Video: ಮೇಕೆ ಉಣ್ಣೆ ಕೇವಲ ಮನುಷ್ಯನಿಗೇಕೆ?? ಮೇಕೆಯ ಮೇಲೆ ಕುಳಿತು ಅದರ ಉಣ್ಣೆ ಕಿತ್ತ ಕಾಗೆಗೆಳು, ತಾಳ್ಮೆಯಿಂದ ಸಹಕಾರ ನೀಡಿದ ಮೇಕೆ!

ಸಹಾಯ, ಸಹಕಾರ ಎನ್ನುವುದು ಪ್ರಕೃತಿಯಲ್ಲಿ ವಾಸಿಸುವ ಪ್ರತಿ ಜೀವಿಗಳಲ್ಲಿ ಇರಬೇಕಾದಂತಹ ಗುಣವಾಗಿದೆ. ಆದರೆ ಮನುಷ್ಯ ಮಾತ್ರ ಇವುಗಳನ್ನು ಮರೆತು ಸ್ವಾರ್ಥ, ಅತಿಯಾಸೆ, ಮೋ ಸ, ವಂ ಚ ನೆ ಗಳಂತಹ ಗುಣಗಳನ್ನು ಬೆಳೆಸಿಕೊಂಡು ಸಹಕಾರ ತತ್ವವನ್ನೇ ಮರೆತಿದ್ದಾನೆ. ತನ್ನ ಅಗತ್ಯ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ವರ್ತಿಸುವ ಮನುಷ್ಯ ಅವು ಪೂರ್ತಿಯಾದ ಮೇಲೆ ತನ್ನ ಬಣ್ಣ ಬದಲಾಯಿಸಿ ಬಿಡುತ್ತಾನೆ. ಇಂತಹ ಗುಣದಿಂದಾಗಿಯೇ ಮನುಷ್ಯನ ಆಸೆಗಳಿಗೆ ಮಿತಿಯಿಲ್ಲದಾಗಿದೆ. ಸರ್ವವನ್ನು ತನ್ನದಾಗಿಸಿಕೊಳ್ಳುವ ಮೋಜಿನಲ್ಲಿ ಪ್ರಕೃತಿಯಲ್ಲಿರುವ ಅದೆಷ್ಟೋ ಜೀವಿಗಳ ಮೇಲೆ ಅಮಾನುಷ ವನ್ನು ಮೆರೆಯುತ್ತಿದ್ದಾನೆ. ಆದರೂ ಇವೆಲ್ಲವುಗಳ ನಡುವೆ ಮನುಷ್ಯನ ಹೊರತಾಗಿ ಪರಿಸರದ ಭಾಗವಾಗಿರುವ  ಪ್ರಾಣಿ-ಪಕ್ಷಿಗಳಲ್ಲಿ ಮಾತ್ರ ಇಂದಿಗೂ ಕೂಡಾ ಸಹಾಯ, ಸಹಕಾರ ಎನ್ನುವ ತತ್ವ ನೋಡಲು ಸಿಗುತ್ತದೆ.

ಪ್ರಾಣಿ-ಪಕ್ಷಿಗಳಿಗೆ ತಮ್ಮ ಅಗತ್ಯ ಎಷ್ಟಿದೆಯೋ ಅಷ್ಟು ಮಾತ್ರ ಆಸೆ ಪಡುತ್ತವೆ ಆದರೆ ಮನುಷ್ಯ ಹಾಗಲ್ಲ. ತನಗೆ ಅವಶ್ಯಕತೆ ಇಲ್ಲದೇ ಹೋದರೂ ಮತ್ತೊಬ್ಬರಿಗೆ ಸಿಗಲಿ ಎನ್ನುವ ನಿಸ್ವಾರ್ಥ ಆಲೋಚನೆ ಮಾಡುವುದ ಬಿಟ್ಟು ಎಲ್ಲವನ್ನೂ ಸಂಗ್ರಹಿಸಿಡಲು ಮುಂದಾಗುತ್ತಾನೆ. ಇಂತಹ ಜನರ ಮಧ್ಯೆ ಬದುಕುತ್ತಿರುವ ನಮಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಆಗಾಗ ಪ್ರಕೃತಿಯಲ್ಲಿನ ಸುಂದರ ಜೀವಿಗಳ ಅಪರೂಪದ ದೃಶ್ಯಗಳು ನೋಡಲು ಸಿಕ್ಕಾಗ ಮನಸ್ಸಿಗೆ ಒಂದು ಸಮಾಧಾನ, ಒಂದು ತೃಪ್ತಿ ಸಿಗುತ್ತದೆ. ಇಂತಹ ಒಂದು ಮನಸ್ಸಿಗೆ ಮುದ ನೀಡುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದನ್ನು ಜನ ನೋಡಿ ಖುಷಿ ಪಡುತ್ತಿದ್ದಾರೆ.

ಟ್ವಿಟ್ಟರ್ ನಲ್ಲಿ ವನ್ಯಜೀವಿಗಳ ವಿಶೇಷ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕವೇ ಜನಪ್ರಿಯತೆಯನ್ನು ಪಡೆದಿರುವ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದ ಅವರು ಆಗಾಗ ಶೇರ್ ಮಾಡುವ ಪ್ರಾಣಿಗಳ ವಿಡಿಯೋಗಳು ವಿಶೇಷ ಆಗಿರವುದು ಮಾತ್ರವಲ್ಲದೇ ಜೀವಿಗಳ ಇನ್ನೊಂದು ನಮಗರಿವಿಲ್ಲದ ಜೀವನವನ್ನು ನಮ್ಮ ಮುಂದೆ ಇಡುವುದು ಮಾತ್ರವಣರ ಅಲ್ಲದೇ, ಅನೇಕ ಸಂದರ್ಭಗಳಲ್ಲಿ ಮನುಷ್ಯ ಕಳೆದುಕೊಂಡಿರುವ ಮೌಲ್ಯಗಳು ಕೂಡ ಪ್ರಾಣಿಗಳಲ್ಲಿ ನೋಡಲು ಸಿಗುತ್ತದೆ. ಪ್ರಸ್ತುತ ಇವರು ಕಾಗೆಗಳು ಹಾಗೂ ಮೇಕೆಯೊಂದರ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.

ವಿಡಿಯೋದಲ್ಲಿ ಗಮನಿಸಿದಾಗ ಎರಡು ಕಾಗೆಗಳು ಮೇಕೆಯ ಬೆನ್ನ ಮೇಲೆ ಕುಳಿತು ಅದರ ಉಣ್ಣೆಯನ್ನು ಕೊಕ್ಕಿನಲ್ಲಿ ಕಿತ್ತು ಕಿತ್ತು ತೆಗೆಯುತ್ತಿವೆ ಹಾಗೂ ಆ ರೀತಿ ಕುಕ್ಕುತ್ತಾ ಉಣ್ಣೆಯನ್ನು ಕೀಳುತ್ತಿದ್ದರೆ ಮೇಕೆ ತಾಳ್ಮೆಯಿಂದ ನಿಂತು ಕೊಂಡು ಕಾಗೆಗಳ ಕೆಲಸಕ್ಕೆ ತನ್ನ ಸಹಕಾರವನ್ನು ನೀಡಿದೆ. ವಿಡಿಯೋ ಶೇರ್ ಮಾಡಿಕೊಂಡ ಸುಶಾಂತ್ ನಂದ ಅವರು ಮನುಷ್ಯ ಮಾತ್ರವೇ ಏಕೆ ಮೇಕೆಯ ಉಣ್ಣೆಯನ್ನು ಬಳಸಬೇಕು? ತಮ್ಮ ಗೂಡು ಕಟ್ಟಲು ಉಣ್ಣೆಯನ್ನು ಕೀಳುತ್ತಿರುವ ಹಕ್ಕಿಗಳು ಎಂದು ಬರೆದುಕೊಂಡಿದ್ದಾರೆ. ಅವರು ಶೇರ್ ಮಾಡಿದ ವಿಡಿಯೋ ವನ್ನು 10 ಸಾವಿರಕ್ಕೂ ಅಧಿಕ ಮಂದಿ ನೋಡಿದ್ದಾರೆ. ಸಾವಿರಕ್ಕೂ ಹೆಚ್ಚಿನ ಜನರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.

ವಿಡಿಯೋ ನೋಡಿ

ವಿಡಿಯೋ ನೋಡಿ ಕಾಮೆಂಟ್ ಮಾಡಿದ ಟ್ವಿಟರ್ ಬಳಕೆದಾರರೊಬ್ಬರು, ಕಾಗೆಗಳು ಗೂಡನ್ನು ಕಟ್ಟಲು ಕಲಿಯಿತೇನು?? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು ಮೇಕೆ ಅದ್ಭುತವಾದ ತಾಳ್ಮೆಯನ್ನು ಪ್ರದರ್ಶನ ಮಾಡಿದೆ, ಕಾಗೆಗಳು ಅದರ ಪ್ರಯೋಜನವನ್ನು ಪಡೆದುಕೊಂಡಿದೆ ಎಂದಿದ್ದಾರೆ. ಮತ್ತೊಬ್ಬರು ಪ್ರಕೃತಿಯಲ್ಲಿ ಎಲ್ಲರೂ ಕೂಡ ಸರಿ ಸಮಾನವಾದ ಹಕ್ಕನ್ನು ಹೊಂದಿದ್ದಾರೆ ಎಂಬ ಸಂದೇಶವನ್ನು ಪಕ್ಷಿಗಳು ನೀಡುತ್ತಿವೆ ಎಂದಿದ್ದಾರೆ. ಇನ್ನೊಬ್ಬ ಟ್ವಿಟರ್ ಬಳಕೆದಾರರು ಇಂತಹ ದೃಶ್ಯವನ್ನು ನಾನು ಇದೇ ಮೊದಲ ಬಾರಿ ನೋಡಿದ್ದು, ಧನ್ಯವಾದಗಳು ಎಂದಿದ್ದಾರೆ. ಹೀಗೆ ವೈವಿದ್ಯಮಯ ಪ್ರತಿಕ್ರಿಯೆಗಳು ವಿಡಿಯೋ ಗೆ ಲಭ್ಯವಾಗುತ್ತಿದೆ.