Video; ಬಡಿಗೆಗಳಿಂದಲೇ ತಯಾರಿಸಿದ ಅದ್ಭುತ ಬುಲ್ಡೋಜರ್; ಅದರಲ್ಲಿ ಕುಳಿತು ಡೆಮೋ ತೋರಿಸಿದ ಜುಗಾಡು ಪುಟ್ಟ ಇಂಜಿನಿಯರ್…
ಜಗತ್ತಿನಲ್ಲಿ ಇನ್ನೋವೇಶನ್ ಮತ್ತು ಕ್ರಿಯೇಶನ್ ಮಾಡುವ ಜಾಣರು ಕಡಿಮೆ ಇಲ್ಲ. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ಇದರದ್ದೇ ಒಂದು ಉದಾಹರಣೆಯಾಗಿದೆ. ಹುಡುಗನೊಬ್ಬ ತನ್ನದೇ ಮೈಂಡ್ ನಿಂದ ಕಟ್ಟಿಗೆಯ ಬಡಿಗೆಗಳನ್ನು ಉಪಯೋಗಿಸಿ ಬುಲ್ಡೋಜರ್ ತಯಾರಿಸಿದ್ದಾನೆ. ಇದನ್ನೇ ಟ್ವಿಟರ್ ನಲ್ಲಿ ಇಂಜಿನಿಯರಿಂಗ್ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಎರಡು ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ.
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಡುಗನೊಬ್ಬ ತಾನೇ ತಯಾರಿಸಿದ ಬುಲ್ಡೋಜರ್ ದಿಂದ ಯಾವ ರೀತಿ ಕೆಲಸ ಮಾಡಲು ಬರುತ್ತದೆ ಎಂಬುದನ್ನು ತೋರಿಸಿದ್ದಾನೆ. ಪ್ರಸ್ತುತ ಬುಲ್ಡೋಜರ್ ನ್ನು ಮರದ ಬಡಿಗೆಗಳಿಂದ ಡಿಸೈನ್ ಮಾಡಿದ್ದಾನೆ. ಇದರಲ್ಲಿ ಮಣ್ಣನ್ನು ಅಗೆಯಲು ಒಂದು ಬಕೆಟ್ ಹಾಗೂ ತನಗೆ ಕೂಡಲು ಜೊತೆಗೆ ಸಂಚಲನೆ ಮಾಡಲು ಸ್ಥಳವು ಕಾಯ್ದಿರಿಸಿದ್ದಾನೆ.
ವೈರಲ್ ಆಗುತ್ತಿರುವ ಈ ವಿಡಿಯೋ ಎಲ್ಲಿಯದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ ಹುಡುಗನ ಸೃಜನಶೀಲತೆಯ ಬಗ್ಗೆ ಎಷ್ಟು ಹೊಗಳಿದರೂ ಸಾಲದು. ಕಾರಣ ಆತ ರಚಿಸಿದ ಈ ಡಿಸೈನ್ ನಿಶ್ಚಿತವಾಗಿಯೂ ಎಲ್ಲರನ್ನು ಆಕರ್ಷಿಸುತ್ತಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೆಟ್ಟಿಗರನ್ನು ತನ್ನಡೆಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನೆಟ್ಟಿಗರು ತಮ್ಮ ಕಮೆಂಟ್ ನಲ್ಲಿ ಹುಡುಗನನ್ನು ಹೊಗಳುತ್ತಿದ್ದಾರೆ ಮತ್ತು ಆತ ತಯಾರಿಸಿದ ಈ ಬುಲ್ಡೋಜರ್ ತುಂಬಾ ವಿಶೇಷವಾಗಿದೆ ಎಂದಿದ್ದಾರೆ.
ವೀಡಿಯೋ ನೋಡಿ
https://twitter.com/engineering_i0/status/1565693084188282880?ref_src=twsrc%5Etfw%7Ctwcamp%5Etweetembed%7Ctwterm%5E1565693084188282880%7Ctwgr%5E71cffc1fb46b5f15208af8f1fd18e2cacd67cd12%7Ctwcon%5Es1_c10&ref_url=https%3A%2F%2Fndtv.in%2Fzara-hatke%2Fboy-makes-bulldozer-with-wooden-sticks-amazing-jugaad-video-viral-internet-reacts-3319758