Video; ಮೈದುಂಬಿದ ಚೆಲುವಾದ ಬೆಕ್ಕುಗಳು ಲೈವ್ ಶೋ ನಲ್ಲಿ ಎಬ್ಬಿಸಿದವು ಧೂಳ್! ತಮ್ಮ ಕಸರತ್ತಿನಿಂದ ಗೆದ್ದವು ನೆಟ್ಟಿಗರ ಮನ.

ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ವೀಡಿಯೊಗಳನ್ನು ನೆಟ್ಟಿಗರು ವಿಶೇಷ ಆಸಕ್ತಿಯಿಂದ ನೋಡುತ್ತಾರೆ. ಅದರಲ್ಲೂ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಇವು ಎಲ್ಲರಿಗೂ ಇಷ್ಟವಾಗುತ್ತವೆ. ಹಾಗೂ ಇವುಗಳು ಮಾಡುವ ವಿವಿಧ ಆಟಗಳಿಗೆ ನೇಟಿಜನ್ಸ್ ಫುಲ್ ಫಿದಾ ಆಗುತ್ತಾರೆ. ಸದ್ಯ ಇಂಟರ್ನೆಟ್ ನಲ್ಲಿ ಸುಂದರವಾದ ಮತ್ತು ಮೈದುಂಬಿದ ಬೆಕ್ಕುಗಳು ಮಾಡಿದ ಕಸರತ್ತಿನ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಸುಂದರವಾದ ಕೆಲವು ಬೆಕ್ಕುಗಳು ತಮ್ಮ ವಿವಿಧ ಕಸರತ್ತಿನಿಂದ ನೋಡುಗರ ಮನವನ್ನು ಸೆಳೆಯುತ್ತಿವೆ. ಪ್ರಸ್ತುತ ಇವೆಂಟ್ ಒಂದು ಜನಪ್ರಿಯ ಲೈವ್ ಶೋ ನಲ್ಲಿಯದ್ದಾಗಿದೆ. ಈ ಶೋ ದಲ್ಲಿ ಬೆಕ್ಕುಗಳು ತಮ್ಮ ಕಸರತ್ತಿನಿಂದ ಧೂಳ್ ಎಬ್ಬಿಸಿವೆ ಎಂದರೆ ತಪ್ಪಲ್ಲ. ಈ ಶೋನಲ್ಲಿ ಬೇರೆ ಬೇರೆ ಬೆಕ್ಕುಗಳು ವಿವಿಧ ರೀತಿಯ ಮನರಂಜನೆಯನ್ನು ನೀಡಿವೆ. ಬೆಕ್ಕುಗಳ ಈ ಮನರಂಜನೆಗೆ ಶೋ ಹೋಸ್ಟ್ ಜೊತೆಗೆ ನೋಡುಗರು ಸಹ ಮಂತ್ರ ಮುಗ್ಧರಾಗಿದ್ದಾರೆ. ಈ ಶೋನಲ್ಲಿ ಬೆಕ್ಕುಗಳು ಸಖತ್ ಟ್ರೆನ್ ಆಗಿ ಇಳಿದಿವೆ. ಇವುಗಳಿಗೆ ಪ್ರೀತಿಯಿಂದ ಟ್ರೆನ್ ಮಾಡಿದ ಅವುಗಳ ಗುರುಗಳಿಗೂ ಒಂದು ಷಬ್ಬಾಷ್ ನೀಡಲೇಬೇಕು. ಈ ಶೋನಲ್ಲಿ ಬೆಕ್ಕುಗಳು ಸೈನಿಕರ ಹಾಗೆ ಚಮತ್ಕಾರಿಕ ಮತ್ತು ರೋಚಕ ಚಟುವಟಿಕೆಗಳನ್ನು ಮಾಡಿ ತೋರಿಸಿವೆ. ಆ ಬೆಕ್ಕುಗಳು ಮಾಡಿದ ಕಸರತ್ತಿನ ವರ್ಣನೆ ಓದುವದಕ್ಕಿಂತ ಪ್ರತ್ಯಕ್ಷ ವಿಡಿಯೋವನ್ನೇ ನೋಡಿ.

ನೋಡಿ ಈ ವಿಡಿಯೋ…

ಪ್ರಸ್ತುತ ವಿಡಿಯೋವನ್ನು ಟ್ವಿಟರ್ ನಲ್ಲಿ @VitoCatleon ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ಸುಂದರವಾದ ವಿಡಿಯೋ ಇಲ್ಲಿಯವರೆಗೆ 1 ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆಯನ್ನು ಪಡೆದಿದೆ.