Video; ಫೇಮಸ್ ಡಾನ್ಸರ್ ಸಪ್ನಾ ಳ ಡಾನ್ಸ್ ನೋಡಿ ಅಜ್ಜನ ಮೈಯಲ್ಲಿ ವಿದ್ಯುತ್ ಸಂಚಾರ! ನೋಡುಗರಿಗೆ ತಗುಲಿತು ಶಾಕ್…
ಸಪ್ನಾ ಚೌದರಿ ಹರಿಯಾಣವಿ ಫೇಮಸ್ ಡ್ಯಾನ್ಸರ್ ಆಗಿದ್ದಾರೆ. ಉತ್ತರ ಭಾರತದಲ್ಲಿ ಇವರಿಗೆ ಗುರುತು ಮಾಡಿಕೊಡುವ ಅಗತ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರ ಡಾನ್ಸ್ ಗಳು ಅದ್ಭುತವಾಗಿ ವೈರಲ್ ಆಗುತ್ತವೆ. ಹೀಗಾಗಿ ಅವರಿಗೆ ಫ್ಯಾಂಸ್ ಫಾಲೋವರ್ಸ್ ಭರ್ಜರಿಯಾಗಿದ್ದಾರೆ. ಅವರ ಡಾನ್ಸಿನ ಒಂದೊಂದು ಸ್ಟೇಪ್ಸ್ ಗಳು ನೋಡುಗರ ಹೃದಯಕ್ಕೆ ಲಗ್ಗೆ ಹಾಕುತ್ತವೆ. ಅವರ ಹಾಡು ಮತ್ತು ನೃತ್ಯಗಳು ದೊಡ್ಡವರಿಂದ ಹಿಡಿದು ಚಿಕ್ಕವರಿಗೂ ಮೋಡಿ ಮಾಡುತ್ತವೆ.
ಈಗ ಇವರದೇ ಒಂದು ಡಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಅದಕ್ಕೆ ಕಾರಣ ಸುಮಾರು 80/85 ರ ಹರೆಯದ ಅಜ್ಜ. ಈ ಅಜ್ಜನು ಸಪ್ನ ಚೌಧರಿಯ ಹಾಡಿಗೆ ಹುಚ್ಚನಂತೆ ಕುಣಿದಿದ್ದಾನೆ. ಸಪ್ನ ಮತ್ತು ಅಜ್ಜನ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಈ ಹಾಡಿನಲ್ಲಿ ಫೇಮಸ್ ಡ್ಯಾನ್ಸರ್ ಸಪ್ನಾ ಹಸಿರು ಬಣ್ಣದ ಡ್ರೆಸ್ ತೊಟ್ಟು ತಮ್ಮದೇ ಶೈಲಿಯಲ್ಲಿ ಡ್ಯಾನ್ಸ್ ಮಾಡುತ್ತಾ ಧೂಳೆಬ್ಬಿಸಿದ್ದಾರೆ. ಈ ಧೂಳ್ ನಲ್ಲಿ ಅಜ್ಜ ತರಗೆಲೆಯಂತೆ ಹಾರಾಡುತ್ತಿದ್ದಾನೆ. ಸಪ್ನಾಳ ಡ್ಯಾನ್ಸ್ ನೋಡಲು ಸುತ್ತಮುತ್ತಲು ಸಾವಿರಾರು ಸಂಖ್ಯೆಯಲ್ಲಿ ಜನರು ಒಂದುಗೂಡಿದ್ದಾರೆ.
ಈ ಸ್ಟೇಜ್ ಶೋನಲ್ಲಿ ಸಪ್ನ ಒಂದು ಹರಿಯಾಣವಿ ಹಾಡಿಗೆ ತೂಫಾನ್ ಹೆಜ್ಜೆ ಹಾಕುತ್ತಿದ್ದಾರೆ. ಅವರ ಈ ಜೋಷ್ ನೋಡಿ ಅಜ್ಜನಲ್ಲಿಯೂ ವಿದ್ಯುತ್ ಸಂಚಾರವಾದಂತಾಗಿ ಜನರಲ್ಲಿಯೇ ನಿಂತಲ್ಲಿ ಅಜ್ಜ ತನ್ನಲ್ಲಿರುವ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಸಿಕ್ಕಾಪಟ್ಟೆ ತಾಕತ್ತಿನಿಂದ ಕುಣಿಯಲು ಶುರು ಮಾಡಿದ್ದಾರೆ. ಅಜ್ಜನ ವಯಸ್ಸು ಕಡಿಮೆಯೆಂದರೂ 80 ರಿಂದ 85 ಸಹಜವಾಗಿದೆ. ತಲೆಗೆ ಒಂದು ಟಾವೆಲ್, ಕಣ್ಣಿಗೆ ಕನ್ನಡಕ, ಮೈಮೇಲೆ ಸ್ವೆಟರ್ ಇಷ್ಟೆಲ್ಲಾ ಹಾಕಿಕೊಂಡರೂ ಜೋಶ್ ಗೆ ಏನು ಕಮ್ಮಿ ಇಲ್ಲ. ಅಜ್ಜ ಸಪ್ನಾಳ ಮುಂದೆ ಕತರ್ನಾಕ್ ಡ್ಯಾನ್ಸ್ ಹೊಡೆಯುತ್ತಾ ಒಂದು ರೀತಿಯಲ್ಲಿ ಸಪ್ನಾಳಿಗೆ ಚಾಲೆಂಜ್ ನೀಡುತ್ತಿದ್ದಾರೆ. ಅಜ್ಜನ ಈ ಪಾಟಿ ಜೋಶ್ ಮುಂದೆ ಹರೆಯದ ಸಪ್ನ ಸಹಿತ ನಾಚುವಂತಾಗಿದೆ. ಅಜ್ಜನ ಈ ಡಾನ್ಸ್ ನೋಡಿದ ನಂತರ ಸಪ್ನಾ ಬಿಡಿ ಅಲ್ಲಿದ್ದ ಜನರೂ ಸಹ ಅಜ್ಜನ ಫ್ಯಾನ್ ಆಗಿದ್ದಾರೆ.
ನೋಡಿ ಅಜ್ಜನ ತೂಫಾನ್ ಡಾನ್ಸ್…
ಪ್ರಸ್ತುತ ಈ ವೀಡಿಯೊವನ್ನು ಯುಟ್ಯೂಬ್ ನಲ್ಲಿ ತ್ರಿಮೂರ್ತಿ ಕ್ಯಾಸೆಟ್ಸ್ ಹೆಸರಿನ ಯುಟ್ಯೂಬ್ ಚಾನೆಲ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3.3 ಮಿಲಿಯನ್ ಜನರು ವೀಕ್ಷಿಸಿದ್ದಾರೆ.