VIDEO; ಮಗಳ ಮದುವೆಯಲ್ಲಿ ಮನಬಿಚ್ಚಿ ಮಾಡಿದನು ತಂದೆ ಭರ್ಜರಿ ಡಾನ್ಸ್! ಜೋಶ್ ನಿಂದ ಎಪ್ರಿಷಿಯಟ್ ಮಾಡಿದರು ಸಂಬಂಧಿಕರು.
ಒಬ್ಬ ತಂದೆ ತನ್ನ ಮಗಳ ಮದುವೆ ಸದಾ ನೆನಪಿನಲ್ಲಿಡುವ ಸಲುವಾಗಿ ಒಂದಲ್ಲ ಸಾವಿರಾರು ಪ್ರಯತ್ನಗಳನ್ನು ಮಾಡುತ್ತಾನೆ. ಆತ ತನ್ನ ಮಗಳಿಗೆ ಜಗತ್ತಿನ ಎಲ್ಲಾ ಖುಷಿಗಳನ್ನು ನೀಡುವ ಪರಮೋಚ್ಚ ಪ್ರಯತ್ನದಲ್ಲಿ ಇರುತ್ತಾನೆ. ಆಕೆಯ ಬೇಕುಬೇಡಗಳನ್ನು ಕ್ಷಣದಲ್ಲಿ ಪೂರೈಸಲು ತಂದೆ ಸದಾ ತಯಾರಿಯಲ್ಲಿರುತ್ತಾನೆ. ಮಗಳ ಮದುವೆ ಒಬ್ಬ ತಂದೆಯ ಪಾಲಿಗೆ ಮಹತ್ವದ ದಿವಸವಾಗಿರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ದಿವಸದ ಒಂದು ವಿಡಿಯೋ ಸದ್ಯ ವೈರಲ್ ಆಗುತ್ತಿದೆ.
ಈ ವಿಡಿಯೋದಲ್ಲಿ ತಂದೆಯು ತನ್ನ ಮಗಳ ಮದುವೆಯಲ್ಲಿ ತುಂಬಾ ಖುಷಿಯಿಂದ ನೃತ್ಯ ಮಾಡಿದ್ದಾನೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ತಂದೆ ತನ್ನ ಮಗಳ ಜೊತೆಗೆ ಮದುವೆಯ ವಾತಾವರಣದಲ್ಲಿ ಸಖತ್ ಧಮಾಲ್ ಮಾಡಿದ್ದಾನೆ. ಪ್ರಸ್ತುತ ದೃಶ್ಯದಲ್ಲಿ 2000 ದಶಕದ ಪ್ರಾರಂಭದ ಹಾಡಿಗೆ ಇಬ್ಬರೂ ತಮ್ಮ ಹೆಜ್ಜೆಯನ್ನು ಹಾಕಿರುವುದು ಕಂಡುಬರುತ್ತದೆ. ಇಲ್ಲಿ ಮಗಳು ತನ್ನ ತಂದೆಯ ಜೊತೆಗೆ ಅದ್ಭುತವಾದ ಮೂವ್ಸ್ ಗಳನ್ನು ತೋರಿಸಿದ್ದಾಳೆ. ಆಕೆ ಜೊತೆಗೆ ತಂದೆಯು ಸಹ ಎನರ್ಜೆಟಿಕ್ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡುತ್ತಾ ಇಂಟರ್ನೆಟ್ ಯೂಸರ್ ಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾನೆ. ಸುಮಾರು 65 ರಿಂದ 70 ವರ್ಷ ವಯಸ್ಸಿನ ಈ ತಂದೆಯ ಡ್ಯಾನ್ಸ್ ನೋಡಿ ನೇಟಿಜನ್ಸ್ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ನೋಡಿ ತಂದೆ ಮಾಡಿದ ಡಾನ್ಸ್ ನ ಈ ವಿಡಿಯೋ…
View this post on Instagram
ಮಗಳು instagram ನಲ್ಲಿ rose.tintedlife ಹೆಸರಿನ ಐಡಿ ಇಂದ ಈ ವಿಡಿಯೋವನ್ನು ಶೇರ್ ಮಾಡಿ ‘ನನ್ನ ತಂದೆಗೆ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಕಲಿಸಲು ನನಗೆ ಎಷ್ಟೊಂದು ಖುಷಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದಿದ್ದಾಳೆ. 21 ಆಗಸ್ಟ್ ನಂದು ಶೇರ್ ಮಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾ ಯೂಸರ್ ಗಳಿಗೆ ತುಂಬಾನೇ ಇಷ್ಟವಾಗಿದೆ. ಇಲ್ಲಿಯವರೆಗೆ ಈ ವಿಡಿಯೋ 2 ಲಕ್ಷಕ್ಕೂ ಮೀರಿ ವೀಕ್ಷಣೆಯನ್ನು ಪಡೆದಿದೆ. ನೆಟ್ಟಿಗರು ವಿಡಿಯೋ ನೋಡಿದ ನಂತರ ಅನೇಕ ರೀತಿಯ ಸ್ಪೂರ್ತಿ ತುಂಬಿದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.