Video; ಮುದ್ದು ಮಗು ಬೀಚ್ ನಲ್ಲಿ ತೆರೆಗಳೊಂದಿಗೆ ಅಂಜದೆ ಆಡಿದ ಬಿಂದಾಸ್ ಚೆಲ್ಲಾಟ ನೋಡಿ.👌👌
ಮಕ್ಕಳು ದೇವರ ಕೈತೋಟದಲ್ಲಿಯ ಹೂಗಳಿದ್ದಂತೆ. ಅಷ್ಟೊಂದು ಪವಿತ್ರ, ಮುಗ್ಧ ಸೌಮ್ಯ ಕೋಮಲಾಗಿರುತ್ತವೆ. ಮಕ್ಕಳ ಆಟ ದೇವರಿಗೂ ಅರ್ಥವಾಗುವುದಿಲ್ಲವಂತೆ. ಅಷ್ಟೊಂದು ವಿಶೇಷವಾದ ಆಟಗಳನ್ನು ಈ ಮಕ್ಕಳು ತಮ್ಮಷ್ಟಕ್ಕೆ ತಾವೇ ಆಡಿಕೊಂಡಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಅನೇಕ ರೀತಿಯ ವಿಡಿಯೋಗಳು ನೋಡಲು ಸಿಗುತ್ತವೆ. ಅವುಗಳಲ್ಲಿ ಕೆಲವು ವೀಡಿಯೊಗಳು ನೋಡುಗರ ಮನಸ್ಸನ್ನೇ ಸೋರೆಗೊಳ್ಳುತ್ತವೆ. ಸದ್ಯ ಮುಗ್ಧ ಮಗುವಿನ ಒಂದು ವಿಶೇಷ ವಿಡಿಯೋ ಇಂಟರ್ನೆಟ್ ನಲ್ಲಿ ನೋಡಲು ಸಿಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಸುಮಾರು ಏಳೆಂಟು ತಿಂಗಳಿನ ಮಗುವೊಂದು ಬೀಚ್ ನಲ್ಲಿ ತುಂಬಾ ಮಜಾ ಮಾಡುತ್ತಿದೆ. ಈ ವಿಡಿಯೋ ನೋಡಿದವರು ಯಾರೇ ಆಗಲಿ ಫುಲ್ ಫ್ರೆಶ್ ಆಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ದೃಶ್ಯದಲ್ಲಿ ಮಗು ಬೀಚ್ ನಲ್ಲಿ ಬರುವ ತೆರೆಗಳ ಜೊತೆಗೆ ಮುಕ್ತವಾಗಿ ಆಡುತ್ತಿದೆ. ಕ್ಷಣ ಕ್ಷಣ ಮಗುವಿನ ಬದಲಾಗುವ ಖುಷಿಯ ಭಾವನೆಗಳು ಇಲ್ಲಿ ಎದ್ದು ಕಾಣುತ್ತಿವೆ. ಈ ಮಗು ನೀರಿನಲ್ಲಿ ಆಡುವಾಗ ಎಷ್ಟೊಂದು ಖುಷಿ ಪಡುತ್ತಿದೆ ಎಂಬುದನ್ನು ಇಲ್ಲಿ ನೋಡಬಹುದು. ವಿಡಿಯೋದ ಕೊನೆಯಲ್ಲಿ ಮಗು ಖುಷಿ ಹೆಚ್ಚಾಗಿ ನೀರಿನಲ್ಲಿಯೇ ಎದ್ದೆದ್ದು ಕುಣಿಯುತ್ತ ಆನಂದ ಪಡುವ ದೃಶ್ಯವಂತೂ ಮನಸ್ಸಿಗೆ ಮುದನೀಡವ ಅದ್ಭುತ ಕ್ಷಣವಾಗಿದೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ಮಂತ್ರ ಮುಗ್ಧ ಮಾಡುವ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ meliszubari ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ 7.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಹಾಗೂ ಲಕ್ಷಾವಧಿ ಜನರು ವಿಡಿಯೋವನ್ನು ಲೈಕ್ ಮಾಡಿದ್ದಾರೆ.