲೈಕ್ ಮಾಡಲಾಗಿದ್ದು ಸುಮಾರು 6.9 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.