Video; ಬೈಕ್ ಸವಾರ ಮಾಡಿದ ಈ ಸ್ಟಂಟ್ ನಲ್ಲಿ ಪಾಸೋ/ಫೇಲೋ? ನೇರವಾದ ಹೆಬ್ಬಂಡೆಯನ್ನೆ ಏರಲು ಪ್ರಯತ್ನಿಸಿದ ಸವಾರ.
ಜಗತ್ತಿನಲ್ಲಿ ಹೀಗೂ ಕೆಲವು ಜನರಿದ್ದಾರೆ, ಇವರಿಗೆ ಬೈಕ್ ಮೇಲೆ ಸ್ಟಂಟ್ ಮಾಡುವುದೆಂದರೆ ಚಿಕ್ಕ ಮಕ್ಕಳ ಆಟವೆನಿಸುತ್ತದೆ. ಸದ್ಯ ಈ ವಿಡಿಯೋದಲ್ಲಿ ಇದೇ ರೀತಿಯ ಒಂದು ದೃಶ್ಯವನ್ನು ನೋಡಲಿದ್ದೀರಿ. ಬೈಕ್ ಸವಾರನು ಇಲ್ಲಿ ನೇರವಾದ ಹೆಬ್ಬಂಡೆಯನ್ನು ಏರಿ ಮೇಲೆ ಹೋಗಲು ಯತ್ನಿಸಿದ್ದಾನೆ. ಆತ ಇದರಲ್ಲಿ ಯಶಸ್ಸು ಸಾಧಿಸುತ್ತಾನೆಯೋ ಅಥವಾ ಇಲ್ಲ ಎಂಬುದನ್ನು ಬನ್ನಿ ನೋಡೋಣ.
ವಿಡಿಯೋದ ದೃಶ್ಯದಲ್ಲಿ ಬೈಕ್ ಸವಾರ ದೊಡ್ಡದಾದ ಬಂಡೆಯ ಕೆಳಗೆ ಬೈಕ್ ತೆಗೆದುಕೊಂಡು ಏರುವ ತಯಾರಿಯಲ್ಲಿ ನಿಂತಿದ್ದಾನೆ. ಕೆಲವು ಕ್ಷಣಗಳ ನಂತರ ಒಮ್ಮೆಲೆ ಎಕ್ಸಲೆಟರ್ ಒತ್ತಿ ತನ್ನ ಗುರಿಯನ್ನು ಸಾಧಿಸಲು ಮುನ್ನುಗ್ಗುತ್ತಾನೆ. ಈ ಟಾಸ್ಕ್ ನಲ್ಲಿ ಬೈಕ್ ಸವಾರ ಯಾವುದೇ ಆತಂಕವಿಲ್ಲದೆ ಅಡೆತಡೆ ಇಲ್ಲದೆ ಸಹಜವಾಗಿ ಮೇಲೇರಲು ಯಶಸ್ವಿಯಾಗುತ್ತಾನೆ. ಬಂಡೆಯ ಮೇಲೆ ಆತನ ಮಿತ್ರರು ಆತನನ್ನು ಸ್ವಾಗತಿಸಲು ನಿಂತಿದ್ದಾರೆ. ಈ ರೀತಿಯ ಸ್ಟಂಟ್ ಮಾಡುವುದು ಕೆಲವೊಂದು ಸಲ ಜೀವಕ್ಕೆ ಅಪಾಯವನ್ನು ಉಂಟುಮಾಡುತ್ತದೆ. ಆದರೆ ಈ ಬೈಕ್ ಸವಾರರು ಈ ರೀತಿಯ ಸ್ಟಂಟ್ಗಳನ್ನು ಮಾಡುವ ಮೊದಲು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ಮಿತ್ರರೇ ಈ ವಿಡಿಯೋ ನೋಡಿದ ನಂತರ ಯಾರು ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಬೇಡಿ.
ವಿಡಿಯೋ ನೋಡಿ..
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಇಲ್ಲಿಯವರೆಗೆ 15.2 ಮಿಲಿಯನ್ ಜನರು ನೋಡಿದ್ದಲ್ಲದೆ ಲಕ್ಷಾವಧಿ ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ.