Video: ಬೇಸಿಗೆಯ ಸುಡು ಬಿಸಿಲಲ್ಲಿ ದಾಹದಿಂದ ರಸ್ತೆಯ ಮೇಲೆ ಬಿದ್ದ ಮಂಗ, ವಾಹನ ನಿಲ್ಲಿಸಿ ಕೈಯಾರೆ ನೀರು ಕುಡಿಸಿ ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ!!

ಸದ್ಯಕ್ಕೆ ಏಪ್ರಿಲ್ ತಿಂಗಳು ಶುರುವಾಗಿದ್ದು ಸೂರ್ಯ ತನ್ನ ಅವತಾರ ಇನ್ನಷ್ಟು ತೀವ್ರ ಗೊಳಿಸುತ್ತಿದ್ದಾನೆ ಅಂದರೆ ಸದ್ಯದ ದಿನಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಾನೆ ಹೋಗುತ್ತಿದೆ. ಹೆಚ್ಚುತ್ತಿರುವ ಬಿಸಿಲಿನಿಂದ ಅನೇಕ ಸಮಸ್ಯೆಗಳು ನಿರ್ಮಾಣವಾಗುತ್ತಿವೆ. ಕೇವಲ ಮನುಷ್ಯನಿಗೆ ಅಷ್ಟೇ ಅಲ್ಲದೆ ಪ್ರಾಣಿಗಳು, ಪಕ್ಷಿಗಳು ಸಹ ಈ ಬಿಸಿಲಿನ ರೌದ್ರ ಅವತಾರ ದಿಂದ ತುಂಬಾನೇ ಬೇಸತ್ತಿವೆ. ಅಲ್ಲದೆ ಇಂದಿನ ಬಿಸಿಲಿನಿಂದ ಎಷ್ಟೋ ಜನರು ತಮ್ಮ ಪ್ರಾಣ ಸಹ ಕಳೆದುಕೊಳ್ಳುತ್ತಿದ್ದಾರೆ. ಮನುಷ್ಯ ಹೇಗಾದರೂ ಮಾಡಿ ತನ್ನ ಜೀವನವನ್ನು ರಕ್ಷಿಸಿಕೊಳ್ಳುತ್ತಾನೆ ಆದರೆ ಪ್ರಾಣಿ, ಪಕ್ಷಿಗಳ ಗತಿ ಏನು?
ಬಿಸಿಲಿನಿಂದ ಸಾಕಷ್ಟು ನಿರಡಿಕೆ ಆಗುವದು ನಮಗೆಲ್ಲ ಗೊತ್ತೇ ಇದೆ. ಆದರೆ ಮನುಷ್ಯನು ಮಾತ್ರ ಏನಾದರೂ ಮಾಡಿ ತನ್ನ ದಾಹವನ್ನು ತೀರಿಸಿಕೊಳ್ಳುವನು. ಆದರೆ ಪಾಪ ಪ್ರಾಣಿಗಳು ಏನು ಮಾಡಬೇಕು ನೀವೇ ಹೇಳಿ.

ಪ್ರಸ್ತುತವಾಗಿ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಒಂದು ಮಂಗ ನಿರಡಿಕೆ ಆಗಿ ತುಂಬಾ ಬಿಸಿಲಿನಲ್ಲಿ ಬೆಂದು ರಸ್ತೆಯ ಮೇಲೆ ಅಂಗಾತಾಗಿ ಬಿದ್ದಿತ್ತು. ಅದೇ ರಸ್ತೆಯ ಮೇಲಿಂದ ಸಾಗುತ್ತಿದ್ದ ಒಬ್ಬ ಪೊಲೀಸ್ ಅಧಿಕಾರಿಯ ಲಕ್ಷ್ಯ ಈ ಮಂಗನ ಕಡೆಗೆ ಹೋಯಿತು ತಕ್ಷಣವೇ ಆ ಅಧಿಕಾರಿ ತನ್ನ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ತನ್ನ ಬಳಿಯಲ್ಲಿದ್ದ ನೀರಿನ ಬಾಟಲ್ ನ್ನು ತಗೆದು ಮಂಗನ ಬಾಯಲ್ಲಿ ಇಟ್ಟನು ಆಗ ಮಂಗ ತಂಪಾದ ನೀರು ಕುಡಿಯುತ್ತಾ ಮೆಲ್ಲಗೆ ಎದ್ದೇಳುತ್ತದೆ ತದನಂತರ ನಿಂತುಕೊಂಡು ಸಾವಕಾಶವಾಗಿ ನೀರು ಸೇವನೆ ಮಾಡುತ್ತದೆ. ಈ ಅಧಿಕಾರಿಯ ಮಾನವೀಯತೆಯ ವೀಡಿಯೋ ಸದ್ಯಕ್ಕೆ ತುಂಬಾನೆ ವೈರಲ್ ಆಗುತ್ತಿದೆ. ನೀವು ಸಹ ಈ ವಿಡಿಯೋ ನೋಡಿ.

ವೀಡಿಯೋ ನೋಡಿ..

ಪ್ರಸ್ತುತ ವೀಡಿಯೋವನ್ನು ಐಎಎಸ್ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮುಖಾಂತರ ಶೇರ್ ಮಾಡಿದ್ದಾರೆ. ಶೇರ್ ಮಾಡುವಾಗ ಈ ಅಧಿಕಾರಿಯ ಕಾರ್ಯದ ಕುರಿತು ಹೊಗಳಿದ್ದಾರೆ. ಈ ಬೇಸಿಗೆಯ ಸಮಯದಲ್ಲಿ ಯಾವುದೇ ಪ್ರಾಣಿ, ಮನುಷ್ಯ ಮತ್ತು ಪಕ್ಷಿ ನಿರಡಿಸಿ ಬಂದರೆ ದಯವಿಟ್ಟು ನೀರಿನ ವ್ಯವಸ್ಥೆ ಮಾಡಿ ಇದು ಪುಣ್ಯದ ಕೆಲಸ.