Video: ಮಳೆಗೆ ಕಿತ್ತು ಹೋದ, ಸರಿಯಾಗಿ ನಡೆಯಲಿಕ್ಕೂ ಬಾರದ ಅಡಿ ಅಗಲದ ಸೇತುವೆಯ ಮೇಲಿಂದ ಬುಲೆಟ್ ನಡೆಸಿದ ಭೂಪ..!
ತಮ್ಮ ಜೀವವನ್ನೇ ಅಪಾಯದಲ್ಲಿ ಸಿಲುಕಿಸಿ ಸ್ಟಂಟ್ ಮಾಡುವವರ ಸಂಖ್ಯೆ ಈ ಜಗತ್ತಿನಲ್ಲಿ ಕಡಿಮೆ ಏನಿಲ್ಲ. ಇಂಥವರು ತಮ್ಮ ಟ್ಯಾಲೆಂಟ್ ನಿಂದ ಜಗತ್ತನ್ನೇ ಬೆರಗು ಗೊಳಿಸುತ್ತಾರೆ. ಕೆಲವರು ಇಂಥ ಸ್ಟಂಟ್ ಗಳನ್ನು ಟೈಮ್ ಪಾಸ್ ಗಾಗಿಯೂ ಮಾಡುತ್ತಿರುತ್ತಾರೆ. ಇಂಥವರ ಸ್ಟಂಟ್ ಕೆಲವೊಮ್ಮೆ ಫೇಲ್ ಆಗಿ ಬಿಡುತ್ತದೆ, ಆಗ ತಮ್ಮ ಜೀವಕ್ಕೆ ಹಠಾತ್ ಅಪಾಯ ತಂದು ಕೊಳ್ಳುತ್ತಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬೈಕ್ ಸವಾರನೊಬ್ಬನ ಸ್ಟಂಟ್ ಒಂದು ತುಂಬಾ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಬೈಕ್ ಸವಾರ ಬುಲೆಟ್ ತೆಗೆದುಕೊಂಡು ಒಂದು ಸ್ಟಂಟ್ ಮಾಡಿದ್ದಾನೆ. ದೃಶ್ಯದಲ್ಲಿ ಕಂಡು ಬರುವ ಪ್ರಕಾರ ಜೋರಾದ ಮಳೆಗೆ ರಸ್ತೆ ಮತ್ತು ಸೇತುವೆ ಎಲ್ಲವೂ ರಭಸವಾಗಿ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗಿದೆ. ಸೇತುವೆಯ ಬದಿಯಲ್ಲಿರುವ ರಕ್ಷಣೆಯ ಗೋಡೆ ಮಾತ್ರ ಹಾಗೆಯೇ ನಿಂತಿದೆ. ಅದೇ ಗೋಡೆಯ ಮೇಲಿಂದ ಪ್ರಸ್ತುತ ಬೈಕ್ ಸವಾರ ಭಾರವಾದ ಬುಲೆಟ್ ತೆಗೆದುಕೊಂಡು ಅಡಿಯಗಲದ ಜಾಗದಲ್ಲಿಂದಲೇ ಬುಲೆಟ್ ಬೈಕ್ ನ್ನು ನುಗ್ಗಿಸಿಕೊಂದು ತುಂಬಾ ಚೆನ್ನಾಗಿ ಬ್ಯಾಲೆನ್ಸ್ ಮಾಡಿಕೊಂಡು ಸಹಜವಾಗಿ ಅತ್ತ ಕಡೆಯಿಂದ ಈ ಕಡೆ ಬರುತ್ತಾನೆ. ಈ ದೃಶ್ಯ ನೋಡಲು ತುಂಬಾ ಹೆದರಿಕೆಯನ್ನು ಉಂಟು ಮಾಡುತ್ತದೆ. ವಿಡಿಯೋ ನೋಡುವಾಗ ಬೈಕ್ ಸವಾರ ಎಲ್ಲಿ ಸೇತುವೆಯ ಮೇಲಿಂದ ಕೆಳಗೆ ನೀರಿನಲ್ಲಿ ಬೀಳುತ್ತಾನೆ ಏನೋ ಎಂಬಂತೆ ಸಂಶಯ ಮೂಡುತ್ತದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ harishraj1942 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 3.5 ಮಿಲಿಯನ್ ಗಿಂತಲೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಮತ್ತು ಸಾವಿರಾರು ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ವಿವಿಧ ಪ್ರಕಾರದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬನು ‘ದಯವಿಟ್ಟು ಹೀಗೆಲ್ಲ ಮಾಡಬೇಡಿ ಜೀವ ತುಂಬಾ ಬೆಲೆಯುಳ್ಳದ್ದು’ ಎಂದಿದ್ದಾನೆ.