Video; ಮೀನಿನ ಬೇಟೆಯಾಡಲು ಹಕ್ಕಿ ಉಪಯೋಗಿಸಿತು ಮನುಷ್ಯನ ಹಾಗೆ ಕೌಶಲ್ಯ; ವಿಡಿಯೋ ನೋಡಿದ ನೆಟ್ಟಿಗರಾದರು ಬೆರಗು!
ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಕ್ಯೂಟ್ ವಿಡಿಯೋಗಳು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತವೆ. ಈ ರೀತಿಯ ವಿಡಿಯೋಗಳು ಪೋಸ್ಟ್ ಮಾಡುವುದೇ ತಡ ನೋಡು ನೋಡುವಷ್ಟರಲ್ಲಿ ವೈರಲ್ ಆಗಿಬಿಡುತ್ತವೆ. ಈ ಪ್ರಾಣಿಗಳ ಬುದ್ಧಿವಂತಿಕೆ ನೋಡುಗರಿಗೆ ತುಂಬಾ ವಿಶೇಷವೆನಿಸುತ್ತದೆ. ಮತ್ತು ಈ ರೀತಿಯ ವಿಡಿಯೋಗಳು ಮನುಷ್ಯನಿಗೆ ಅನೇಕ ರೀತಿಯ ಜೀವನದ ಪಾಠಗಳನ್ನು ಸಹ ಹೇಳಿಕೊಡುತ್ತವೆ. ಸದ್ಯ ಇಂಟರ್ನೆಟ್ ನಲ್ಲಿ ಹಕ್ಕಿಯ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನಿಜಕ್ಕೂ ನೋಡುಗರ ಹೃದಯವನ್ನು ತಟ್ಟುವುದರಲ್ಲಿ ಸಂಶಯವೇ ಇಲ್ಲ. ಕಾರಣ ಇಲ್ಲಿ ಹಕ್ಕಿಯು ತನ್ನ ಜಾಣತನವನ್ನು ಮೆರೆದಿದೆ. ಹೇಗೆ ಬನ್ನಿ ನೋಡೋಣ.
ಪ್ರತಿಯೊಂದು ಜೀವಿಗಳು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಏನಾದರೂ ಒಂದು ಉಪಾಯವನ್ನು ಹೊಂದಿರುತ್ತವೆ. ಸದ್ಯ ಇಲ್ಲಿ ನೋಡಲಿರುವ ಹಕ್ಕಿಯೂ ಸಹ ಮೀನಿನ ಬೇಟೆಗಾಗಿ ಒಂದು ಐಡಿಯಾ ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ಅದು ಯಶಸ್ಸು ಸಹ ಸಾಧಿಸಿದೆ. ಈ ಪಕ್ಷಿಯು ಮೀನಿನ ಬೇಟೆಗಾಗಿ ಯಾವ ರೀತಿ ಪ್ಲಾನ್ ಮಾಡಿದೆ ಈ ವಿಡಿಯೋದಲ್ಲಿ ನೋಡಿ…
ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ನದಿಯ ದಂಡೆಯಲ್ಲಿ ನಿಂತ ಹಕ್ಕಿಯು ಮೀನಿನ ಬೇಟೆಗಾಗಿ ಬ್ರೆಡ್ ಪೀಸ್ ನ್ನು ಮೇಲಿಂದ ಮೇಲೆ ನೀರಿನಲ್ಲಿ ಒಗೆಯುತ್ತಿದೆ. ನೀರಿನಲ್ಲಿರುವ ಮೀನುಗಳು ಅದನ್ನು ತಿನ್ನಲು ಮೇಲೆ ಬರುತ್ತಲೇ ಈ ಹಕ್ಕಿಯು ಕ್ಷಣದಲ್ಲಿ ಅದರ ಬೇಟೆಯಾಡುತ್ತಿದೆ. ಪ್ರಸ್ತುತ ಹಕ್ಕಿಯು ತನ್ನ ಬೇಟೆಯನ್ನು ಕ್ಯಾಚ್ ಮಾಡುವ ಸಲುವಾಗಿ ಹೇಗೆ ಮೇಲಿಂದ ಮೇಲೆ ಬ್ರೆಡ್ ಪೀಸ್ ನೀರಿನಲ್ಲಿ ಒಗೆಯುತ್ತಿದೆ ನೋಡಿದಿರಲ್ಲ.
ವೀಡಿಯೋ ನೋಡಿ.
https://twitter.com/fasc1nate/status/1585837820261826560?ref_src=twsrc%5Etfw%7Ctwcamp%5Etweetembed%7Ctwterm%5E1585837820261826560%7Ctwgr%5Eb1e23b106de671c0d0cc85b9ebe20dc5f1223797%7Ctwcon%5Es1_c10&ref_url=https%3A%2F%2Fwww.tv9hindi.com%2Ftrending%2Fbird-uses-unique-way-catch-fishes-people-shocked-to-see-this-au146-1529548.html
ಹಕ್ಕಿಯ ಬುದ್ಧಿವಂತಿಕೆಯನ್ನು ತೋರಿಸುವ ಈ ಸುಂದರವಾದ ವಿಡಿಯೋವನ್ನು ಟ್ವಿಟರ್ ನಲ್ಲಿ @fasc1nate ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಲ್ಲದೆ ಸಾವಿರಾರು ಜನರು ಲೈಕ್ ಮಾಡಿದ್ದಾರೆ. ಅನೇಕ ನೆಟ್ಟಿಗರು ಈ ಪಕ್ಷಿಯ ಬುದ್ಧಿವಂತಿಕೆಯ ಬಗ್ಗೆ ಕೊಂಡಾಡಿದ್ದಾರೆ.