Video; ಭಾರತದಲ್ಲಿ ಸ್ಟಂಟ್ ಮಾಡುವವರಿಗೇನೂ ಕಮ್ಮಿ ಇಲ್ಲ; ಚಲಿಸುವ ಟ್ರೈನ್ ನಿಂದ ಇನ್ನೊಂದು ಟ್ರೈನಲ್ಲಿ ಹಠಾತ್ ಜಿಗಿದ ಯುವಕ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಥಟ್ಟನೆ ಮಿಂಚಬೇಕೆನ್ನುವ ಹವ್ಯಾಸದಿಂದ ಯುವ ವರ್ಗ ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಲು ಹಿಂದೆ ಮುಂದೆ ನೋಡುವುದಿಲ್ಲ. ಪ್ರಸ್ತುತ ಲೇಖನದಲ್ಲಿ ತಂದ ವಿಡಿಯೋ ಇದೇ ರೀತಿಯ ಒಂದು ಸ್ಟಂಟ್ ತೋರಿಸಲಿದೆ.

ಈ ವಿಡಿಯೋದಲ್ಲಿ ಎರಡು ಲೋಕಲ್ ಟ್ರೈನ್ ಗಳು ಸಮಾಂತರವಾಗಿ ಹೋಗುತ್ತಿವೆ. ಎಷ್ಟೋ ಜನರಿಗೆ ಟ್ರೈನ್ ಎಂದರೇನೇ ದಿಗಿಲು ಬಡಿದಂತಾಗುತ್ತದೆ. ಇನ್ನು ಅದರಲ್ಲೂ ಮುಂಬೈ ಅಂಥ ಲೋಕಲ್ ಟ್ರೈನ್ ಗಳ ಹೆಸರು ತೆಗೆದರೆ ಸಾಕು ಮುಗಿದೇ ಹೋಯಿತು ಕಣ್ಣಿಗೆ ಕತ್ತಲೆಯೇ ಬರುತ್ತದೆ. ಅಂತದ್ದರಲ್ಲಿ ವ್ಯಕ್ತಿಯೊಬ್ಬ ಚಲಿಸುವ ಲೋಕಲ್ ಟ್ರೈನಿಂದ ಇನ್ನೊಂದು ರನ್ನಿಂಗ್ ಟ್ರೈನ್ ನಲ್ಲಿ ಜಿಗಿದಿದ್ದಾನೆ ಎಂದರೆ ಹೇಗೆ? ಈ ದೃಶ್ಯವೂ ಮೊಬೈಲ್ ಒಂದರಲ್ಲಿ ಸೆರೆಯಾಗಿದೆ. ಈ ರೀತಿಯ ಅಪಾಯದಿಂದ ಕೂಡಿದ ಸ್ಟಂಟ್ ಗಳನ್ನು ಎಂದಿಗೂ ಮಾಡಲು ಪ್ರಯತ್ನಿಸಬೇಡಿ.

ನೋಡಿ ಈ ವಿಡಿಯೋ…

 

View this post on Instagram

 

A post shared by Abhi Yadav (@abhi_yadav_739890)

ಪ್ರಸ್ತುತ ಎದೆ ನಡುಗುವ ಈ ವಿಡಿಯೋವನ್ನು ಎಲ್ಲರ ಫೇವರೆಟ್ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು abhi _yadav_739890 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಸಾಕಷ್ಟು ವೀಕ್ಷಣೆಯನ್ನು ಪಡೆದಿದೆ.