Video: ಬಿಲದೊಳಗೆ ನುಗ್ಗಿ ಕೊಬ್ರಾ ಹಾವನ್ನೇ ಬಾಯಲ್ಲಿ ಹಿಡಿದು ತಂದಿತು ಇನ್ನೊಂದು ಹಾವು..!ನಂತರ ಮಾಡಿದ್ದೇನು ನೋಡಿ?

ಕಾಡಿನ ಜಗತ್ತು ತುಂಬಾ ಖತರ್ನಾಕ್ ಜೀವ ಜಂತುಗಳಿಂದ ತುಂಬಿಹೋಗಿದೆ. ಇವುಗಳಲ್ಲಿ ಕೆಲವು ಪ್ರಾಣಿಗಳು ತುಂಬಾ ಚಿಕ್ಕದಿದ್ದರೂ ಸಹ ದೊಡ್ಡ ಪ್ರಾಣಿಗಳ ಬೇಟೆಯನ್ನು ಸಹಜವಾಗಿ ಆಡುತ್ತವೆ. ಒಂದು ಹಾವು ಬಿಲದೊಳಗೆ ನುಗ್ಗಿ ಕೋಬ್ರಾ ಹಾವನ್ನೇ ಬಾಯಲ್ಲಿ ಹಿಡಿದು ಹೊರಗೆ ತಂದಿದೆ. ಈ ದೃಶ್ಯದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ್ ಗಳಲ್ಲಿ ಕಾಣಲು ಸಿಗುತ್ತಿದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ಒಂದು ಹಾವು ಕೋಬ್ರಾ ಹಾವಿನ ಬೇಟೆಯಾಡುವ ಸಲುವಾಗಿ ನೇರ ಬಿಲದಲ್ಲಿಯೇ ನುಗ್ಗಿದೆ. ವಿಡಿಯೋದಲ್ಲಿ ಸ್ಪಷ್ಟವಾಗಿ ಈ ದೃಶ್ಯವನ್ನು ಕಾಣಬಹುದಾಗಿದೆ. ಹಾವಿಗೆ ಬಹುಶಃ ಬಿಲದಲ್ಲಿ ತನಗೆ ಬೇಕಾದ ಆಹಾರವಿದೆ ಎಂದು ಮೊದಲೇ ಗೊತ್ತಾಗಿರಬಹುದು. ಹಾಗಾಗಿ ಹಾವು ಬಿಲದೊಳಗೆ ನುಗ್ಗಿ ಕೋಬ್ರಾ ಹಾವನ್ನು ಹಿಡಿದು ತನ್ನ ದೇಹವನ್ನು ಮೇಲಿನಿಂದ ಗರಗರನೆ ತಿರುಗಿಸಿ ಒಳಗೆ ಇರುವ ಹಾವನ್ನು ಬಾಯಿಯಲ್ಲಿ ಹಿಡಿದುಕೊಂಡೇ ಹೊರಗೆ ಬಂದಿದೆ. ಹೊರಗೆ ತೆಗೆದ ನಂತರ ಆ ಹಾವನ್ನು ಸುಮ್ಮನೆ ಬಿಡದೆ ಸ್ವಲ್ಪ-ಸ್ವಲ್ಪ ಎನ್ನುತ್ತ ಸಂಪೂರ್ಣ ಹಾವನ್ನು ಹಾಗೆಯೇ ನುಂಗಿಬಿಟ್ಟಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by 🐍SNAKE WORLD🐍 (@snake._.world)

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ snake._.world ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ ಮತ್ತು ಲೈಕ್ ಮಾಡಿದ್ದಾರೆ.