Video; ಭಿಕ್ಷುಕ ತೋರಿಸಿದ ಚಾಲಾಕಿತನ! ಭಿಕ್ಷೆ ಬೇಡಿಯಾದ ಮೇಲೆ ಮಾಡಿದ ಕೃತ್ಯ ನೋಡಿದರೆ ದಂಗಾಗುವದೊಂದೆ ಬಾಕಿ..
ಸೋಶಿಯಲ್ ಮೀಡಿಯಾದಲ್ಲಿ ಬಿತ್ತರವಾಗುವ ಅನೇಕ ವಿಡಿಯೋಗಳು ಮನುಷ್ಯನಿಗೆ ಮೇಲಿಂದ ಮೇಲೆ ಯೋಚಿಸುವಂತೆ ಮಾಡುತ್ತವೆ. ಪ್ರಸ್ತುತ ವಿಡಿಯೋವನ್ನು ನೋಡಿದ ನಂತರ ಮನುಷ್ಯ ದಂಗಾಗುತ್ತಾನೆ. ಇಲ್ಲಿಯ ವಿಡಿಯೋ ನೋಡಿದ ನಂತರ ನಿಜಕ್ಕೂ ಈ ರೀತಿಯ ಜನರೂ ಇದ್ದಾರೆಯೇ? ಎಂಬ ಯೋಚನೆ ತಲೆಯಲ್ಲಿ ಸೇರುತ್ತದೆ.
ವಿಡಿಯೋದಲ್ಲಿ ವಿಕಲಚೇತನ ವ್ಯಕ್ತಿಯು ಮಾಡಿದ ಕೃತ್ಯವನ್ನು ನೋಡಿದ ನಂತರ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ. ಕಾರಣ ಆತನ ವಾಸ್ತವ ಪರಿಸ್ಥಿತಿಯ ದೃಶ್ಯ ನೋಡಿದ ಮೇಲೆ ನೋಡುಗರಿಗೆ ಅನುಕಂಪದ ಹೊರತಾಗಿ ಸಿಟ್ಟು ನೆತ್ತಿಗೇರುತ್ತದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಿಕಲಚೇತನ ವ್ಯಕ್ತಿಯು ಭಿಕ್ಷೆ ಬೇಡಿಯಾದನಂತರ ಪುಟ್ ಪಾತ್ ಮೇಲಿಂದ ತನ್ನ ಕಾಲುಗಳನ್ನು ಎಳೆದುಕೊಳ್ಳುತ್ತಾ ಬದಿಯಲ್ಲಿದ್ದ ಗೇಟಿನ ಮುಖಾಂತರ ಒಂದು ಬೀಳು ಮನೆಯ ಅಂಗಳದಲ್ಲಿ ಪ್ರವೇಶಮಾಡುತ್ತಾನೆ. ಒಳಗೆ ಬಂದು ಮೊದಲು ಆತ ಎಲ್ಲ ಕಡೆಗೂ ಕಣ್ಣುಗಳನ್ನು ಹಾಯಿಸಿ ನೋಡುತ್ತಾನೆ, ತದನಂತರ ಅಲ್ಲಿ ಯಾರೂ ಇಲ್ಲದ್ದು ಗಮನಿಸಿದ ಮೇಲೆ ತನ್ನ ಬಟ್ಟೆಗಳನ್ನು ಬೇಗಬೇಗನೆ ಬದಲಾಯಿಸಲು ಶುರುಮಾಡುತ್ತಾನೆ. ತನ್ನ ಎಲ್ಲ ಬಟ್ಟೆಗಳನ್ನು ಬದಲಾಯಿಸಿದ ನಂತರ ಒಂದು ಕಾಲ್ ಮಾಡುತ್ತಾನೆ. ಅಷ್ಟರಲ್ಲಿ ಒಬ್ಬ ಬೈಕ್ ಸವಾರ ವಿಕಲಚೇತನ ಹತ್ತಿರ ಬಂದು ನಾಟಕ ಮಾಡುತ್ತಿರುವ ಭಿಕ್ಷುಕನನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾನೆ. ಹೀಗೆ ಕೆಲವೇ ಕ್ಷಣಗಳಲ್ಲಿ ಭಿಕ್ಷುಕ ತನ್ನ ರೂಪವನ್ನೇ ಬದಲಾಯಿಸಿಕೊಳ್ಳುತ್ತಾನೆ. ಈ ವಿಡಿಯೋ ನೋಡಿದವರು ಅಕ್ಷರಶ: ದಂಗಾಗಿ ಬಿಡುತ್ತಾರೆ.
ವಿಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋದಲ್ಲಿಯ ಈ ರೀತಿಯ ದೃಶ್ಯ ನೀವು ಈ ಮೊದಲು ನೋಡಿರಲಿಕ್ಕಿಲ್ಲ. ಪ್ರಸ್ತುತ ವಿಡಿಯೋವನ್ನು gieddee ಹೆಸರಿನ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಜೊತೆಗೆ ಕ್ಯಾಪ್ಷನ್ ನಲ್ಲಿ ‘ಡ್ಯೂಟಿ ಮುಗಿಸಿ ಮನೆಗೆ ಹೋಗುವ ತಯಾರಿಯಲ್ಲಿರುವ ಒಂದು ಪರಿಶ್ರಮಿ ವ್ಯಕ್ತಿ’ ಇನ್ನೊಬ್ಬ ‘ಟೋಪಿ ಹಾಕುವ ವ್ಯಕ್ತಿ’ ಎಂದಿದ್ದಾನೆ.