Video; ಪ್ರಾಣಿ ಎಂದ ಮಾತ್ರಕ್ಕೆ ಅದಕ್ಕೆ ಜೀವವಿಲ್ಲವೆ? ಲಿಮಿಟ್ ಇಲ್ಲವೇ? ಧಡೂತಿ ಕಾಯದವರನ್ನು ಚೆನ್ನಾಗಿ ಮಲಗಿಸಿದ ಒಂಟೆ!

ಪ್ರವಾಸದ ಮುಖ್ಯ ಉದ್ದೇಶ ಮೋಜು ಮಸ್ತಿ. ಆದರೆ ಕೆಲವೊಮ್ಮೆ ಈ ಮೋಜು ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ. ಮುಖ್ಯವಾಗಿ ಪ್ರವಾಸ ಮಾಡುವ ಕಾರಣವೇ ಬೇಸರ ಕಳೆದುಕೊಳ್ಳಲು. ಹೊಸ ನೆಲ, ಹೊಸ ಸೊಬಗು, ಹೊಸ ರುಚಿ ಅನುಭವಿಸಲು ಮನುಷ್ಯ ಹೊಸದಾದ ಸ್ಥಳಕ್ಕೆ ಹೋಗುವುದುಂಟು. ಈ ಹೊಸದನ್ನು ನೋಡಲು, ಅನುಭವಿಸಲು, ಮಜಾ ಮಾಡಲು ಹೋದಾಗ ಕೆಲವು ಬಾರಿ ದೊಡ್ಡ ದೊಡ್ಡ ಸಜೆಯಾಗುವದು ಉಂಟು. ಪ್ರಸ್ತುತ ವಿಡಿಯೋದಲ್ಲಿ ಇಬ್ಬರು ಮಿತ್ರರು ಒಂಟೆಯ ಮೇಲೆ ರೈಡ್ ಮಾಡಬೇಕೆಂದಿದ್ದಾರೆ. ಆದರೆ ಯಾಕೋ ಇದು ಅವರಿಗೆ ವರ್ಕೌಟ್ ಆಗಿಲ್ಲ. ಇಬ್ಬರೂ ಕೂಡಿ ಒತ್ತಟ್ಟಿಗೆ ಒಂಟೆಯ ಮೇಲೆ ಕುಳಿತುಕೊಂಡು ಪ್ರವಾಸ ಮಾಡುವ ಪ್ಲಾನ್ ಸಕ್ಸಸ್ ಆಗಿಲ್ಲ. ಅದೃಷ್ಟ ಚೆನ್ನಾಗಿತ್ತು ಈ ಪ್ರವಾಸ ಮೊಟಕು ಗೊಂಡಿದೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಪ್ರಸ್ತುತ ಪ್ರವಾಸ ಮರಳಿ ಬಾರದ ಕೊನೆಯ ಪ್ರವಾಸವಾಗುತ್ತಿತ್ತು. ಇಬ್ಬರೂ ಕೂಡಿ ಒಂಟೆ ಹತ್ತಿ ಕುಳಿತಾಗ ಪಾಪ ಒಂಟೆಗೆ ಮೇಲಕ್ಕೆ ಏಳಲು ಸಾಧ್ಯವೇ ಆಗಿಲ್ಲ. ಆದರೂ ಅದು ಶಕ್ತಿ ಮೀರಿ ಏಳಲು ಪ್ರಯತ್ನಿಸಿದಾಗ ಒಂಟೆಯ ಬ್ಯಾಲೆನ್ಸ್ ತಪ್ಪಿ ಮೇಲೆ ಕುಳಿತವರು ಧಡಾಂ ಅಂತ ಕೆಳಗೆ ಬಿದ್ದು ಬಿಟ್ಟಿದ್ದಾರೆ. ಒಂಟೆಯೂ ಒಂದು ಪ್ರಾಣಿ ಇದೆ ಅದಕ್ಕೂ ಜೀವವಿದೆ ಎನ್ನುವ ವಿಚಾರ ಅದರ ಮೇಲೆ ಕುಳಿತುಕೊಳ್ಳುವವರಿಗೆ ಹಾಗೂ ಅದರ ಮಾಲೀಕನಿಗೆ ಇರಬೇಡವೆ? ಭಾರವನ್ನು ಹೊತ್ತುಕೊಳ್ಳಲು ಅದಕ್ಕೂ ಒಂದು ಲಿಮಿಟ್ ಇದೆ ಎಂದು ತಿಳಿಯಬೇಡವೇ? ಈ ಲಿಮಿಟ್ ಮೀರಿದಾಗ ಆಗುವದು ಹೀಗೆಯೇ.

ನೋಡಿ ಈ ವಿಡಿಯೋ…

 

View this post on Instagram

 

A post shared by Vikash Saran (@mr_jamindaar_07)

ಪ್ರಸ್ತುತ ಈ ಮನಕಲಕುವ (ಕೆಲವರಿಗೆ ತಮಾಷೆಯ) ವಿಡಿಯೋ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ mr_jamindaar_07 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆಯನ್ನು ಪಡೆದಿದ್ದು 7 ಲಕ್ಷ 76 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.