Video; ಮದುವೆ ಮಂಟಪಕ್ಕೆ ಕುದುರೆ ಏರಿ ಬಂದ ಮದುಮಗ, ಅದೇ ಕುದುರೆ ಮೇಲೆ ಕ್ಷಣದಲ್ಲಿ ಎಸ್ಕೇಪ್! ಕಾರಣವಿಷ್ಟೇ…
ಮದುವೆಯಲ್ಲಿ ಅನೇಕ ವಿಚಿತ್ರ ಪ್ರಸಂಗಗಳು ಘಟಿಸುತ್ತವೆ. ಅದರಲ್ಲೂ ಈಗೀಗ ಆ ಎಲ್ಲ ಘಟನೆಗಳು ವಿಡಿಯೋದಲ್ಲಿ ಸೆರೆಯಾಗುತ್ತಿವೆ. ಅಷ್ಟೇ ಅಲ್ಲ, ಆ ರೀತಿಯ ರೋಚಕವಾದ ವಿಡಿಯೋಗಳು ನೆಟ್ಟಿಗರಿಗೆ ನೋಡಲು ತುಂಬಾ ಇಷ್ಟವೂ ಆಗುತ್ತವೆ. ಹೀಗಾಗಿ ಇವು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತವೆ.
ಮದುವೆಯಲ್ಲಿ ನಡೆದ ಇದೇ ರೀತಿಯ ಒಂದು ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಇಲ್ಲಿ ಮದುಮಗನ ಮೆರವಣಿಗೆ ಊದಿಸುತ್ತ, ಬಾರಿಸುತ್ತ ಕುದುರೆಯ ಮೇಲೆ ಜೋರಾಗಿ ಮದುವೆ ಮಂಟಪಕ್ಕೆ ಬಂದಿದೆ. ಮದುವೆಯ ಎಲ್ಲ ವಿಧಿ-ವಿಧಾನಗಳು ಸರಿಯಾಗಿ ನಡೆಯುತ್ತಿವೆ. ಅಂಥದ್ದರಲ್ಲಿ ಒಂದು ಇನ್ಸಿಡೆಂಟ್ ನಡೆದುಹೋಗುತ್ತದೆ. ಅದೇನೆಂದರೆ, ಮದುವೆಯಲ್ಲಿಯ ಜನರ ಗದ್ದಲ, ಓಡಾಟ ಮತ್ತು ತಾರಕಕ್ಕೇರಿದ ಮ್ಯೂಸಿಕ್ ನಿಂದಾಗಿ ಕುದುರೆಯು ಮೊದಲೇ ಬೇಸತ್ತಿತ್ತು. ಅಂಥದ್ದರಲ್ಲಿ ಕುದುರೆಯ ಮುಂದೆ ಪಟಾಕಿ ಸಿಡಿಸಿದ್ದೇ ದೊಡ್ಡ ಕಾರಣವಾಗಿ ಕುದುರೆ ಒಂದೇ ಒಂದು ಕ್ಷಣವೂ ಅಲ್ಲಿ ನಿಲ್ಲದೆ ಗಾಳಿಯಂತೆ ರಭಸದಲ್ಲಿ ಮದುಮಗನಿಗೆ ಜೊತೆಯಲ್ಲಿ ತೆಗೆದುಕೊಂಡೇ ಎಸ್ಕೇಪ್ ಆಗಿ ಬಿಟ್ಟಿದೆ. ಕುದುರೆಯನ್ನು ಹ್ಯಾಂಡಲ್ ಮಾಡುವವ ಅದರ ಹಿಂದೆ ಓಡಿದನೇನೋ ನಿಜ ಆದರೆ ಕುದುರೆ ಮಾತ್ರ ಅಲ್ಲಿ ಎಲ್ಲಿಯೂ ನಿಲ್ಲದೆ ಶರವೇಗದಲ್ಲಿ ಪಲಾಯನ ಮಾಡಿತ್ತು.
ವಿಡಿಯೋ ನೋಡಿ
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಘಂಟಾ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋಗೆ ಇಲ್ಲಿಯವರೆಗೆ 4 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆ ದೊರಕಿವೆ.