Video: ಬರೀ ಒಂದು ಕರವಸ್ತ್ರದಿಂದ ಸ್ಕೂಟಿ ಕಳ್ಳತನ; ಕಳ್ಳನ ಕೈಚಳಕ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!!

ಕಳ್ಳರು ಕೇವಲ ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ ಒಂದು ವೇಳೆ ಅವರಿಗೆ ಅವಕಾಶ ಸಿಕ್ಕರೆ ಸಾಕು ಅಲ್ಲಿಂದ ಆ ವಸ್ತುವನ್ನು ಕಳುವು ಮಾಡದೆ ಬಿಡುವದಿಲ್ಲ. ಕಳ್ಳತನ ಕೇವಲ ರಾತ್ರಿಯ ಸಮಯದಲ್ಲಿ ಅಷ್ಟೇ ಆಗುತ್ತವೇ ಅಂತ ಹೇಳಲು ಬರುವದಿಲ್ಲ. ಆದರೆ ಇಂದಿನ ಕಾಲದಲ್ಲಿ ಹಾಡ ಹಗಲಿನಲ್ಲೇ ಎಲ್ಲರ ಎದುರೇ ಕಳ್ಳತನ ನಡೆಯುತ್ತಿವೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕಳ್ಳತನ ಮಾಡುವ ಪರಿಯನ್ನು ನೋಡಿದರೆ ನಿಮಗೂ ಸಹ ಆ#ಶ್ಚರ್ಯ ವೆನಿಸುವದು. ಇತ್ತೀಚಿನ ದಿನಗಳಲ್ಲಿ ಒಂದು ವಿಚಿತ್ರ ರೀತಿಯ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ. ಈ ಕಳ್ಳತನದ ವಿಧಾನ ಸಂಪೂರ್ಣ ವಿಭಿನ್ನವಾಗಿದೆ. ಕರವಸ್ತ್ರದ ಸಹಾಯದಿಂದ ಕಳ್ಳ ಕಳ್ಳತನ ಮಾಡುವುದನ್ನು ನೀವು ಎಂದಾದರೂ ನೋಡಿದ್ದೀರಾ? ಆದರೆ ಕರವಸ್ತ್ರದಿಂದ ಕಳ್ಳತನ ಮಾಡಿರುವ ಈ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತರುಣಿಯ ಕಣ್ಣೆದುರಲ್ಲೇ ಕಳ್ಳ ಸ್ಕೂಟಿಯನ್ನು ಸಹಜವಾಗಿ ಕದ್ದೊಯ್ದಿದ್ದಾನೆ.

ಕಳ್ಳತನ ನಡೆದಿದ್ದು ಹೇಗೆ?

ಕಳ್ಳ ಮೊದಲಿಗೆ ರಸ್ತೆ ಬದಿಯಲ್ಲಿ ನಿಂತು ಸ್ಕೂಟಿಯನ್ನು ನೀಟಾಗಿ ನೋಡುತ್ತಾನೆ. ಸ್ಕೂಟಿಯನ್ನು ಲಾಕ್ ಮಾಡಲಾಗಿರುವದನ್ನು ಖಚಿತ ಪಡಿಸಿಕೊಂಡು ಕಳ್ಳನು ಸ್ಕೂಟಿಯನ್ನು ತನ್ನ ವಿಚಿತ್ರ ಬುದ್ಧಿಯಿಂದ ಒಂದು ಕರವಸ್ತ್ರದಿಂದ ಕದಿಯುತ್ತಾನೆ. ಅದು ಹೇಗೆ ಅಂದರೆ ಸ್ಕೂಟಿ ಸ್ಟಾರ್ಟ್ ಆಗುವುದನ್ನು ತಡೆಯಲು ಅವನು ಸ್ಕೂಟಿಯ ಸೈಲೆನ್ಸರ್‌ಗೆ ಕರವಸ್ತ್ರವನ್ನು ಹಾಕುತ್ತಾನೆ ತದನಂತರ ಅಲ್ಲಿಂದ ದೂರ ಹೋಗುತ್ತಾನೆ. ಈ ಸ್ಕೂಟಿ ಹೊಂದಿದ ಹುಡುಗಿ ಅಲ್ಲಿಗೆ ಬರುತ್ತಾಳೆ. ಹುಡುಗಿ ಸ್ಕೂಟಿ ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಾಳೆ. ಆದರೆ, ಸೈಲೆನ್ಸರ್‌ಗೆ ಬಟ್ಟೆ ಹಾಕಿದ್ದರಿಂದ ಸ್ಕೂಟಿ ಸ್ಟಾರ್ಟ್ ಆಗಲೇ ಇಲ್ಲ.

ಸ್ಕೂಟಿ ಸ್ಟಾರ್ಟ್ ಆಗದ ಕಾರಣ ತರುಣಿ ಗೊಂದಲಕ್ಕೆ ಒಳಗಾಗುತ್ತಾಳೆ. ಮೊದಲು ಸ್ಕೂಟಿಯಲ್ಲಿ ಪೆಟ್ರೋಲ್ ಇದೆಯೋ ಅಥವಾ ಇಲ್ಲವೋ ಎಂಬುದು ನೋಡುತ್ತಾಳೆ, ತದನಂತರ ಮತ್ತೆ ಸ್ಟಾರ್ಟ್ ಮಾಡಲು ಪ್ರಯತ್ನ ಮಾಡುತ್ತಾಳೆ ಆದರೂ ಸಹ ಸ್ಕೂಟಿ ಸ್ಟಾರ್ಟ್ ಆಗದೆ ಇದ್ದಾಗ ಹುಡುಗಿ ಹೆದರುತ್ತಾಳೆ. ಹುಡುಗಿ ಅಸ್ವಸ್ಥಳಾಗಿರುವುದನ್ನು ಕಂಡ ಕಳ್ಳ ಆಕೆಗೆ ಸಹಾಯ ಮಾಡುವದಾಗಿ ತಿಳಿಸುತ್ತಾನೆ ಆಗ ತರುಣಿ ತನ್ನ ಸ್ಕೂಟರ್ ನ ಕೀಯನ್ನು ಆತನಿಗೆ ಕೊಟ್ಟು ಸ್ಟಾರ್ಟ್ ಮಾಡಲು ತಿಳಿಸುತ್ತಾಳೆ. ಕಳ್ಳನಿಗೆ ಕೀ ಕೊಟ್ಟು ಸ್ವತಃ ಮೊಬೈಲ್ ನಲ್ಲಿ ಯಾರಿಗೋ ಕಾಲ್ ಮಾಡಲು ಸ್ವಲ್ಪ ಮುಂದೆ ಹೋಗುತ್ತಾಳೆ. ಯುವತಿ ಮುಂದೆ ಹೋದದನ್ನು ಕಂಡು ತಕ್ಷಣದಲ್ಲಿ ಕಳ್ಳ ತಾನು ಇಟ್ಟಿದ್ದ ಕರವಸ್ತ್ರವನ್ನು ಸೈಲೆನ್ಸರ್‌ನಿಂದ ತಗೆದು ಸ್ಕೂಟಿಯನ್ನು ಸ್ಟಾರ್ಟ್ ಮಾಡಿ ಸ್ಕೂಟಿಯೊಂದಿಗೆ ಪಲಾಯನ ಮಾಡುತ್ತಾನೆ. ಯುವತಿ ಹಿಂದೆ ತಿರುಗಿ ನೋಡುವಷ್ಟರಲ್ಲಿ ಸ್ಕೂಟಿಯೊಂದಿಗೆ ಕಳ್ಳನು ಸಹ ಪರಾರಿಯಾಗುತ್ತಿರುವದನ್ನು ಕಂಡು ಇನ್ನೇನು ಆತನನ್ನು ಹಿಡಿಬೇಕು ಅಂದುಕೊಂಡು ಬೆನ್ನು ಹತ್ತುತ್ತಾಳೆ ಆದರೆ ಆತನು ಸ್ಕೂಟಿಯ ವೇಗ ಹೆಚ್ಚಿಸಿ ಓಡಿ ಹೋಗುತ್ತಾನೆ.

ವಿಡಿಯೋ ನೋಡಿ

ಕಳ್ಳತನದ ಈ ವಿಚಿತ್ರ ಪದ್ಧತಿ ಕಂಡು ನೆಟ್ಟಿಗರು ಬೆರಗಾಗಿದ್ದಾರೆ. ಈ ವೀಡಿಯೊವನ್ನು 56,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಜೊತೆಗೂ ಸಹ ಈ ರೀತಿಯಾಗಿ ಘಟಿಸಬಹುದು ಹಾಗಾಗಿ ನೀವು ಸಹ ಎಚ್ಚರ ದಿಂದಿರಿ!!