Video; ರಸ್ತೆಯಲ್ಲಿ ಸಡನ್ ಆಗಿ ಕಾರ್ ಡೋರ್ ಓಪನ್ ಮಾಡಲು ಬಿದ್ದನು ಬೈಕ್ ಸವಾರ; ಕ್ಷಮೆಯೂ ಕೇಳಿ ಆಯಿತು; ಆದರೆ ಬೈಕ್ ಕೇಳಬೇಕಲ್ಲ?
ರಸ್ತೆಯಲ್ಲಿ ಯಾವ ರೀತಿಯ ಘಟನೆಗಳು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲವೂ ಶಾಂತ ಹಾಗೂ ಸಮಾಧಾನದಿಂದ ನಡೆದಿರುವಾಗಲೇ ಒಮ್ಮೊಮ್ಮೆ ಆಕಸ್ಮಿಕವಾಗಿ ಅಘಟಿತ ಘಟನೆಗಳು ನಡೆದು ಹೋಗುತ್ತವೆ. ಇಂಥದೇ ಒಂದು ಉದಾಹರಣೆಯ ವಿಡಿಯೋ ಇಲ್ಲಿದೆ.
ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ ರಸ್ತೆಯ ಮೇಲೆ ದಾರಿಯುದ್ದಕ್ಕೂ ಟ್ರಾಫಿಕ್ ಜಾಮ್ ಆದ ಕಾರಣ ವಾಹನಗಳು ಒಂದರ ಹಿಂದೆ ಒಂದು ನಿಂತಿವೆ. ಈ ಸಂದರ್ಭದಲ್ಲಿ ಸ್ಕೂಟಿ ಸವಾರನೊಬ್ಬ ಚಲಿಸುತ್ತ ಮುಂದೆ ಹೋಗುತ್ತಿರುವಾಗಲೇ ಕಾರು ಚಾಲಕ ಹಿಂದೆ ಮುಂದೆ ನೋಡದೆ ಡೋರ್ ಓಪನ್ ಮಾಡುತ್ತಾನೆ. ಹಟಾತ್ತನೆ ಡೋರ್ ಓಪನ್ ಮಾಡಿದ ಕಾರಣದಿಂದಾಗಿ ಸ್ಕೂಟಿ ನಡೆಸುವ ವ್ಯಕ್ತಿ ಅಲ್ಲಿಯೇ ಕೆಳಗೆ ಸಾವಕಾಶವಾಗಿ ಬೀಳುತ್ತಾನೆ. ಆತನಿಗೆ ಅಷ್ಟೇನು ಗಂಭೀರವಾದ ಪೆಟ್ಟು ಬೀಳುವುದಿಲ್ಲ. ಕಾರು ಚಾಲಕ ತನ್ನ ತಪ್ಪಿನ ಅರಿವಾಗಿ ಬೈಕ್ ಸವಾರನಿಗೆ ಮಾತುಗಳಲ್ಲಿಯೇ ಕ್ಷಮೆ ಕೇಳಿ ಸ್ಕೂಟಿ ಮೇಲೆತ್ತಲು ಸಹಾಯ ಮಾಡುತ್ತಾನೆ. ಕೆಳಗೆ ಬಿದ್ದ ಸ್ಕೂಟಿ ಕಾರು ಚಾಲಕ ಎದ್ದು ನಿಲ್ಲಿಸಿದ ತಕ್ಷಣ ಸ್ಕೂಟಿ ಒಮ್ಮೆಲೆ ಕಾರು ಚಾಲಕನಿಗೆ ತೆಗೆದುಕೊಂಡೆ ಜೋರಾದ ಪಿಕ್ ಅಪ್ ತೆಗೆದುಕೊಳ್ಳುತ್ತದೆ. ನೋಡು ನೋಡುವಷ್ಟರಲ್ಲಿ ಕುದುರೆಯ ಹಾಗೆ ಜಂಪ್ ಮಾಡಿ ಮುಂದೆ ನಿಂತ ಬೇರೆ ಫೋರ್ ವೀಲರ್ ಮೇಲೆ ಅಪ್ಪಳಿಸುತ್ತದೆ. ಅಷ್ಟೇ ಅಲ್ಲ ಕಾರು ಚಾಲಕನಿಗೂ ತನ್ನ ಜೊತೆಗೆ ಎಳೆದುಕೊಂಡು ಹೋಗಿ ನೆಲಕ್ಕೆ ಅಪ್ಪಳಿಸುತ್ತದೆ. ಕಾರು ಚಾಲಕ ತಾನು ಮಾಡಿದ ತಪ್ಪಿಗೆ ಸ್ಕೂಟಿ ಮಾಲಿಕನಿಗೆ ಕ್ಷಮೆಯೇನೋ ಕೇಳಿದ ಆದರೆ ಸ್ಕೂಟಿಗೆ ಮಾತ್ರ ಇದು ಯಾಕೋ ಕೋಪ ತರಿಸಿದೆ ಎನಿಸುತ್ತದೆ. ಹೀಗಾಗಿ ಸ್ಕೂಟಿಯು ಕಾರು ಚಾಲಕ ಮಾಡಿದ ತಪ್ಪಿಗೆ ಸರಿಯಾಗಿ ಶಿಕ್ಷೆ ನೀಡಿತೋ ಏನೋ ಗೊತ್ತಿಲ್ಲ.
ವೀಡಿಯೋ ನೋಡಿ.
View this post on Instagram
ಇನ್ಸ್ಟಾಗ್ರಾಮ್ ನಲ್ಲಿ musaevrustem64 ಹೆಸರಿನ ಐಡಿಯಿಂದ ಶೇರ್ ಆದ ಈ ವಿಡಿಯೋ ಇಲ್ಲಿಯವರೆಗೆ 23.1 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ನೋಡಿ ಮೆಚ್ಚಿದ ನೆಟ್ಟಿಗರು 8 ಲಕ್ಷ 78 ಸಾವಿರ ಜನರು ಲೈಕ್ ಮಾಡಿದ್ದಾರೆ.