Video; ಮಕ್ಕಳು ಚಿಯರ್ಸ್ ಮಾಡಲು ಪುಟ್ಟನ ಮೈಯಲ್ಲಿ ಜೋಶ್ ಸಂಚಾರ; ಆಮೇಲೆ ಆತ ಹೊಡೆದ ಕಿಕ್ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿರಿ…
ಚಿಕ್ಕ ಮಕ್ಕಳು ಆಟ ಆಡುವದನ್ನು ನೋಡುವದೆಂದರೆ ಎಲ್ಲರಿಗೂ ತುಂಬಾ ಇಷ್ಟವೇ. ಅವರಾಡುವ ಮುಗ್ಧ ಆಟ ಎಂಥ ಕಟು ಹೃದಯರವರನ್ನು ಸೆಳೆಯುತ್ತದೆ. ಅದರಲ್ಲೂ ಆಟ ಆಡುವಾಗ ಮಧ್ಯದಲ್ಲಿ ನಡೆಯುವ ಮಕ್ಕಳ ತುಂಟಾಟಗಳು ನೋಡುಗರಿಗೆ ತುಂಬಾ ಇಷ್ಟವಾಗುತ್ತದೆ. ಮಕ್ಕಳ ಆಟಗಳಲ್ಲಿ ಯಾವುದೇ ನಿಯಮಗಳು ಇರುವುದಿಲ್ಲ. ಹೀಗಾಗಿ ಅದು ನೋಡಲು ಇನ್ನಷ್ಟು ಸ್ವಾರಸ್ಯಕರವಾಗಿರುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಆಟದ ವಿಡಿಯೋ ಒಂದು ಸದ್ಯ ಓಡಾಡುತ್ತಿದೆ. ಇಲ್ಲಿ ಮನೆಯ ಪುಟ್ಟ ಅಂಗಳದಲ್ಲಿ ಮಕ್ಕಳೆಲ್ಲರೂ ಕೂಡಿ ಪುಟ್ಬಾಲ್ ಪ್ರಾಕ್ಟಿಸ್ ಮಾಡುತ್ತಿರುವ ಹಾಗೆ ಕಂಡುಬರುತ್ತಿದೆ. ಈ ಮಧ್ಯೆ ಮಕ್ಕಳೆಲ್ಲರೂ ಒಬ್ಬ ಪುಟ್ಟನಿಗೆ ಜೋರು ಜೋರಾಗಿ ಚಿಯರ್ಸ್ ಮಾಡುತ್ತಿದ್ದಾರೆ. ಈ ಚಿಯರ್ಸ್ ನಿಂದಾಗಿ ಪುಟ್ಟನ ಮೈಯಲ್ಲಿ ಒಂದು ರೀತಿಯ ಪವರ್, ಜೋಶ್ ಸಂಚಾರವಾದಂತಾಗಿ ಆತ ಫುಟ್ಬಾಲ್ ಗೆ ಕಿಕ್ ಹೊಡೆಯಲು ಓಡೋಡಿ ಬರುತ್ತಾನೆ.
ಪುಟ್ಟ ವೇಗವಾಗಿ ಕಿಕ್ ಹೊಡೆಯಲೇನೋ ಬರುತ್ತಾನೆ, ಆದರೆ ಪಾಪ ಆತ ಕಿಕ್ ಕೊಡುವ ಕಾಲು ಕೂದಲೇಳೆಯ ಅಂತರದಲ್ಲಿ ಫುಟ್ಬಾಲ್ ಮೇಲಿನಿಂದ ಹಾಯ್ದು ಹೋಗುವದರಿಂದ ಫುಟ್ಬಾಲ್ ಗೆ ಕಿಕ್ ಕೂಡದೆ ಮಿಸ್ ಆಗುತ್ತದೆ. ಆಮೇಲೆ ಆತ ಅಲ್ಲಿಯೇ ಬ್ಯಾಲೆನ್ಸ್ ತಪ್ಪಿ ಕುಸಿಯುತ್ತಾನೆ. ಪುಟ್ಟಣ್ಣನ ಈ ದೃಶ್ಯ ನೋಡಲು ನಿಜಕ್ಕೂ ತುಂಬಾ ತಮಾಷೆಯಾಗಿದೆ. ಅಲ್ಲಿರುವ ಮಕ್ಕಳು ಸಹ ಪುಟ್ಟನ ಈ ಖಾಲಿ ಕಿಕ್ ನೋಡಿ ನಕ್ಕಿದ್ದೇ ನಕ್ಕಿದ್ದು. ಇವರಿಗೆ ಕೋಚಿಂಗ್ ನೀಡುವ ಟ್ರೈನರ್ ಸಹ ಬಿದ್ದು ಬಿದ್ದು ನಕ್ಕಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ meemlogy and ghantaa ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋಗೆ 88 ಸಾವಿರ ಜನರು ಲೈಕ್ ಮಾಡಿದ್ದಾರೆ.