Video; ಭಾರತೀಯ ವಾಯುಪಡೆ 90 ನೇ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಮಾಡಿತು ಅಮೋಘ ಕರಾಮತ್ತು!

ಭಾರತ ಈಗ ಜಗತ್ತಿನಲ್ಲಿ ಒಂದು ಪ್ರಬಲ ರಾಷ್ಟ್ರವಾಗಿ ಹೊಮ್ಮುತ್ತಿದೆ. ಮೊದಲಿಗಿಂತಲೂ ಭಾರತ ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಪ್ರಬಲವಾಗತೊಡಗಿದೆ. ಇದರ ಜೊತೆಗೆ ನಮ್ಮ ದೇಶವು ಸಂರಕ್ಷಣೆಯಲ್ಲಿಯೂ ಶಕ್ತಿಯುತ ರಾಷ್ಟ್ರಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.

ಈಗಷ್ಟೇ ಭಾರತದ ವಾಯುಪಡೆಗೆ 90 ವರ್ಷಗಳು ಕಳೆದವು. ಈ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 8 ರಂದು ಚಂಡಿಗಡದಲ್ಲಿ ಒಂದು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಾಯುಪಡೆಯ ಜವಾನರು ಮಾಡಿ ತೋರಿಸಿದ ಅದ್ಭುತ ಹಾಗೂ ಅಮೋಘ ಕರಾಮತ್ತು ನಿಜಕ್ಕೂ ಅವರ್ಣನೀಯವಾಗಿದೆ. ವಾಯುಪಡೆಯ ಜವಾನರು ತೋರಿದ ಟ್ಯಾಲೆಂಟ್ ನ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ಸೈಟ್ ಆದ ಟ್ವೀಟರ್ ನಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ IAF chief Air Chief Marshal ವಿವೇಕ್ ರಾಮ್ ಚೌದರಿ ಅವರು ಉಪಸ್ಥಿತರಿದ್ದರು.

ನೋಡಿ ಜವಾನರ ಈ ಅದ್ಭುತ ಚಾಲಾಕಿತನ.

ಪ್ರಸ್ತುತ ವಿಡಿಯೋವನ್ನು ANI ತನ್ನ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದೆ. ಈ ವಿಡಿಯೋ ಇಲ್ಲಿಯವರೆಗೆ ಸುಮಾರು 50 ಸಾವಿರ ವೀಕ್ಷಣೆಯನ್ನು ಪಡೆದಿದೆ.