Video: ಬೈಕ್ ಗಳನ್ನು ಹೇಗೆ ಕಳ್ಳತನ ಮಾಡುತ್ತಾರೆ ನೋಡಿ? ಅಪಾರ್ಟ್ಮೆಂಟ್ ಪಾರ್ಕಿಂಗ್ ನಲ್ಲಿಯೂ ಸಹ ಬೈಕ್ ಸುರಕ್ಷಿತವಿಲ್ಲ!!
ನೀವು ಸಹ ನಿಮ್ಮ ಬೈಕ್ ನ್ನು ಬಿಲ್ಡಿಂಗ್ ಪಾರ್ಕಿಂಗ್ ಝೋನ್ ನಲ್ಲಿ ನಿಲ್ಲಿಸಿ ಬಿಂದಾಸ್ ಆಗಿದ್ದರೆ, ನಿಮ್ಮ ಸಲುವಾಗಿಯೇ ಈ ಸುದ್ಧಿ! ಬಿಲ್ಡಿಂಗ್ ಪಾರ್ಕಿಂಗ್ ನಲ್ಲಿಯ ಬೈಕ್ ಗಳು ಸಹ ಕಳವು ಆಗುತ್ತವೆ.
ನಮ್ಮ ಬದಿಯ ರಾಜ್ಯ ಮಹಾರಾಷ್ಟ್ರದ ಉಲ್ಲಾಸನಗರ ಎಂಬಲ್ಲಿ ಇಂತಹದೇ ಒಂದು ಘಟನೆ ನಡೆದಿದೆ. ಇಲ್ಲಿ ತಮ್ಮ ಸೊಸೈಟಿ ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿರುವ ಬೈಕ್ ನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಯಾಗಿದೆ. ಈ ಘಟನೆ ಉಲ್ಲಾಸನಗರ ಕ್ಯಾಂಪ್ 3 ರಲ್ಲಿ ಈ ಕಳ್ಳತನದ ನಡೆದಿದೆ ಇದರಿಂದ ಆ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣದ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ಇದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ.
ಉಲ್ಲಾಸನಗರ ಕ್ಯಾಂಪ್ 3 ನಲ್ಲಿಯ ಸೆಕ್ಷನ್ 17 ಪರಿಸರದಲ್ಲಿ ತಾಯರಸಿಂಗ್ ದರಬಾರ್ ಇದೆ. ಈ ದರಬಾರ್ ಸಮೀಪದಲ್ಲಿರುವ ಶಿಲ್ಪಾ ಅಪಾರ್ಟ್ಮೆಂಟ್ ನಲ್ಲಿ ಕಮಲ್ ಟೆಕ್ ಚಂದ್ ಎಂಬ 65 ವರ್ಷದ ವ್ಯಕ್ತಿ ರಿಟೈರ್ಡ್ ನಂತರ ಅಲ್ಲಿಯೇ ವಾಸವಾಗಿದ್ದರು. ಅವರು ಸೋಮವಾರ ರಾತ್ರಿ ಅವರ ಸುಜುಕಿ ಎಕ್ಸಸ್ 135 ಈ ದ್ವಿಚಕ್ರ ವಾಹನವನ್ನು ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿದ್ದರು.
ಆದ್ರೆ ಮಂಗಳವಾರ ಮುಂಜಾನೆಯ ಸಮಯದಲ್ಲಿ ಅಲ್ಲಿ ಬೈಕ್ ಕಾಣಲಿಲ್ಲ. ಹೀಗಾಗಿ ಆಶ್ಚರ್ಯ ಪಟ್ಟ ವ್ಯಕ್ತಿ ಈ ಕುರಿತು ಅಲ್ಲಿದ್ದ ಸಿಸಿಟಿವಿ ಚೆಕ್ ಮಾಡಿದರು. ಅದರಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ನಸುಕಿನ ಸಮಯದಲ್ಲಿ ತಮ್ಮ ಬೈಕ್ ಕದ್ದುಕೊಂಡು ಒಯ್ಯುತ್ತಿರುವದು ಕಂಡು ಬಂದಿತು.
ವೀಡಿಯೋ ನೋಡಿ
https://twitter.com/ssidsawant/status/1592805377107980290?t=hvJnl40NM_S2FObATIOgvQ&s=19
ಕಳ್ಳತನ ಮಾಡಲು ಬಂದ ವ್ಯಕ್ತಿ ತನ್ನ ಗುರುತು ಸಿಗಬಾರದು ಎಂದು ಆತ ಜ್ಯಾಕೇಟ್ ಮತ್ತು ಬಾಯಿಗೆ ಕರವಸ್ತ್ರದಿಂದ ಕಟ್ಟಿಕೊಂಡಿದ್ದನು. ಈ ಪ್ರಕರಣದ ಕುರಿತು ಮಧ್ಯವರ್ತಿ ಪೊಲೀಸರು ದೂರು ದಾಖಲೆ ಮಾಡಿಕೊಂಡು ಕಳ್ಳನನ್ನು ಹಿಡಿಯುವ ಕಾರ್ಯದಲ್ಲಿ ನಿರತರಾಗಿದ್ದಾರೆ.