Video: ಮೊಸಳೆಯ ಬಾಯಿಗೆ ಸಿಕ್ಕ ಪ್ರಾಣಿಯನ್ನು ರಕ್ಷಿಸಲು ಬಂದ ನೀರಾನೆಗಳು: ವೀಡಿಯೋ ನೋಡಿ ನೀರಾನೆಗಳ ಕಾರ್ಯಕ್ಕೆ ಮೆಚ್ಚುಗೆ ನೀಡಿದ ನೆಟ್ಟಿಗರು

ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಈ ಗಾದೆ ಮಾತನ್ನು ನಾವೆಲ್ಲರೂ ಕೂಡ ಕೇಳಿಯೇ ಇದ್ದೇವೆ. ಇದರ ಅರ್ಥಕ್ಕೆ ಬರುವುದಾದರೆ ಬಹಳ ಶ್ರಮ ಪಟ್ಟು ಯಾವುದಾದರೂ ಕೆಲಸವನ್ನು ಮಾಡಿ, ನಾವು ಬಯಸಿದ ಪ್ರತಿಫಲವು ಇನ್ನೇನು ನಮ್ಮ ಕೈಗೆ ಸಿಗಬೇಕು, ಅದು ನಮಗೆ ಸಿಕ್ಕೆ ಸಿಗುತ್ತದೆ ಎಂದು ನಾವು ನಿರೀಕ್ಷೆ ಮಾಡುವಾಗಲೇ ಅನಿರೀಕ್ಷಿತವಾಗಿ ಅದು ನಮ್ಮಿಂದ ದೂರವಾದರೆ ಆಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಮಾತನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅಲ್ಲದೇ ಇದು ನಿರಾಶೆ ಯನ್ನು ಕೂಡಾ ಉಂಟು ಮಾಡುತ್ತದೆ. ಇಂತಹ ಅನುಭವ ಕೆಲವು ಸಂದರ್ಭಗಳಲ್ಲಿ ನಮ್ಮ ನಿತ್ಯ ಜೀವನದಲ್ಲಿ ಕೂಡ ಆಗಿರುವುದೂ ಉಂಟು. ಇಂತಹುದೇ ಘಟನೆಗಳು ಅಥವಾ ಅನುಭವಗಳು ವನ್ಯಜೀವಿಗಳ ವಿಷಯದಲ್ಲಿ ಕೂಡ ಸಂಭವಿಸುತ್ತದೆ ಎಂದರೆ ನಂಬುವಿರಾ? ಇಲ್ಲ ಎನ್ನುವುದಾದರೆ ಈ ಸುದ್ದಿ ಓದಿ‌.

ಸಾಮಾನ್ಯವಾಗಿ ಪ್ರಾಣಿಗಳು ಆಹಾರಕ್ಕಾಗಿ ತಮ್ಮ ಬೇ ಟೆ ಯನ್ನು ಹಿಡಿದು ಅದು ಕೊನೆಯ ಕ್ಷಣಗಳಲ್ಲಿ ಕೈತಪ್ಪಿ ಹೋದರೆ ಆಗ ನಾವು ಗಾದೆ ಮಾತನ್ನು ಖಂಡಿತವಾಗಿ ಪ್ರಾಣಿಗಳ ಮೇಲೆ ಅನುಕಂಪ ತೋರಿಸುತ್ತಾ ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಘಟನೆಯನ್ನು ನಮ್ಮ ಮುಂದೆ ಇರಿಸುವ ಒಂದು ಬಹಳ ರೋಚಕವಾದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ತನ್ನ ಬೇಟೆಯನ್ನು ಹಿಡಿದ ವಿಶಾಲ ಗಾತ್ರದ ಮೊಸಳೆ ಯೊಂದಕ್ಕೆ ಕೊನೆಯ ಕ್ಷಣಗಳಲ್ಲಿ ತನ್ನ ಬೇಟೆಯು ಕೈತಪ್ಪಿ ಹೋಗಿದೆ. ಈ ವಿಡಿಯೋ ನೋಡಿದಾಗ ನಿಜಕ್ಕೂ ಮೊಸಳೆಯ ಬಾಯಿಗೆ ಬಂದ ತುತ್ತು ಅದರ ಹೊಟ್ಟೆಯನ್ನು ಸೇರಲಿಲ್ಲ ಎಂದು ಸ್ವಲ್ಪ ಬದಲಿಸಿ ನಾವು ಹೇಳಬಹುದು.

ಇಷ್ಟಕ್ಕೂ ವೈರಲ್ ಆಗಿರುವ ಈ ವೀಡಿಯೋದಲ್ಲಿನ ಸನ್ನಿವೇಶ ಏನೆಂದು ನೋಡುವುದಾದರೆ, ಕಾಡು ಮೃಗಗಳ ಗುಂಪೊಂದು ನೀರು ಕುಡಿಯಲು ಜಲ ಮೂಲವೊಂದರ ಬಳಿ ಬಂದಿವೆ‌. ಹಾಗೆ ಬಂದ ಪ್ರಾಣಿಗಳಲ್ಲಿ ಒಂದರ ಕಾಲನ್ನು ಮೊಸಳೆ ಗಟ್ಟಿಯಾಗಿ ಹಿಡಿದು, ಅದನ್ನು ನೀರಿನೊಳಗೆ ಎಳೆದು ಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ಆ ಪ್ರಾಣಿ ಮಾತ್ರ ತಪ್ಪಿಸಿಕೊಳ್ಳಲು ನದಿ ದಂಡೆಯ ಮೇಲೇರಿ ಬರಲು ಸಾಕಷ್ಟು ಪ್ರಯತ್ನ ಮಾಡಿದೆ, ತನ್ನೆಲ್ಲಾ ಬಲ ಬಿಟ್ಟು ಮೊಸಳೆಯ ಹಿಡಿತದಿಂದ ತಪ್ಪಿಸಿಕೊಳ್ಳುವ ಯತ್ನವನ್ನು ಮಾಡಿದೆ. ಆದರೆ ಅದು ಎಷ್ಟು ಪ್ರಯತ್ನ ಮಾಡಿದರೂ ಮೊಸಳೆ ಬಲದ ಮುಂದೆ ಅದು ಸಾಧ್ಯವಾಗಿಲ್ಲ.

ಹೀಗೆ ಮೊಸಳೆ ಕೈಗೆ ಸಿಕ್ಕು ಪ್ರಾಣಿಯೊಂದು ಜೀವಕ್ಕಾಗಿ ವಿಲವಿಲ ಒದ್ದಾಡುತ್ತಿರುವ ದೃಶ್ಯವನ್ನು ನೋಡಿದ 2 ಹಿಪ್ಪೋಗಳು(ನೀರಾನೆಗಳು) ಆ ಪ್ರಾಣಿಯನ್ನು ಕಾಪಾಡುವ ಸಲುವಾಗಿ ಮೊಸಳೆಯ ಮೇಲೆ ಧಾ ಳಿ ಮಾಡಲು ಮುಂದೆ ನುಗ್ಗಿ ಬಂದಿವೆ. ಹಿಪ್ಪೋಗಳ ಆ ಅನಿರೀಕ್ಷಿತ ಧಾ ಳಿ ಗೆ ಮೊಸಳೆ ತಾನು ಹಿಡಿದಿದ್ದ ಪ್ರಾಣಿಯನ್ನು ಬಿಟ್ಟಿದೆ, ಮೊಸಳೆಯ ಹಿಡಿತ ಸಡಿಲಗೊಂಡ ಕೂಡಲೇ ಬದುಕಿದೆಯಾ ಬಡ ಜೀವ ಎನ್ನುವಂತೆ ಆ ಪ್ರಾಣಿಯು ಅಲ್ಲಿಂದ ಓಡಿದೆ. ಪ್ರಾಣಿಯೊಂದರ ಪಾಡನ್ನು ನೋಡಿ ಹಿಪ್ಪೋಗಳು ರಕ್ಷಣೆಗೆ ಧಾವಿಸಿದ್ಸು ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಡಿಯೋ ನೋಡಿ

ಈ ವೈರಲ್ ವೀಡಿಯೋ ಈಗಾಗಲೇ ಎರಡು ದಿನಗಳ ಅವಧಿಯಲ್ಲಿ ಹದಿಮೂರು ಸಾವಿರ ದಾಟಿದ ವೀಕ್ಷಣೆ ಪಡೆದಿದ್ದು, ವೈವಿದ್ಯಮಯ ಪ್ರತಿಕ್ರಿಯೆಗಳನ್ನು ತನ್ನದಾಗಿಸಿಕೊಂಡಿದೆ. ನೆಟ್ಟಿಗರೊಬ್ಬರು ಹಿಪ್ಪೋಗಳಿಗೆ ಮೊಸಳೆಗಳೆಂದರೆ ಆಗುವುದಿಲ್ಲ ಅದಕ್ಕೆ ಅವು ಹಾಗೆ ಮಾಡಿವೆ ಎಂದಿದ್ದಾರೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಅದಕ್ಕೆ ಉತ್ತರ ನೀಡುತ್ತಾ ಹಿಪ್ಪೋಗಳು ನೀರಿನಲ್ಲಿ ಶಾಂತವಾಗಿರಲು ಬಯಸುತ್ತವೆ, ಹೀಗೆ ಮೊಸಳೆಗಳು ಬೇರೊಂದು ಜೀವಿಯನ್ನು ಹಿಡಿದು ಹೋ ರಾ ಟ ನಡೆದರೆ, ಆಗ ಮತ್ತೆ ಶಾಂತಿಯನ್ನು ನೆಲೆಗೊಳಿಸಲು ಹಿಪ್ಪೋಗಳು ಮೊಸಳೆಯ ಮೇಲೆ ಧಾ ಳಿ ಮಾಡುತ್ತವೆ ಎಂದಿದ್ದಾರೆ.

ಅನೇಕ ಮಂದಿ ಹಿಪ್ಪೋಗಳು ಕಾಡು ಪ್ರಾಣಿಯೊಂದರ ಜೀವವನ್ನು ಉಳಿಸಲು ಬಂದಿದ್ದನ್ನು ನೋಡಿ ಈ ಘಟನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾ, ಹಿಪ್ಪೋಗಳ ಕಾರ್ಯಕ್ಕೆ ಮೆಚ್ಚುಗೆ ಕೂಡಾ ಸೂಚಿಸಿದ್ದಾರೆ. ಒಟ್ಟಾರೆ ಆ ಕಾಡುಪ್ರಾಣಿಯ ಅದೃಷ್ಟ ಚೆನ್ನಾಗಿತ್ತು ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಆ ಪ್ರಾಣಿ ಮೊಸಳೆಯ ಹಿಡಿದ ಗಾಯಗಳಿಂದಲೇ ಸಾಯಬಹುದು ಎಂದಿದ್ದಾರೆ.