Video; ಪುಷ್ಪಾ ಚಿತ್ರದ ‘ಸಾಮಿ ಸಾಮಿ’ ಹಾಡಿಗೆ ಮುದ್ದು ಹುಡುಗಿ ಮಾಡಿದಳು ಸಖತ್ ಡಾನ್ಸ್! ಬಿತ್ತು ಲೈಕ್ಸ್ ಗಳ ಸುರಿಮಳೆ..!

ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣಳ ಸೂಪರ್ ಹಿಟ್ ಚಿತ್ರ ಪುಷ್ಪ ತೆರೆ ಕಂಡು ಹಳೆಯದಾಗಿ ಹೋದರೂ ಅದರ ಟ್ರೆಂಡಿಂಗ್ ಮಾತ್ರ ಇನ್ನೂ ಕಡಿಮೆಯಾಗುತ್ತಿಲ್ಲ. ಈ ಚಿತ್ರದಲ್ಲಿಯ ಸೂಪರ್ ಹಿಟ್ ಹಾಡಿಗೆ ಎಲ್ಲರೂ ರೀಲ್ ಮಾಡಿದ್ದೇ ಮಾಡಿದ್ದು. ಆದರೆ ಸದ್ಯ ಪುಟ್ಟ ದಷ್ಟಪುಷ್ಟ ಹಾಗೂ ಅಷ್ಟೇ ಕ್ಯೂಟ್ ಹುಡುಗಿಯೊಂದು ಭರ್ಜರಿಯಾಗಿ ಕುಣಿದಿದ್ದಾಳೆ. ಇದೇ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಮುದ್ದು ಹುಡುಗಿ ಶಾಲೆಯ ಯೂನಿಫಾರ್ಮ್ ನಲ್ಲಿ ಕಂಡು ಬರುತ್ತಿದ್ದಾಳೆ. ಪರಿಸರ ಶಾಲೆಯ ಮಕ್ಕಳಿಂದ ತುಂಬಿ ಹೋಗಿದೆ. ಅವರಲ್ಲಿ ಒಬ್ಬಳು ಹುಡುಗಿ ಮಾತ್ರ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದು ಕೊಳ್ಳುತ್ತಿದ್ದಾಳೆ. ಆಕೆಯ ದೈಹಿಕ ಭಾಷೆ ತುಂಬಾ ಜಬರ್ದಸ್ತ ಆಗಿದೆ. ಆಕೆಯ ಪುಟ್ಟ ಪುಟ್ಟ ಸ್ಟೆಪ್ಸ್ ಗಳನ್ನು ನೋಡಲು ತುಂಬಾ ಇಷ್ಟವಾಗುವದು. ಈ ವೀಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ದಿಲೀಪ್ ಪಾಂಡೆ ಹೆಸರಿನ ರಾಜಕೀಯ ನೇತಾರರೊಬ್ಬರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ.

ವಿಡಿಯೋದ ದೃಶ್ಯದಲ್ಲಿ ಈ ಹುಡುಗಿ ತುಂಬಾ ವಿಶೇಷವಾಗಿ ಡಾನ್ಸ್ ಮಾಡುತ್ತಿದ್ದಾಳೆ. ಉಳಿದ ಮಕ್ಕಳು ಸುಮ್ಮನೆ ಹೆಸರಿಗೆ ಡಾನ್ಸ್ ಮಾಡುತ್ತಿದ್ದರೆ ಈ ಹುಡುಗಿ ಮಾತ್ರ ತುಂಬಾ ಪರಿಪೂರ್ಣವಾಗಿ ಸ್ಟೆಪ್ ಹಾಕುತ್ತಿದ್ದಾಳೆ. ಜೊತೆಗೆ ಬಾಯಿಯಿಂದ ಈ ಹಾಡನ್ನು ಸರಿಯಾಗಿ ಉಚ್ಚರಿಸುತ್ತಿದ್ದಾಳೆ.

ವಿಡಿಯೋ ನೋಡಿ

ವಿಡಿಯೋದ ಜೊತೆಗೆ ಪಾಂಡೆ ಅವರು ಕೆಲವು ಲೈನ್ ಗಳನ್ನು ಬರೆದಿದ್ದಾರೆ, ನನಗೆ ನಿಜವಾಗಿಯೂ ಗೊತ್ತಿಲ್ಲ, ಈ ಲಿಟಲ್ ಏಂಜಲ್ ಯಾರೆಂದು? ಆದರೆ ಈಕೆ ನನ್ನ ಮನಸ್ಸನ್ನು ಗೆದ್ದಿದ್ದಾಳೆ ಎಂದಿದ್ದಾರೆ.