Video; ಮೋದಿಯವರ ಕಣ್ಣು ತಪ್ಪಿಸಿ ಮುಖ್ಯಮಂತ್ರಿ ಏನೋ ತಿನ್ನಬೇಕು ಎನ್ನುವಷ್ಟರಲ್ಲಿ ಮೋದಿ ಹಿಡಿದೇ ಬಿಟ್ಟರು ರೆಡ್ ಹ್ಯಾಂಡಾಗಿ…
ಸ್ಟೇಜ್ ಮೇಲೆ ರಾಜಕೀಯ ಜನರ ಭಾಷಣದ ಪ್ರಸಂಗಗಳು ನಡೆದಾಗ ಒಮ್ಮೊಮ್ಮೆ ಅನೇಕ ವಿಚಿತ್ರ ದೃಶ್ಯಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬೀಳುತ್ತವೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಸದ್ಯ ಇಂಥ ಫುಲ್ ತಮಾಷೆಯ ದೃಶ್ಯವೊಂದನ್ನು ನಿಮಗಾಗಿ ತಂದಿದ್ದೇವೆ ನೋಡಿ.
ಈ ವಿಡಿಯೋದ ದೃಶ್ಯದಲ್ಲಿ ಒಂದು ತಮಾಷೆಯ ಪ್ರಸಂಗವಿದೆ. ಸ್ಟೇಜ್ ಮೇಲೆ ಪ್ರಧಾನಿ ಮೋದಿಯವರ ಜೊತೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಅವರೂ ಕುಳಿತಿದ್ದಾರೆ. ಇದೇ ಸಮಯದಲ್ಲಿ ಒಂದು ನಕ್ಕು ನಗಿಸುವ ಘಟನೆಯೊಂದು ನಡೆದು ಹೋಗುತ್ತದೆ. ಪ್ರಧಾನಿ ಹದ್ದಿನ ಕಣ್ಣಿನಂತೆ ಅತ್ತಿತ್ತ ನೋಡುತ್ತಿದ್ದಾರೆ. ಮುಖ್ಯಮಂತ್ರಿಗೆ ಈ ಸಂದರ್ಭದಲ್ಲಿ ಏನಾದರೂ ಬಾಯಿಯಲ್ಲಿ ಹಾಕಿಕೊಳ್ಳುವ ಚಪಲತೆ ಮೂಡಿದೆ. ಆದರೇನು ಮಾಡುತ್ತಾರೆ ಪಾಪ ಬದಿಯಲ್ಲಿಯೇ ಪ್ರಧಾನಿ ಕುಳಿತಿದ್ದಾರೆ. ಅಷ್ಟಾದರೂ ಕಣ್ಣು ತಪ್ಪಿಸಿ ಬಾಯಿಯಲ್ಲಿ ಏನಾದರೂ ಹಾಕಿಕೊಳ್ಳುವ ತವಕದಲ್ಲಿ ತಯಾರಾಗಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಹೊಂಚು ಹಾಕಿ ಕುಳಿತಿದ್ದಾರೆ. ಇದೇ ಹೊತ್ತಿನಲ್ಲಿ ಪ್ರಧಾನಿಯವರು ಸ್ವಲ್ಪ ಮುಖ ಬಲಕ್ಕೆ ತಿರಿಗಿಸುವದಷ್ಟೇ ತಡ ಶಿವರಾಜ್ ಸಿಂಗ್ ಅವರು ಗಬಕ್ಕನೇ ಬಾಯಿಯಲ್ಲಿ ಏನನ್ನೋ ಹಾಕಿಕೊಳ್ಳುತ್ತಾರೆ. ಅವರು ಬಾಯಿಯಲ್ಲಿ ಹಾಕಿಕೊಳ್ಳುವಷ್ಟರಲ್ಲಿ ಪ್ರಧಾನಿಯೂ ಹಠಾತ್ ಮುಖ ಮುಖ್ಯಮಂತ್ರಿಯ ಕಡೆಗೆ ಹೊರಳಿಸಿಯೇ ಬಿಡಬೇಕಾ? ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ಸ್ವಲ್ಪ ಗಲಿಬಿಲಿಗೊಳ್ಳುತ್ತಾರೆ ನಿಜ.
ನೋಡಿ ಈ ತಮಾಷೆಯ ಪ್ರಸಂಗ…
View this post on Instagram
ಪ್ರಸ್ತುತ ಈ ವಿಶೇಷವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಕಾಮಿಡಿ_ಅಡ್ಡಾ_2006 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಲ್ಲದೆ ಇದೇ ಸಂಖ್ಯೆಯಲ್ಲಿ ಜನರು ಲೈಕ್ ಸಹ ಮಾಡಿದ್ದಾರೆ. ನೆಟ್ಟಿಗರು ಈ ವೀಡಿಯೋವನ್ನು ನೋಡಿ ಅನೇಕ ರೀತಿಯ ತಮಾಷೆಯ ಕಾಮೆಂಟ್ ಗಳನ್ನು ಮಾಡಿದ್ದಾರೆ.