Video: ಬಾತುಕೋಳಿಗಳು ಜಾರುಬಂಡಿ ಆಟ ಆಡುವುದು ನೋಡಿದ್ದೀರಾ: ಮನಸ್ಸಿಗೆ ಖುಷಿ ನೀಡುವ ದೃಶ್ಯ ಆಯ್ತು ವೈರಲ್!

ಮನರಂಜನೆ ಎನ್ನುವುದು ಕೇವಲ ಮನುಷ್ಯನಿಗೆ ಮಾತ್ರ ಸೀಮಿತವಲ್ಲ, ಬೇಸರವಾದ ಮನಸ್ಸುಗಳಿಗೆ ಖುಷಿಯನ್ನು ನೀಡುವ ಚಟುವಟಿಕೆಗಳು ಮನುಷ್ಯನಿಗೆ ಮಾತ್ರ ಸ್ವಂತವಲ್ಲ. ಈ ಭೂಮಿಯ ಮೇಲೆ ಇರುವ ಎಲ್ಲ ಜೀವಿಗಳಿಗೂ ಕೂಡ ತಮ್ಮ ನಿತ್ಯ ಜೀವನದ ಜಂಜಾಟಗಳ ನಡುವೆ ಬೇಸರ ಉಂಟಾದಾಗ ಅವು ಯಾವುದೋ ಒಂದು ರೀತಿಯಲ್ಲಿ ತಮ್ಮ ಮನಸ್ಸಿಗೆ ಮುದವನ್ನು ನೀಡುವಂತಹ ಚಟುವಟಿಕೆಗಳನ್ನು ಮಾಡುತ್ತವೆ. ಆ ಮೂಲಕ ಅವು ತಮ್ಮ ಬೇ ಸರವನ್ನು ಕಳೆದುಕೊಳ್ಳುತ್ತವೆ. ಆಟ, ತುಂಟಾಟ, ಚೇಷ್ಟೆ ಇಂತಹವು ಕೂಡಾ ಪ್ರಾಣಿಗಳಲ್ಲಿ ಆಗಾಗ ಕಂಡುಬರುತ್ತದೆ. ಆದರೆ ಅದನ್ನು ನೋಡಲು ನಮಗೆ ಅವಕಾಶ ಸಿಗುವುದು ವಿರಳವಷ್ಟೇ. ಒಂದು ವೇಳೆ ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲೇನಾದರೂ ಶೇರ್ ಆದರೆ ಅವು ಬಹುತೇಕ ವೈರಲ್ ಆಗಿ ಬಿಡುತ್ತವೆ‌.

ವೈರಲ್ ಆದಂತಹ ಈ ವೀಡಿಯೋಗಳು ಅವುಗಳನ್ನು ನೋಡುವ ಜನರ ಮನಸ್ಸಿಗೆ ಒಂದು ಮುದವನ್ನು ನೀಡುತ್ತದೆ.ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಾ ಸಾಗಿತ್ತು, ನಿತ್ಯ ಜೀವನದ ಒತ್ತಡಗಳಿಂದ ಬೇಸತ್ತಿರುವವರು ಒಮ್ಮೆ ಈ ವೀಡಿಯೋ ನೋಡಲೇಬೇಕು. ಏಕೆಂದರೆ ಈ ವಿಡಿಯೋವನ್ನು ಒಮ್ಮೆ ನೋಡಿದರೂ ಅದು ಮನಸ್ಸಿಗೆ ಅದೆಷ್ಟೋ ಸಮಾಧಾನ ನೀಡುವುದರ ಜೊತೆಗೆ, ಅದು ನಮ್ಮ ಮುಖದ ಮೇಲೊಂದು ಮಂದಹಾಸವನ್ನು ಕೂಡ ಮೂಡುವಂತೆ ಮಾಡುತ್ತದೆ.
ಮುಗ್ಧ ಹಾಗೂ ಮೂಕ ಜೀವಿಗಳ ನೀರಿನ ಆಟದ ದೃಶ್ಯವನ್ನು ಒಳಗೊಂಡಿರುವ ಈ ವಿಡಿಯೋ ನಿಜಕ್ಕೂ ಕೂಡ ಬಹಳ ವಿಶೇಷ ಹಾಗೂ ವಿಶಿಷ್ಠವಾಗಿದೆ.

ಅಂದವಾದ ಈ ವೀಡಿಯೋದಲ್ಲಿ ನಾವು ಬಾತುಕೋಳಿಗಳ ಗುಂಪೊಂದನ್ನು ನೋಡಬಹುದಾಗಿದೆ. ಕೆಲವು ಬಾತುಕೋಳಿಗಳು ನೀರಿನಲ್ಲಿ ಅದಾಗಲೇ ಈಜುತ್ತಾ ಇದ್ದರೆ ಇನ್ನು ಕೆಲವು ಆ ಜಲಾಶಯದ ಕಟ್ಟೆಯ ಮೇಲೆ ನಿಂತು ತಾವು ಕೂಡಾ ನೀರೊಳಗೆ ಇಳಿಯಲು ಸಜ್ಜಾಗುತ್ತಿವೆ. ಹಾಗೆ ನೋಡುವಾಗಲೇ ನಮಗೆ ಒಂದು ವಿಶೇಷವಾದ ಹಾಗೂ ಬಹಳ ಆಕರ್ಷಕ ಎನಿಸುವ ಸನ್ನಿವೇಶವು ಎದುರಾಗುತ್ತದೆ. ಜಲಾಶಯದ ಕಟ್ಟೆಯ ಮೇಲಿಂದ ನೀರೊಳಗೆ ಹೋಗುವ ಜಾಗದಲ್ಲಿ ಇಳಿಜಾರದ ಕಟ್ಟೆಯಂತಹ ನಿರ್ಮಾಣವನ್ನು ಮಾಡಲಾಗಿದೆ. ಅದು ಚಿಕ್ಕ ಮಕ್ಕಳಾಡುವ ಜಾರಬಂಡಿಯಂತೆ ಕಾಣುತ್ತದೆ.

ಆ ಇಳಿಜಾರಾದ ಕಟ್ಟೆಯನ್ನು ನೋಡಿದ ಒಂದು ಬಾತುಕೋಳಿ ತನಗೇನೋ ಉಪಾಯ ಹೊಳೆಯಿತು ಎನ್ನುವಂತೆ ಅದು ನೀರಿಗೆ ಇಳಿಯಲು, ಇಳಿಜಾರಿನ ಮೇಲೆ ಕುಳಿತು ಸಣ್ಣ ಮಕ್ಕಳ ಹಾಗೆ ಜಾರಿಕೊಂಡು ನೀರಿನೊಳಕ್ಕೆ ಹೋಗಿದೆ. ಆ ಬಾತುಕೋಳಿ ನೀರಿನೊಳಕ್ಕೆ ಸರ್ ಎಂದು ಜಾರಿ ಹೋಗಿದ್ದನ್ನು ನೋಡಿದ ಇತರೆ ಬಾತುಕೋಳಿಗಳು ಕೂಡ ಅದನ್ನೇ ಅನುಕರಿಸಿ, ಒಂದಾದ ನಂತರ ಮತ್ತೊಂದು ಮಕ್ಕಳ ಹಾಗೆ ಜಾರ ಬಂಡಿಯ ಮೇಲೆ ಜಾರುತ್ತಾ ನೀರಿನೊಳಕ್ಕೆ ಹೋಗಿ ಸಂಭ್ರಮಿಸಿವೆ. ಬಾತುಕೋಳಿಗಳ ಈ ಆಟ ಬಹಳ ಮನಮೋಹಕವಾಗಿ ಕಾಣುತ್ತದೆ.

ವಿಡಿಯೋ ನೋಡಿ

ಈ ವಿಡಿಯೋವನ್ನು ಈಗಾಗಲೇ 1 ಲಕ್ಷ 22 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 6 ಸಾವಿರಕ್ಕಿಂತ ಅಧಿಕ ಜನ ಇಷ್ಟಪಟ್ಟಿದ್ದು ಸುಮಾರು ಒಂದು ಸಾವಿರ ಜನ ಇದನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಮೊದಲನೆಯ ಬಾತುಕೋಳಿ ಯನ್ನು ಕೂಲೆಸ್ಟ್ ಕಿಡ್ ಇನ್ ದಿ ಗ್ರೂಪ್ ಎಂದು ಹೊಗಳಿದ್ದಾರೆ. ಬಹಳಷ್ಟು ಜನರು ಈ ದೃಶ್ಯ ನೋಡಲು ಬಹಳ ಸುಂದರವಾಗಿದೆ ಎಂದು ಹೊಗಳಿಕೆಯನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು ಬಾತುಕೋಳಿಗಳು ಎಷ್ಟು ವ್ಯವಸ್ಥಿತವಾಗಿ ಮತ್ತು ವಿನಮ್ರವಾಗಿ ವರ್ತಿಸಿವೆ ಇಂದು ಮೆಚ್ಚುಗೆ ನೀಡಿದ್ದಾರೆ.‌