Video; ಬ್ಯಾಡ್ಮಿಂಟನ್ ತಾರೆ P V ಸಿಂಧು ಅವರ ಟ್ರೆಂಡಿಂಗ್ ಹಾಡಿಗೆ ಡಾನ್ಸ್, ಸಾನಿಯಾ ಮಿರ್ಜಾ ಸೇರಿ ಲಕ್ಷಾವಧಿ ಸಂಖ್ಯೆಯಲ್ಲಿ ಲೈಕ್…
P V ಸಿಂಧು ಅವರಿಗೆ ನೃತ್ಯ ಮಾಡುವ ಹವ್ಯಾಸ ತುಂಬಾ ಇದೆ. ಅದಕ್ಕಾಗಿಯೇ ಅವರು ಆಗಾಗ ವಿವಿಧ ನೃತ್ಯದ ತಮ್ಮ ವೀಡಿಯೊಗಳನ್ನು ಇನ್ಸ್ಟಾ ಗ್ರಾಮ್ ಅಕೌಂಟ್ ನಿಂದ ಶೇರ್ ಮಾಡುತ್ತಾರೆ. ಈಗ ಮತ್ತೊಂದು ನೃತ್ಯದ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳು ಮನದುಂಬಿ ಲೈಕ್ ಮಾಡುತ್ತಿದ್ದಾರೆ.
ಸದ್ಯಕ್ಕೆ ಸಿಂಧು ಅವರು ಟ್ರೆಂಡಿಂಗ್ ಸಾಂಗ್ ಗೂಮಿ ಗೂಮಿ ಹಾಡಿಗೆ ಭರ್ಜರಿಯಾಗಿ ಡಾನ್ಸ್ ಪ್ರಸ್ತುತ ಮಾಡಿದ್ದಾರೆ. ಈ ನೃತ್ಯದ ಸಂದರ್ಭದಲ್ಲಿ ಬ್ಲಾಕ್ ಜೀನ್ಸ್ ಮತ್ತು ಶಾರ್ಟ್ ಟಾಪ್ ಮೇಲೆ ಜಾಕೆಟ್ ತೊಟ್ಟಿದ್ದಾರೆ. ಅವರ ಹೈಟ್ ನಿಂದಾಗಿ ಮತ್ತಷ್ಟು ಸುಂದರವಾಗಿ ಕಾಣುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಅವರು ತಮ್ಮ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಟೆನ್ನಿಸ್ ಸೂಪರ್ ಸ್ಟಾರ್ ಸಾನಿಯಾ ಮಿರ್ಜಾ ಅವರೂ ಲೈಕ್ ಮಾಡಿದ್ದಾರೆ. ಹಾಗೂ ಸುಮಾರು 3 ಲಕ್ಷ ಅಭಿಮಾನಿಗಳು ಸಿಂಧು ಅವರ ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.