Video: ಯುವತಿಯ ಬೇಜವಾಬ್ದಾರಿತನ ದೊಡ್ಡ ಅಪಘಾತಕ್ಕೆ ಕಾರಣವಾಗುವುದರಲ್ಲಿತ್ತು: ಎಂತಹ ನಿರ್ಲಕ್ಷ್ಯ ಇದು!

ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ನಗರಗಳು ಬೆಳೆದಂತೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿದೆ. ನಗರದ ರಸ್ತೆಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆದಾಗ ವಾಹನಗಳ ದಟ್ಟಣೆ ಯಾವ ಮಟ್ಟಕ್ಕೆ ಇದೆ ಎನ್ನುವುದು ಅರ್ಥವಾಗುತ್ತದೆ. ಎಲ್ಲರೂ ತಾವು ತಲುಪುವ ಸ್ಥಳಕ್ಕೆ ಬೇಗ ಹೋಗಬೇಕೆಂಬ ಧಾವಂತದಲ್ಲಿ ಅನೇಕ ಸಲ ರಸ್ತೆ ನಿಯಮಗಳನ್ನು ಮೀರುತ್ತಾ ಮುಂದೆ ಸಾಗುತ್ತಾರೆ. ಆದರೆ ದುರದೃಷ್ಟವಶಾತ್ ಅನೇಕ ಸಂದರ್ಭಗಳಲ್ಲಿ ರಸ್ತೆ ನಿಯಮಗಳನ್ನು ಮೀರಿ ವಾಹನ ಚಲಾಯಿಸಿದ ಮಂದಿ ಅಪಘಾತಗಳಿಗೆ ಕಾರಣವಾಗುವುದಲ್ಲದೇ ಅಂತಹವರಿಂದ ಅನ್ಯರೂ ಸಹಾ ಸಾ ವು -ನೋವುಗಳನ್ನು ಅನುಭವಿಸುತ್ತಾರೆ. ಆದ್ದರಿಂದಲೇ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ವಿಚಾರವಾಗಿ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಜಾಗೃತಿಯನ್ನು ಮೂಡಿಸುವ ಕಾರ್ಯಗಳು ಎಲ್ಲೆಲ್ಲೂ ನಡೆಯುತ್ತಿವೆ. ಆದರೆ ಏನೇ ನಡೆದರೂ ಕೂಡಾ ಅಪಘಾತಗಳ ಸಂಖ್ಯೆಯಲ್ಲಿ ಮಾತ್ರ ಕಡಿಮೆಯಾಗಿಲ್ಲ.

ರಸ್ತೆ ಸುರಕ್ಷತಾ ನಿಯಮಗಳು ಎಂದರೆ ಅದು ಕೇವಲ ವಾಹನ ಸಂಚಾರಕ್ಕೆ ಅಥವಾ ವಾಹನ ಚಾಲನೆ ಮಾಡುವವರಿಗೆ ಮಾತ್ರವೇ ಅನ್ವಯವಾಗುವುದಿಲ್ಲ. ಬದಲಿಗೆ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲಿ ನಡೆಯುವವರು ಸಹಾ ಕೆಲವು ಸುರಕ್ಷತೆಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ರಸ್ತೆಗಳನ್ನು ದಾಟುವಾಗ ಅದರಲ್ಲೂ ವಿಶೇಷವಾಗಿ ನಗರದಂತಹ ಪ್ರದೇಶಗಳಲ್ಲಿ ಇನ್ನಷ್ಟು ಎಚ್ಚರಿಕೆಯಿಂದ, ಮೈಯೆಲ್ಲಾ ಕಣ್ಣಾಗಿ ರಸ್ತೆಯನ್ನು ದಾಟಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಪಾದಚಾರಿಗಳು ರಸ್ತೆಯನ್ನು ದಾಟುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯ ಹಾಗೂ ಅನಿವಾರ್ಯ ಎಂಬುದನ್ನು ಮರೆಯಬಾರದು.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಗಮನಿಸಿದಾಗ ಪಾದಾಚಾರಿಗಳ ಅಜಾಗರೂಕತೆ ಅಥವಾ ಬೇಜವಾಬ್ದಾರಿತನ ಹೇಗೆ ರಸ್ತೆಯಲ್ಲಿ ವಾಹನ ಚಲಾಯಿಸುವವರಿಗೆ ಅಪಾಯವನ್ನು ತಂದೊಡ್ಡಬಹುದು ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ. ಈ ವಿಡಿಯೋದಲ್ಲಿ ನಾವು ಗಮನಿಸಿದಾಗ ನಗರದ ರಸ್ತೆಯೊಂದರಲ್ಲಿ ಕಾರುಗಳು ಚಲಿಸುತ್ತಿವೆ. ಹಾಗೆ ರಸ್ತೆಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ ಕಾರೊಂದು ಇದ್ದಕ್ಕಿದ್ದಂತೆ ಸಡನ್ ಬ್ರೇಕ್ ಅನ್ನು ಹಾಕುತ್ತದೆ. ಕೂಡಲೇ ಹಿಂದೆ ಇದ್ದ ಕಾರುಗಳವರು ಸಡನ್ ಬ್ರೇಕ್ ಹಾಕುತ್ತಾರೆ.

ಹೀಗೆ ಕಾರು ಸಡನ್ ಬ್ರೇಕ್ ಹಾಕಲು ಕಾರಣವಾಗಿದ್ದು ಏನೆಂದರೆ, ಚಲಿಸುತ್ತಿದ್ದ ಕಾರಿನ ಮುಂಭಾಗದಲ್ಲಿ ರಸ್ತೆಯನ್ನು ದಾಟುವ ಧಾವಂತದಲ್ಲಿ, ಯುವತಿಯೊಬ್ಬಳು ಕಿವಿಗೆ ಇಯರ್ ಫೋನುಗಳನ್ನು ಹಾಕಿಕೊಂಡು ರಸ್ತೆಯಲ್ಲಿ ಬರುವ ವಾಹನಗಳನ್ನು ಗಮನಿಸದೇ ರಸ್ತೆಗೆ ಇಳಿದಿದ್ದಾಳೆ. ಆಗ ಕಾರು ಸಡನ್ ಬ್ರೇಕ್ ಹಾಕಿದಾಗ ಆಕೆ ಇಯರ್ ಫೋನ್ ತೆಗೆದು ನಂತರ ರಸ್ತೆಯನ್ನು ದಾಟಿದ್ದಾಳೆ. ಆದರೆ ಅಷ್ಟೊಂದು ಬೇಜವಾಬ್ದಾರಿತನವನ್ನು ಮೆರೆದ ಯುವತಿಯು ಮತ್ತೆ ರಸ್ತೆ ದಾಟಿದ ಕೂಡಲೇ ತನ್ನ ಕಿವಿಗೆ ಇಯರ್ ಫೋನ್ ಹಾಕಿಕೊಳ್ಳುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಆದರೆ ಡಿವೈಡರ್ ನಂತರ ಮತ್ತೊಂದು ರಸ್ತೆಯ ದಾಟಬೇಕೆಂಬ ಪರಿಜ್ಞಾನ ಇಲ್ಲದೇ ಆಕೆ ಇಯರ್ ಫೋನ್ ಧರಿಸಿ ಮುಂದೆ ಹೋಗಿದ್ದಾಳೆ.

ಆಕೆ ರಸ್ತೆ ದಾಟುವಾಗಲಾದರೂ ತನ್ನ ಕಿವಿಗೆ ಹಾಕಿರುವ ಇಯರ್ ಫೋನುಗಳನ್ನು ತೆಗೆದು ರಸ್ತೆಯಲ್ಲಿ ಬರುತ್ತಿರುವ ವಾಹನಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಿ ರಸ್ತೆ ದಾಟಬೇಕಿತ್ತು, ಆದರೆ ಅವುಗಳ ಪರಿವೆಯೇ ಇಲ್ಲದೆ ಒಂದು ದೊಡ್ಡ ಅನಾಹುತಕ್ಕೆ ಕಾರಣವಾಗಲು ಹೊರಟಿದ್ದಳು ಆ ಯುವತಿ. ಆದರೆ ಅದೃಷ್ಟವಶಾತ್ ಕಾರಿನ ಚಾಲಕ ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿದೆ. ಆದರೆ ಹಿಂದಿನ ಕಾರುಗಳವರು ಒಂದು ಕ್ಷಣ ಆತಂಕಕ್ಕೀಡಾಗಿದ್ದು ಮಾತ್ರ ವಾಸ್ತವ ಎಂದು ಹೇಳಬಹುದು. ಈ ವೈರಲ್ ವೀಡಿಯೋವನ್ನು ಎರಡು ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಮಂದಿ ಲೈಕ್ ಗಳನ್ನು ನೀಡಿದ್ದಾರೆ. ನೂರಾರು ಮಂದಿ ಕಾಮೆಂಟುಗಳನ್ನು ಮಾಡಿದ್ದಾರೆ.

ವಿಡಿಯೋ ನೋಡಿ

ಕಾಮೆಂಟ್ ಮಾಡಿರುವವರು ಇದ್ದಕ್ಕಿದ್ದಂತೆ ರಸ್ತೆಗೆ ಧುಮುಕಿದ ಹುಡುಗಿಯನ್ನೂ, ಆಕೆಯ ಬೇಜವಾಬ್ದಾರಿತನವನ್ನು ಟೀಕೆ ಮಾಡಿದ್ದಾರೆ. ಆಕೆಯ ಒಂದು ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು, ಆದರೆ ಚಾಲಕನ ಬುದ್ಧಿವಂತಿಕೆ ಹಾಗೂ ಅನುಭವದ ಕಾರಣ ಒಂದು ಅನಾಹುತ ತಪ್ಪಿದೆ ಎಂದಿದ್ದಾರೆ. ಕೆಲವರು ರಸ್ತೆಯಲ್ಲಿ ಇಂತಹುದೇ ತಮಗಾದ ಅನುಭವಗಳನ್ನು ಕಮೆಂಟುಗಳಲ್ಲಿ ಹಂಚಿಕೊಂಡಿದ್ದಾರೆ.