Video: ಬೈಕ್ ಪ್ರಿಯರಿಗೆ ಸಂತಸದ ಸುದ್ದಿ! ಬಸ್ಸು, ಕಾರಿನ ನಂತರ ಗಾಳಿಯಲ್ಲಿ ಹಾರುವ ವಿಶ್ವದ ಮೊದಲ ಬೈಕ್… !!

ಆಟೊಮೊಬೈಲ್ ಹವೆಯಲ್ಲಿ ಹಾರುವ ಕಾರು, ಬಸ್ಸಿನ ನಂತರ ಈಗ ಹವೆಯಲ್ಲಿ ಹಾರುವ ಬೈಕ್ ಬಂದಿದೆ. ಈ ಬೈಕ್‌ನ ಹೆಸರು AERWINS XTurismo. ಈ ಬೈಕ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಗಾಳಿಯಲ್ಲಿ ಬೈಕ್ ಹಾರುತ್ತಿರುವ ಝಲಕ್ ಬೈಕ್ ಪ್ರಿಯರ ಗಮನ ಸೆಳೆಯುತ್ತಿದೆ.

ಗಾಳಿಯಲ್ಲಿ ಹಾರಾಡುವ ಬೈಕ್ ಎಂದಾಗ ಎಷ್ಟೋ ಜನರ ಕಣ್ಣುಗಳು ಅರಳುತ್ತವೆ. ಆದರೆ ಇತ್ತೀಚೆಗೆ ಗಾಳಿಯಲ್ಲಿ ಹಾರುವ ಬೈಕ್ ಸೃಷ್ಟಿಯಾಗಿದೆ. ಈ ಬೈಕ್ ಗಾಳಿಯಲ್ಲಿ ಹಾರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೈಕ್ ಅನ್ನು ಡ್ರೋನ್‌ನಂತೆ ವಿನ್ಯಾಸಗೊಳಿಸಲಾಗಿದೆ. ಈ ಬೈಕಿನ ವಿನ್ಯಾಸ ನೋಡಿಯೇ ಈ ಬೈಕ್ ನ ಚರ್ಚೆ ತುಂಬಾ ಆಗುತ್ತಿದೆ. ಗಾಳಿಯಲ್ಲಿ ಹಾರಿದ ವಿಶ್ವದ ಮೊದಲ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಬೈಕ್ ಚರ್ಚೆಗೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

ವಿಶ್ವದ ಮೊದಲ ಹಾರುವ ಬೈಕ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. XTURISMO ಹೋವರ್ ಬೈಕು 62 mph ವೇಗದಲ್ಲಿ 40 ನಿಮಿಷಗಳವರೆಗೆ ಹಾರಬಲ್ಲದು. ಈ ಬೈಕಿನ ತೂಕವು ಸರಿಸುಮಾರು 299 ಕೆಜಿ (661 ಪೌಂಡ್) ಆಗಿದೆ. ಈ ಬೈಕಿನ ಒಂದು ಝಲಕ್ ಇತ್ತೀಚೆಗೆ ಅಮೇರಿಕಾದಲ್ಲಿ ತೋರಿಸಲಾಗಿದೆ. ಗಾಳಿಯಲ್ಲಿ ಹಾರಾಡುವ ಬೈಕ್ ಇದ್ದರೂ ಸಹ ಈ ಬೈಕು ಸಾಮಾನ್ಯರ ಕೈಗೆಟುಕುವಂತಿಲ್ಲ. ಏಕೆಂದರೆ ಸದ್ಯಕ್ಕೆ ಈ ಬೈಕ್ ಬೆಲೆ 7 ಲಕ್ಷ 77 ಸಾವಿರ ಡಾಲರ್ ನಷ್ಟಿದೆ. ಆದರೆ ಶೀಘ್ರದಲ್ಲೇ ಇಂತಹ ಬೈಕನ್ನು ಕಡಿಮೆ ಬೆಲೆಯಲ್ಲಿ ಸಹ ಉತ್ಪಾದಿಸಲಾಗುವುದು ಎಂದು ಕಂಪನಿಯ ಸಿಇಒ ಹೇಳಿದ್ದಾರೆ.

ವಿಡಿಯೋ ನೋಡಿ