Video: ಬೋಟ್ ನಲ್ಲಿ ಕುಳಿತ ವ್ಯಕ್ತಿಯ ಮೇಲೆ ದಿಢೀರ್ ಅಟ್ಯಾಕ್ ಮಾಡಿದ ಮೊಸಳೆ! ನೀರಲ್ಲಿ ಬಿದ್ದ ವ್ಯಕ್ತಿ.. ಮುಂದೆ…
ನಾರ್ಥ ಕೆರೊಲಿನಾ ಕಾಯ್ಕೆಯರ್ ಪ್ರಾಂತದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗಿದೆ. CNN ರಿಪೋರ್ಟ್ ಪ್ರಕಾರ ಪೀಟ್ ಜಾಯಸ್ ಹೆಸರಿನ ವ್ಯಕ್ತಿಯೊಬ್ಬ ನದಿಯ ನಿಬಿಡವಾದ ಸ್ಥಳದಲ್ಲಿ ಸಿಕ್ಕಿ ಬಿದ್ದಿದ್ದ. ಹೊರಬರಲು ಆತ ದಾರಿ ಹುಡುಕುತ್ತ ಹೊರಟಿರುವಾಗ ಮೊಸಳೆಯೊಂದು ಆಕಸ್ಮಿಕವಾಗಿ ಆತನ ಮೇಲೆ ಹಲ್ಲೆ ಮಾಡಿದೆ. ಪೀಟ್ ಜಾಯಸ್ ಯೂಟ್ಯೂಬ್ ನಲ್ಲಿ ಈ ಘಟನೆಯ ವೀಡಿಯೊವನ್ನು ಶೇರ್ ಮಾಡಿದ್ದಾನೆ. ಜೊತೆಗೆ ಅದಕ್ಕೊಂದು ಕ್ಯಾಪ್ಶನ್ ಸಹಿತ ಕೊಟ್ಟಿದ್ದಾನೆ,’ಪ್ರಾಣಿಗಳು ತುಂಬಾ ಜಬರ್ದಸ್ತ ನನ್ನ ಸ್ವಾಗತ ಮಾಡಿದವು.
ಪೀಟ್ ಜಾಯಸ್ ಹೇಳುತ್ತಾರೆ, ದೇವರ ದಯೆ ನನ್ನ ಮೇಲಿತ್ತು, ಯಾಕೆಂದರೆ ಮೊಸಳೆ ನನ್ನ ಮೇಲೆ ಅಟ್ಯಾಕ್ ಮಾಡಿದ ಕ್ಷಣ ನಾನು ಮರದ ರೆಂಬೆಯನ್ನು ತಕ್ಷಣ ಹಿಡಿದುಬಿಟ್ಟೆ. ಇಲ್ಲವಾದರೆ ನನ್ನ ಬೋಟ್ ಪೂರ್ತಿ ಪಲ್ಟಿಯಾಗಿ ಬಿಡುತ್ತಿತ್ತು. ಆಮೇಲೆ ನಾನು ಬೇರೆ ದಿಕ್ಕಿನೆಡೆಗೆ ರಭಸದಿಂದ ಮುನ್ನುಗ್ಗತೊಡಗಿದೆ. ಮೊಸಳೆ ಸ್ವಲ್ಪ ಸಮಯ ನನ್ನನ್ನು ಬೆನ್ನಟ್ಟಿತ್ತು.
NBC ನ್ಯೂಜ್ ಪ್ರಕಾರ, ಮೊಸಳೆಗೆ ನಾನು ನೋಡಿದ ನಂತರ ನನ್ನ ಬೋಟನ್ನು ವೇಗದಲ್ಲಿ ನಡೆಸಲು ಶುರು ಮಾಡಿದೆ…ಬೋಟಿನ ವೇಗದ ಗತಿಯಿಂದಾಗಿ ನನ್ನ ಬೋಟ್ ನೀರಿನಲ್ಲಿ ಪಲ್ಟಿಯಾಗುವ ಸಂಭವವೂ ಇತ್ತು. ನನಗೆ ಇವತ್ತಿಗೂ ಆ ದಿನ ನೆನಪಾದರೆ ನನ್ನ ಮೈ ನವಿರೇಳುವದು. ಮೊಸಳೆ ನನ್ನ ಮೇಲೆ ಮಾಡಿದ ಅಟ್ಯಾಕ್ ನಿಂದ ನಾನು ಸ್ವಲ್ಪ ಹೊತ್ತು ನನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದೆ, ಮತ್ತು ನೀರಲ್ಲಿ ಬಿದ್ದಿದ್ದೆ. ಅಷ್ಟೇ ಅಲ್ಲ ನನ್ನ ಮೇಲೆ ಮೊಸಳೆ ನೀರಿನಲ್ಲಿ ಮೂರು ಸಲ ಅಟ್ಯಾಕ್ ಮಾಡಿತ್ತು. ಹಾಗೆಯೇ ನೀರಿನಿಂದ ಬೋಟಿನ ಮೇಲೇರಿ ಬರಲು ಪ್ರಯತ್ನಿಸುತ್ತಿತ್ತು.
ಈ ಭಯಾನಕವಾದ ವೀಡಿಯೊವನ್ನು ಇಲ್ಲಿಯವರೆಗೆ 13 ಲಕ್ಷಕ್ಕೂ ಮೇಲ್ಪಟ್ಟು ಜನರು ನೋಡಿದ್ದಾರೆ. ಈ ವೀಡಿಯೊವನ್ನು ನೋಡಿ ಸಾವಿರಾರು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಯೂಜರ್ ಇದೊಂದು ಕೆಟ್ಟ ಕನಸಿನ ಹಾಗೆ ಇದೆ ಎಂದು ಬರೆದಿದ್ದಾನೆ. ಇನ್ನೊಬ್ಬ ಈ ದೃಶ್ಯ ತುಂಬಾ ಖತರ್ನಾಕ್ ಆಗಿದೆ.